ಬೆಂಗಳೂರು: ಕೇವಲ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನವರಿಗೆ ಮಹಾತ್ಮಾ ಗಾಂಧಿ ಬೇಕು, ಗಾಂಧಿ ರಾಜಕೀಯಕ್ಕೆ, ಪರಮೇಶ್ವರ್ ಅಧಿಕಾರಕ್ಕೆ ಇದು ಕಾಂಗ್ರೆಸ್ ಸಿದ್ಧಾಂತ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತುಮಕೂರು ಮಹಾತ್ಮಾ ಗಾಂಧಿ ಕ್ರೀಡಾಂಗಣಕ್ಕೆ ಪರಮೇಶ್ವರ್ ಹೆಸರು ನೇಮಕ ಮಾಡಿರುವುದನ್ನ ಖಂಡಿಸಿದ್ದಾರೆ. ನರೇಗಾಕ್ಕೆ ಒಂದು ನ್ಯಾಯ, ಸ್ಟೇಡಿಯಂಗೆ ಒಂದು ನ್ಯಾಯವೇ? ಇದೇ ಕಾಂಗ್ರೆಸ್ MNREGA ಯೋಜನೆಯನ್ನು VB- G RAM G ಎಂದು ಮರುನಾಮಕರಣ ಮಾಡಿದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದೆ ಎಂದು ಕಿಡಿಕಾರಿದರು.
ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ಕಾಂಗ್ರೆಸ್ ನವರಿಗೆ ಗಾಂಧಿ ಬೇಕು, ಅಧಿಕಾರದಲ್ಲಿ ಇದ್ದಾಗ ಗಾಂಧೀಜಿ ಬೇಡ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
