Sunday, September 22, 2024
Homeಜಿಲ್ಲಾ ಸುದ್ದಿಗಳು | District Newsಮಂಡ್ಯ | Mandyaಕೋಮುಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಸಾವು

ಕೋಮುಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಸಾವು

youth who had left the village due to fear of arrest in a communal riot Found Dead

ನಾಗಮಂಗಲ,ಸೆ.22– ಇಲ್ಲಿನ ಕೋಮುಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಕಿರಣ್‌ (27) ಬ್ರೈನ್‌ ಸ್ಟ್ರೋಕ್‌ನಿಂದ ಮೃತಪಟ್ಟ ಘಟನೆ ನಡೆದಿದೆ.ಸೆ. 11 ರ ರಾತ್ರಿ ಘಟನೆ ನಡೆದ ನಂತರ ಗ್ರಾಮ ತೊರೆದಿದ್ದ ಕಿರಣ್‌ಗೆ ನೆನ್ನೆ ಬ್ರೈನ್‌ ಸ್ಟ್ರೋಕ್‌ ಆಗಿತ್ತು. ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಗೆ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈಗಾಗಲೇ ಪ್ರಕರಣ ಸಂಬಂಧ ಎ17 ಆರೋಪಿಯಾಗಿ ಮಂಡ್ಯ ಕಾರಾಗೃಹದಲ್ಲಿರುವ ಮೃತ ಕಿರಣ್‌ ತಂದೆ ಕುಮಾರ್‌ಜೈಲಿನಲ್ಲಿರುವಾಗಲೇ ಇತ್ತ ಮಗ ಕಿರಣ್‌ ಬ್ರೈನ್‌ ಸ್ಟ್ರೋಕ್‌ನಿಂದ ಮೃತಪಟ್ಟಿರುವುದು ಕುಟುಂಬಸ್ಥರ ಸಂಕಟ ಹೇಳತೀರದಾಗಿದೆ.

ನಾಗಮಂಗಲ ಗಲಭೆ ಪ್ರಕರಣ ಸಂಬಂಧ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯವಾಳಿ ಪರಿಶೀಲನೆ ನಡೆಸುತ್ತಿರುವ ತಿಳಿದು ಯುವಕರು ಊರು ತೊರೆದಿದ್ದಾರೆ. ಇತ್ತ ಪೊಲೀಸರು ಯುವಕರು ಊರಿಗೆ ಬರುವುದನ್ನೇ ಕಾಯುತ್ತಿದ್ದಾರೆ.

ಬದರಿಕೊಪ್ಪಲಿನ ಯುವಕರು ಹಾಗೂ ಮುಸ್ಲಿಂ ಪ್ರದೇಶದ ಯುವಕರು ಊರಿಗೆ ಬರಲು ಹೆದರುತ್ತಿದ್ದಾರೆ. ಪೊಲೀಸರು ಆರೋಪಿಗಳನ್ನು ಹುಡುಕಿಕೊಂಡು ಹೋಗಿ ಬಂಧಿಸುತ್ತಿದ್ದಾರೆ. ಇದರಿಂದ ಯುವಕರು ಬಂಧನದ ಭೀತಿಗೆ ಒಳಗಾಗಿದ್ದಾರೆ.

RELATED ARTICLES

Latest News