ಬರೇಲಿ (ಯುಪಿ),ಅ.3-ಇಲ್ಲಿನ ಹಳ್ಳಿಯೊಂದರ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ. ಸಿರೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಸ್ಫೋಟದಲ್ಲಿ ಘಟಕದ ಸುತ್ತಲಿನ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ.
ಕಾರ್ಖಾನೆಯ ಮಾಲೀಕ ನಾಸಿರ್ ಅವರು ಬೇರೆ ಸ್ಥಳಕ್ಕೆ ಪರವಾನಗಿ ಹೊಂದಿದ್ದರು ಆದರೆ ಘಟನೆ ಸಂಭವಿಸಿದ ಘಟಕ ಅವರಅತ್ತೆಯವರಿಗೆ ಸೇರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಫೋಟದ ಹಿನ್ನೆಲೆಯಲ್ಲಿ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರು ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ, ಸ್ಥಳೀಯ ಸ್ಟೇಷನ್ ಠಾಣೆಯ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ ಮತ್ತು ಸರ್ಕಲ್ ಇನ್‌್ಸಪೆಕ್ಟರ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಾವು ಸ್ಥಳದಿಂದ ಪಟಾಕಿಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದೇವೆ. ಪ್ರಾಥಮಿಕವಾಗಿ ತನಿಖೆಯಲ್ಲಿ ಇಲ್ಲೇ ಸ್ಫೋಟ ಸಂಭವಿಸಿದೆ ಎಂದು ತೋರುತ್ತದೆ.ಉದ್ದೇಶಪೂರ್ವಕ ಕೃತ್ಯವನ್ನು ತಳ್ಳಿಹಾಕಿದ್ದಾರೆ.