Tuesday, January 13, 2026
Homeಬೆಂಗಳೂರುಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

Two Nigerian nationals illegally residing in Bengaluru arrested

ಬೆಂಗಳೂರು,ಜ.13- ವೀಸಾ ಅವಧಿ ಮುಗಿದರೂ ತಮ ದೇಶಕ್ಕೆ ಹಿಂದಿರುಗದೆ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಜಿಗಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಡೊವ್ಯಾರೋ ಮತ್ತು ಇಮಾನ್ಯುಯಲ್‌ ನಾಜುಬಿ ಎಂಬುವರನ್ನು ಬಂಧಿಸಿ ಎಫ್‌ಆರ್‌ಆರ್‌ಒ ಮುಂದೆ ಹಾಜರುಪಡಿಸಲಾಗಿದೆ.

ವಿದ್ಯಾರ್ಥಿ ವೀಸಾದಲ್ಲಿ 206 ರಲ್ಲಿ ಭಾರತಕ್ಕೆ ಬಂದಿದ್ದ ಈ ಇಬ್ಬರು ತದನಂತರದಲ್ಲಿ ವೀಸಾ ಅವಧಿ ಮುಗಿದಿದ್ದರೂ ತಮ ದೇಶಕ್ಕೆ ಹಿಂದಿರುಗದೆ, ಬೆಂಗಳೂರಿಗೆ ಬಂದು ಬಾಣಸವಾಡಿ, ಕೆ.ಆರ್‌.ಪುರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ನ ಜಿಗಣಿಯ ಹಾರಗದ್ದೆಗೆ ಬಂದು ಬಾಡಿಗೆಗೆ ಮನೆ ಪಡೆದು ವಾಸವಾಗಿದ್ದರು.

ಇದೀಗ ನೈಜೀರಿಯಾ ಪ್ರಜೆಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದ್ದು, ಎಫ್‌ಆರ್‌ಆರ್‌ಒ ಮುಂದೆ ಅವರೆಲ್ಲರನ್ನೂ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.ಇತ್ತೀಚೆಗೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಹೆಬ್ಬಗೋಡಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 15 ಬಾಂಗ್ಲಾ ಪ್ರಜೆಗಳು ಹಾಗೂ ಇಬ್ಬರು ವಿದೇಶಿಗರನ್ನು ಬಂಧಿಸಿದ್ದಾರೆ.

RELATED ARTICLES

Latest News