ಮೈಸೂರು,ಸೆ.21- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಗಳು ಕಳೆದ ರಾತ್ರಿ ದಿಢೀರನೇ ಕಾದಾಟಕ್ಕಿಳಿದಿದ್ದು, ಅರಮನೆಯಿಂದ ಹೊರಬಂದ ಪರಿಣಾಮ ಕೆಲಕಾಲ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಿನ್ನೆ ಸಂಜೆ ತುಂತುರು ಮಳೆಯಿದ್ದ ಕಾರಣ ಆನೆಗಳಿಗೆ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗಿತ್ತು. ಈ ವೇಳೆ 7.45 ರ ಸಮಯದಲ್ಲಿ ಧನಂಜಯ ಹಾಗೂ ಕಂಜನ್ ಆನೆಗಳನಡುವೆ ಕಾದಾಟ ನಡೆದಿದೆ.ಮಾವುತರು ಊಟ ಮಾಡುವ ವೇಳೆ ಆನೆಗಳ ನಡುವೆ ಕಾಳಗ ನಡೆದ ಪರಿಣಾಮ ಆನೆಗಳು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಕಂಜನ್ ಹಾಗೂ ಧನಂಜಯ ಆನೆಗಳು ಹೊರಬಂದಿವೆ.
ಮಾವುತನಿಲ್ಲದೆ ಕಂಜನ್ ಆನೆಯನ್ನು ಅರಮನೆಯಿಂದ ಧನಂಜಯ ಆನೆ ಹೊರಗೆ ಓಡಿಸಿಕೊಂಡು ಬಂದಿದ್ದು, ಕೆಲಕಾಲ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಆನೆಗಳು ದೊಡ್ಡಕೆರೆ ಮೈದಾನದ ಬಳಿ ಬ್ಯಾರಿಕೇಡ್ಗಳನ್ನು ತಳ್ಳಿಕೊಂಡು ರಸ್ತೆಗೆ ಪ್ರವೇಶಿಸಿವೆ. ತಕ್ಷಣ ಮಾವುತರು ಹಾಗೂ ಅರಣ್ಯ ಇಲಾಖಾಽಕಾರಿಗಳು ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಅನಾಹುತ ತಪ್ಪಿದಂತಾಗಿದೆ.ಕೂಡಲೇ ಆನೆಗಳನ್ನು ಅರಮನೆಯೊಳಗೆ ಕರೆದ್ಯೊಯುವಲ್ಲಿ ಮಾವುತರು ಯಶಸ್ವಿಯಾಗಿದ್ದು, ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.