Sunday, September 29, 2024
Homeಕ್ರೀಡಾ ಸುದ್ದಿ | Sportsಆರ್‌ಸಿಬಿ ತೊರೆಯಲು ಮುಂದಾಗಿದ್ದರಂತೆ ವಿರಾಟ್‌ ಕೊಹ್ಲಿ

ಆರ್‌ಸಿಬಿ ತೊರೆಯಲು ಮುಂದಾಗಿದ್ದರಂತೆ ವಿರಾಟ್‌ ಕೊಹ್ಲಿ

That time when Virat Kohli hinted of Leaving RCB, also Revealed why he Declined

ನವದೆಹಲಿ, ಸೆ. 24– ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕಳೆದ 17 ಸೀಸನ್‌ನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡುವ ಮೂಲಕ ದಾಖಲೆ ನಿರ್ಮಿಸಿರುವ ವಿರಾಟ್‌ ಕೊಹ್ಲಿ ಅವರು ಆರಂಭದ ಆವೃತ್ತಿಗಳಲ್ಲೇ ತಂಡವನ್ನು ತೊರೆಯಲು ಮುಂದಾಗಿದ್ದೆ ಎಂಬ ಕಹಿ ಸತ್ಯವನ್ನು ವಿರಾಟ್‌ ಕೊಹ್ಲಿ ಹಂಚಿಕೊಂಡಿದ್ದಾರೆ.

ಜಿಯೋ ಸಿನಿಮಾ ಜೊತೆಗೆ ಕನ್ನಡಿಗ, ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪರೊಂದಿಗೆ ನಡೆಸಿದ ಸಂವಾದದಲ್ಲಿ ಕಿಂಗ್‌ ಕೊಹ್ಲಿ ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. `ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದೊಂದಿಗಿನ ಬಾಂಧವ್ಯ ಹಾಗೂ ಜೊತೆಯಾಟ ಗಳನ್ನು ನಾನು ತುಂಬಾ ಆನಂದಿಸುತ್ತೇನೆ. ಆದರೆ ಐಪಿಎಲ್‌ ಟೂರ್ನಿಯ ಆರಂಭಿಕ ಮೂರು ಆವೃತ್ತಿಗಳ ನಂತರ ನಾನು ಬೆಂಗಳೂರು ಫ್ರಾಂಚೈಸಿ ತೊರೆದು ಬೇರೆ ತಂಡದ ಪರ ಆಡಲು ಸಜ್ಜಾಗಿದ್ದೆ. ಆದರೆ ನನ್ನ ಮೇಲೆ ನಂಬಿಕೆ ಇಟ್ಟು ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಮತ್ತೆ ರೀಟೈನ್‌ ಮಾಡಿಕೊಂಡರು’ ಎಂದು ಕೊಹ್ಲಿ ಸಂತಸ ವ್ಯಕ್ತಪಡಿಸಿದರು.

ಆಗಿನ ಆರ್‌ಸಿಬಿ ತಂಡದ ಹೆಡ್‌ಕೋಚ್‌ ಆಗಿದ್ದ ರೇ ಜೆನ್ನಿಂಗ್ಸ್ ಅವರು ನಮ ತಂಡ ನಿಮನ್ನು ರೀಟೈನ್‌ ಮಾಡಿಕೊಳ್ಳಲು ಬಯಸಿದೆ ಎಂದು ಹೇಳಿದ್ದನ್ನು' ಕೊಹ್ಲಿ ಸರಿಸಿದರು. ಆಗ ನಾನು ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಆಡಲು ಬಯಸುತ್ತೇನೆ, ಅಲ್ಲದೆ ಭಾರತ ತಂಡದಲ್ಲೂ ನಾನು ಅದೇ ಕ್ರಮಾಂಕದಲ್ಲಿ ಆಡುತ್ತಿದ್ದೇನೆ ಎಂದು ಹೇಳಿದೆ. ಆಗ ಅವರು ಸರಿ ನೀನು 3ನೇ ಕ್ರಮಾಂಕದಲ್ಲೇ ಬ್ಯಾಟಿಂಗ್‌ ಮಾಡು ಎಂದು ಹೇಳಿದ್ದಲ್ಲದೆ ಹರಾಜಿನಲ್ಲಿ ನನ್ನನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡರು.

