Saturday, October 5, 2024
Homeರಾಜ್ಯನನ್ನನ್ನು ಬಂಧಿಸಲು ಸಂಚು ನಡೆದಿದೆ : ಸ್ನೇಹಮಯಿ ಕೃಷ್ಣ ಆರೋಪ

ನನ್ನನ್ನು ಬಂಧಿಸಲು ಸಂಚು ನಡೆದಿದೆ : ಸ್ನೇಹಮಯಿ ಕೃಷ್ಣ ಆರೋಪ

There is a conspiracy to arrest me: Snehamai Krishna alleges

ಮೈಸೂರು,ಅ.5- ನ್ಯಾಯಕ್ಕಾಗಿ ಹೋರಾಟ ಮಾಡುವವರ ಧ್ವನಿಯನ್ನು ಹತ್ತಿಕ್ಕಲು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ನನ್ನನ್ನು ಬಂಧಿಸುವ ಸಂಚೂ ಕೂಡ ನಡೆದಿದೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದ ಅವ್ಯವಹಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ನಡೆಸುತ್ತಿರುವ ತಮ ವಿರುದ್ಧ ನಂಜನಗೂಡು ಪೊಲೀಸ್‌‍ ಠಾಣೆಯಲ್ಲಿ ಸುಳ್ಳು ಮೊಕದ್ದಮೆ ದಾಖಲಿಸಿ ಕಿರುಕುಳ ನೀಡುವ ಪ್ರಯತ್ನಗಳಾಗುತ್ತಿವೆ ಎಂದು ದೂರಿದರು.

ನಂಜನಗೂಡು ಪೊಲೀಸ್‌‍ ಠಾಣೆಯಲ್ಲಿ ತಮ ವಿರುದ್ಧ ಒಂದು ಪ್ರಕರಣ ದಾಖಲಿಸಲಾಗಿದೆ. ಸಮಾಜದಲ್ಲಿ ಹೆಚ್ಚಿನ ಅಪರಾಧ ನಡೆಯಲು ಮತ್ತು ಹೋರಾಟಗಳನ್ನು ಹತ್ತಿಕ್ಕಲು ಪೊಲೀಸ್‌‍ ಇಲಾಖೆ ಮೂಲ ಕಾರಣವಾಗಿದೆ. ಪೊಲೀಸರು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದರೆ ಅರ್ಧ ಭಾಗದಷ್ಟು ಅಪರಾಧಗಳು ಕಡಿಮೆಯಾಗುತ್ತವೆ ಎಂದರು.

ಪೊಲೀಸ್‌‍ ವ್ಯವಸ್ಥೆ ಯಾವ ರೀತಿ ದುರುಪಯೋಗ ವಾಗುತ್ತಿದೆ ಎಂಬುದಕ್ಕೆ ತಮ ಬಳಿ ಸಾಕಷ್ಟು ದಾಖಲೆಗಳಿವೆ. ಯಾರ ವಿರುದ್ಧವಾದರೂ ಸೇಡು ತೀರಿಸಿಕೊಳ್ಳಬೇಕು ಎಂದರೆ ಪೊಲೀಸರಿಗೆ ಲಂಚ ಕೊಟ್ಟು ಒಂದು ಬಿಳಿ ಹಾಳೆಯಲ್ಲಿ ದೂರು ಬರೆದುಕೊಟ್ಟರೆ ಸಾಕು.

ಅದನ್ನು ಇಟ್ಟುಕೊಂಡು ಪೊಲೀಸರು ಸರ್ಕಾರದ ಹಣ ಮತ್ತು ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡಲು ಸರ್ವಾಧಿಕಾರಿಗಳಂತೆ ನಡೆದುಕೊಳ್ಳುತ್ತಾರೆ ಎಂದರು. ಈ ವರ್ಷದ ಜು.18ರಂದು ನಂಜನಗೂಡಿನ ವೃತ್ತದಲ್ಲಿ ತಮಗೆ ಮಾನಹಾನಿಯಾಗುವಂತೆ ನಡೆದುಕೊಂಡಿದ್ದಾರೆ ಎಂದು ನಂಜನಗೂಡು ಪೊಲೀಸ್‌‍ ಠಾಣೆಯಲ್ಲಿ ತಮ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ.

ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ದೂರು ಆಧಾರರಹಿತ ಎಂದು ಗೊತ್ತಾಗುತ್ತಿತ್ತು. ಆದರೆ ಅದನ್ನು ಮಾಡಿಲ್ಲ. ಸತ್ಯಾಂಶವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೇ ಕಾನೂನನ್ನು ಆಟಿಕೆಯಂತೆ ಬಳಕೆ ಮಾಡಿ ನನ್ನನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಸುಳ್ಳು ದೂರು ನೀಡುವವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧವೂ ಪ್ರಕರಣ ದಾಖಲಿಸುವಂತಾಗಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ನಂಜನಗೂಡು ಪೊಲೀಸರಿಗೆ ಸುದೀರ್ಘ ಪತ್ರ ಬರೆದಿದ್ದೇನೆ. 7 ದಿನಗಳಲ್ಲಿ ನನಗೆ ಉತ್ತರ ನೀಡಬೇಕು. ಇಲ್ಲವಾದರೆ ನಾನು ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ನಡೆಸುತ್ತೇನೆ. ಮುಡಾ ಪ್ರಕರಣದಲ್ಲಿ ನಾನು ನ್ಯಾಯಾಲಯದ ಮೊರೆ ಹೋಗುತ್ತಿದ್ದಂತೆ ನನ್ನ ವಿರುದ್ಧ ಸುಳ್ಳು ದೂರು ದಾಖಲಾಗಿದೆ. ಅಲ್ಲಿಂದಲೇ ತಮನ್ನು ಹೆದರಿಸುವ ಪ್ರಯತ್ನಗಳು ಆರಂಭವಾಯಿತು. ಬಂಧಿಸಿದರೆ ನ್ಯಾಯಾಲಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಈವರೆಗೂ ಸುಮನಿದ್ದಾರೆ ಎಂದರು.

ಮುಡಾ ಹಗರಣದಲ್ಲಿ ಈಗಾಗಲೇ ಜಮೀನಿನ ಸ್ಥಳ ಪರಿಶೀಲನೆಗಳಾಗಿವೆ. ಇಂದಿನಿಂದ ಮುಡಾದಿಂದ ದಾಖಲೆಗಳ ಸಂಗ್ರಹ ಆರಂಭವಾಗಿದೆ. ಈವರೆಗಿನ ಮಹಜರು ಪ್ರಕರಣಗಳು ತೃಪ್ತಿ ನೀಡಿವೆ. ಮುಂದಿನ ತನಿಖೆಯ ಕುರಿತು ಕಾದುನೋಡುವುದಾಗಿ ಹೇಳಿದರು.

RELATED ARTICLES

Latest News