ಬ್ಯಾಂಕಾಕ್, ಸೆ 25 (ಎಪಿ) ಸಲಿಂಗ ವಿವಾಹಕ್ಕೆ ಥೈಲ್ಯಾಂಡ್‌ನಲ್ಲಿ ಅನುಮತಿ ನೀಡಲಾಗಿದೆ.ವಿವಾಹ ಸಮಾನತೆಯ ಮಸೂದೆಯನ್ನು ಥೈ ಸರ್ಕಾರ ಅಧಿಕತವಾಗಿ ಜಾರಿಗೆ ತಂದಿದ್ದು, ಸಲಿಂಗ ದಂಪತಿಗಳು ಕಾನೂನುಬದ್ಧವಾಗಿ ವಿವಾಹವಾಗಲು ಅವಕಾಶ ಮಾಡಿಕೊಡಲಾಗಿದೆ.
ಕಾನೂನನ್ನುಮಹಾರಾಜ ವಜಿರಾಲಾಂಗ್‌ಕಾರ್ನ್ ಅನುಮೋದಿಸಿದ ನಂತರ ರಾಯಲ್ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು 120 ದಿನಗಳಲ್ಲಿ ಜಾರಿಗೆ ಬರಲಿದೆ. ಇದರರ್ಥ ಸಲಿಂಗಿ ಜೋಡಿಗಳು ಮುಂದಿನ ವರ್ಷದ ಜನವರಿಯಲ್ಲಿ ತಮ ವಿವಾಹವನ್ನು ನೋಂದಾಯಿಸಲು ಸಾಧ್ಯವಾಗುತ್ತದೆ, ತೈವಾನ್ ಮತ್ತು ನೇಪಾಳದ ನಂತರ ಸಲಿಂಗ ವಿವಾಹವನ್ನು ಅನುಮತಿಸಲು ಥೈಲ್ಯಾಂಡ್ ಏಷ್ಯಾದಲ್ಲಿ ಮೂರನೇ ಸ್ಥಾನವನ್ನು ಪಡೆಯುತ್ತದೆ.
ಯಾವುದೇ ಲಿಂಗದ ವಿವಾಹ ಪಾಲುದಾರರಿಗೆ ಸಂಪೂರ್ಣ ಕಾನೂನು, ಆರ್ಥಿಕ ಮತ್ತು ವೈದ್ಯಕೀಯ ಹಕ್ಕುಗಳನ್ನು ನೀಡುವ ಮಸೂದೆಯು ಏಪ್ರಿಲ್ ಮತ್ತು ಜೂನ್‌ನಲ್ಲಿ ಕ್ರಮವಾಗಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರಲ್ಲೂ ಅಂಗಿಕಾರಗೊಂಡಿದೆ.
ಎಲ್ಲರ ಪ್ರೀತಿಗೆ ಅಭಿನಂದನೆಗಳು,ಲವ್‌ವಿನ್ಸ್ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸೇರಿಸುವ ಮೂಲಕ ಎಕ್‌್ಸ ನಲ್ಲಿ ಪ್ರಧಾನ ಮಂತ್ರಿ ಪೇಟೊಂಗ್ಟಾರ್ನ್ ಶಿನವತ್ರಾ ಬರೆದಿದ್ದಾರೆ.
ಥೈಲ್ಯಾಂಡ್ ಸ್ವೀಕಾರ ಮತ್ತು ಒಳಗೊಳ್ಳುವಿಕೆಗೆ ಖ್ಯಾತಿಯನ್ನು ಹೊಂದಿದೆ ಆದರೆ ವಿವಾಹ ಸಮಾನತೆಯ ಕಾನೂನನ್ನು ಅಂಗೀಕರಿಸಲು ದಶಕಗಳಿಂದ ಹೆಣಗಾಡಿದೆ. ಥಾಯ್ ಸಮಾಜವು ಹೆಚ್ಚಾಗಿ ಸಂಪ್ರದಾಯವಾದಿ ಮೌಲ್ಯಗಳನ್ನು ಹೊಂದಿದೆ, ಮತ್ತು ಸಲಿಂಗಿ ಸಮುದಾಯದ ಸದಸ್ಯರು ದೈನಂದಿನ ಜೀವನದಲ್ಲಿ ತಾರತಮ್ಯವನ್ನು ಎದುರಿಸುತ್ತಾರೆ ಎಂದು ಹೇಳುತ್ತಾರೆ.
ಬ್ಯಾಂಕಾಕ್ ಡೆಪ್ಯುಟಿ ಗವರ್ನರ್ ಸನೋನ್ ವಾಂಗ್ಸ್ರಾಂಗ್ಬೂನ್ ಅವರು ಕಾನೂನು ಜಾರಿಗೆ ಬಂದ ತಕ್ಷಣ ಸಲಿಂಗ ವಿವಾಹಗಳನ್ನು ನೋಂದಾಯಿಸಲು ನಗರ ಅಧಿಕಾರಿಗಳು ಸಿದ್ಧರಾಗುತ್ತಾರೆ ಎಂದು ಕಳೆದ ವಾರ ಹೇಳಿದ್ದರು. ಶಾಸನವು ಪುರುಷರು ಮತ್ತು ಮಹಿಳೆಯರು ನಂತಹ ಲಿಂಗ-ನಿರ್ದಿಷ್ಟ ಪದಗಳನ್ನು ವೈಯಕ್ತಿಕ ನಂತಹ ಲಿಂಗ-ತಟಸ್ಥ ಪದಗಳೊಂದಿಗೆ ಬದಲಿಸಲು ದೇಶದ ನಾಗರಿಕ ಮತ್ತು ವಾಣಿಜ್ಯ ಕೋಡ್ ಅನ್ನು ತಿದ್ದುಪಡಿ ಮಾಡಿದೆ.