ಮುಂಬೈ, ಅ. 3 (ಪಿಟಿಐ) – ಮುಂಬೈ ಮತ್ತು ನವಿ ಮುಂಬೈ ಸಂಪರ್ಕಿಸುವ ಅಟಲ್ ಸೇತು ಸಮುದ್ರ ಸೇತುವೆಯಿಂದ ಹಾರಿ 52 ವರ್ಷದ ಉದ್ಯಮಿ ಆತಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಈ ಘಟನೆ ನಡೆದಿದ್ದು, ಮೂರು ದಿನಗಳಲ್ಲಿ ಅಟಲ್ ಸೇತುವಿಗೆ ಹಾರಿ ಆತಹತ್ಯೆ ಮಾಡಿಕೊಂಡಿರುವ ಎರಡನೇ ಪ್ರಕರಣ ಇದಾಗಿದೆ.
ಉದ್ಯಮಿ ಫಿಲಿಪ್ ಷಾ ಅಟಲ್ ಸೇತು ಮೇಲಿಂದ ಹಾರಿ ತಮ ಜೀವನವನ್ನು ಅಂತ್ಯಗೊಳಿಸಿದರು, ಮಧ್ಯ ಮುಂಬೈನ ಮಾಟುಂಗಾ ನಿವಾಸಿ ಷಾ ಅವರು ತಮ ಸೆಡಾನ್ ಕಾರನ್ನು ಅಟಲ್ ಸೇತು ಮೇಲೆ ಓಡಿಸಿದರು ಮತ್ತು ಅದನ್ನು ಕೆಲವು ಹಂತದಲ್ಲಿ ನಿಲ್ಲಿಸಿ ಸಮುದ್ರಕ್ಕೆ ಹಾರಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೇತುವೆಯ ಮೇಲೆ ಕಾರು ನಿಂತಿರುವುದನ್ನು ಸೇತುವೆಯ ಸಿಸಿಟಿವಿ ನಿಯಂತ್ರಣ ಕೊಠಡಿಯ ಸಿಬ್ಬಂದಿ ಗಮನಿಸಿದರು, ನಂತರ ರಕ್ಷಣಾ ತಂಡಕ್ಕೆ ಎಚ್ಚರಿಕೆ ನೀಡಲಾಯಿತು. ಅದರ ಸಿಬ್ಬಂದಿ ಷಾ ಸಮುದ್ರಕ್ಕೆ ಹಾರಿದ ಸ್ಥಳಕ್ಕೆ ಧಾವಿಸಿದರು. ಶೋಧ ಕಾರ್ಯಾಚರಣೆಯ ನಂತರ ಅವರನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಮತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾರಿನಲ್ಲಿ ಪತ್ತೆಯಾದ ಆಧಾರ್ ಕಾರ್ಡ್‌ನ ಆಧಾರದ ಮೇಲೆ ಮತ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಹೇಳಿದರು, ಸಂತ್ರಸ್ತರು ಸಾಯುವ ಹಿಂದಿನ ಕೆಲವು ದಿನಗಳಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಅವರು ಹೇಳಿದರು.
ನವಿ ಮುಂಬೈನ ನ್ಹವಾ ಶೇವಾ ಪೊಲೀಸ್ ಠಾಣೆಯಲ್ಲಿ ಆಕಸಿಕ ಸಾವಿನ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.
ಮುಂಬೈ ಟ್ರಾನ್‌್ಸ-್‌ಹಾರ್ಬರ್ ಲಿಂಕ್ ಎಂದೂ ಕರೆಯಲ್ಪಡುವ ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು ದಕ್ಷಿಣ ಮುಂಬೈ ಅನ್ನು ಉಪಗ್ರಹ ನಗರವಾದ ನವಿ ಮುಂಬೈನೊಂದಿಗೆ ಸಂಪರ್ಕಿಸುತ್ತದೆ, ಈ ವರ್ಷದ ಜನವರಿಯಲ್ಲಿ ಉದ್ಘಾಟನೆಯಾಯಿತು. ಆರು ಪಥಗಳ ಸೇತುವೆಯು 21.8 ಕಿಮೀ ಉದ್ದವಿದ್ದು, ದೇಶದಲ್ಲೇ ಅತಿ ಉದ್ದದ ಸಮುದ್ರ ಸೇತುವೆ ಎಂದು ಹೇಳಲಾಗುತ್ತದೆ.