ಅದರಿಂದ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಸಾಕಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು’ ಎಂದು ಕೊಹ್ಲಿ ಹೇಳಿದರು.`ಇದು ನಿಜಕ್ಕೂ ನನಗೆ ಸಿಕ್ಕ ದೊಡ್ಡ ಮೌಲ್ಯವಾಗಿದೆ. ನಾನು ಆ ಸಮಯದಲ್ಲಿ ನಾನು ಸೇರಬೇಕೆನಿಸಿದ್ದ ತಂಡದ ಬಗ್ಗೆ ನಾನು ಹೇಳಲು ಬಯಸುವುದಿಲ್ಲ.

ಆದರೆ ಅವರು ನನ್ನ ಮಾತನ್ನು ಕೇಳಲು ಅವರು ಸಿದ್ಧವಿರಲಿಲ್ಲ. ಆಗ ನಾನು ಐಪಿಎಲ್‌ ಟೂರ್ನಿಯಲ್ಲಿ ಕೆಳಕ್ರಮಾಂಕದಲ್ಲಿ (5-6) ಬ್ಯಾಟ್‌ ಬೀಸುತ್ತಿದ್ದೆ, ಆದರೆ ನಾನು ಕಳೆದ ಮೂರು ವರ್ಷಗಳಿಂದ ನಾನು ಆಡುತ್ತಿದ್ದ ತಂಡದಲ್ಲೇ ಅಗ್ರಕ್ರಮಾಂಕದಲ್ಲಿ ಆಡಲು ಅವಕಾಶ ಸಿಕ್ಕಿದಾಗ ನಾನೇಕೆ ಬೇರೆ ಫ್ರಾಂಚೈಸಿ ಪರ ಆಡಲು ಮನಸ್ಸು ಮಾಡಲಿ ಎಂದು ಯೋಚಿಸಿದೆ. ಆಗ ಆ ಫ್ರಾಂಚೈಸಿ ನೀವು ಹರಾಜಿನಲ್ಲಿ ನಿಮ ಹೆಸರು ಸೂಚಿಸುತ್ತೀರಾ ಎಂದು ಕೇಳಿದ್ದರು. ಆದರೆ ನಾನು ಇಲ್ಲ ಆರ್‌ಸಿಬಿ ಫ್ರಾಂಚೈಸಿ ಪರವೇ ಆಡಲು ಇಚ್ಚಿಸುತ್ತೇನೆ ಎಂದು ಹೇಳಿದ್ದೆ’ ಎಂದು ಕೊಹ್ಲಿ ತಿಳಿಸಿದ್ದಾರೆ.

ಆರ್‌ಸಿಬಿ ತಂಡದ ಪರ 3ನೇ ಕ್ರಮಾಂಕದಲ್ಲಿ ಆಡಿದ ವಿರಾಟ್‌ಕೊಹ್ಲಿ 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದು ಇತಿಹಾಸ ಸೃಷ್ಟಿಸಿದರು. 2013ರಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ವಿರಾಟ್‌ಕೊಹ್ಲಿ 2016ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು.

2021ರಲ್ಲಿ ಕ್ಯಾಪ್ಟನ್ಸಿ ತೊರೆದ ವಿರಾಟ್‌, ಕಳೆದ ಮೂರು ಆವೃತ್ತಿಗಳಿಂದ ಫಾಫ್‌ ಡುಪ್ಲೆಸಿಸ್‌‍ ನಾಯಕತ್ವದಲ್ಲಿ ಆಡುತ್ತಿದ್ದೂ 2025ರ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ.ವಿರಾಟ್‌ ಕೊಹ್ಲಿ 252 ಐಪಿಎಲ್‌ ಪಂದ್ಯಗಳಿಂದ 8 ಶತಕ ಹಾಗೂ 55 ಅರ್ಧಶತಕಗಳ ನೆರವಿನಿಂದ 8004 ರನ್‌ ಗಳಿಸಿದ್ದಾರೆ.

RELATED ARTICLES

Latest News