ಈರೋಡ್,ಜ.13- ತಮಿಳುನಾಡಿನ ಸತ್ಯಮಂಗಲಂ ಹುಲಿ ಅಭಯಾರಣ್ಯದಲ್ಲಿ ದೇಶಿ ನಿರ್ಮಿತ ಬಾಂಬ್ ನುಂಗಿ ಆನೆ ಮರಿ ಸಾವನ್ನಪ್ಪಿದೆ. ಈ ಸಂಬಂಧ ರೈತನೊಬ್ಬನನ್ನುಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗುಥಿಯಾಲತ್ತೂರ್ ಮೀಸಲು ಅರಣ್ಯಕ್ಕೆ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಎರಡು ವರ್ಷದ ಮರಿ ಮೃತಪಟ್ಟಿರುವುದನ್ನು ಕಂಡು ಅರಣ್ಯ ಪಶುವೈದ್ಯರಿಗೆ ಮಾಹಿತಿ ನೀಡಿದರು. ಆನೆಯ ಸೊಂಡಿಲು ಮತ್ತು ಬಾಯಿಯಲ್ಲಿ ರಕ್ತಸ್ರಾವದ ಗಾಯಗಳು ಕಂಡುಬಂದಿವೆ ಎಂದು ಅವರು ಹೇಳಿದರು.
ಪಶುವೈದ್ಯರು ಶವಪರೀಕ್ಷೆ ನಡೆಸಿ ದೇಶಿ ನಿರ್ಮಿತ ಬಾಂಬ್ ಸೇವಿಸಿದ ನಂತರ ಆನೆ ಸಾವನ್ನಪ್ಪಿದೆ ಎಂದು ಘೋಷಿಸಲಾಗಿದ್ದು, ಆನೆಗಳು ಹೊಲಗಳಿಗೆ ಪ್ರವೇಶಿಸದಂತೆ ತಡೆಯಲು ಬೇಟೆಗಾರ ಅಥವಾ ರೈತ ಬಾಂಬ್ ಎಸೆದಿರಬೇಕು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.
ತನಿಖೆ ವೇಳೆ ಆ ಪ್ರದೇಶದ ರೈತ ಕಾಳಿಮುತ್ತು (43) ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಮರಿ ಆನೆ ಮೃತದೇಹವನ್ನು ಅದೇ ಪ್ರದೇಶದಲ್ಲಿ ಹೂಳಲಾಗಿದೆ
