Monday, November 25, 2024
Homeರಾಷ್ಟ್ರೀಯ | Nationalಕಾಂಗ್ರೆಸ್ ಪರ ಸಮೀಕ್ಷೆಗಳು ಬಹುಪರಾಕ್, ಹರಿಯಾಣದಲ್ಲಿ ಸಿಎಂ ಸ್ಥಾನಕ್ಕೆ ಪೈಫೋಟಿ ಶುರು

ಕಾಂಗ್ರೆಸ್ ಪರ ಸಮೀಕ್ಷೆಗಳು ಬಹುಪರಾಕ್, ಹರಿಯಾಣದಲ್ಲಿ ಸಿಎಂ ಸ್ಥಾನಕ್ಕೆ ಪೈಫೋಟಿ ಶುರು

Exit polls intensify CM race in Cong

ಚಂಡೀಗಢ,ಅ.6- ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಪರ ಬರುತ್ತಿದ್ದಂತೆ ಕೈ ಪಾಳಯದಲ್ಲಿ ಈಗಲೇ ಹಲವು ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಪೈಫೋಟಿ ಆರಂಭಿಸಿದ್ದಾರೆ.ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಶನಿವಾರ ಮತದಾನ ನಡೆದಿದ್ದು, ಒಂದು ದಶಕದ ನಂತರ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಜನಾದೇಶ ಪಡೆದು ಅಧಿಕಾರ ಹಿಡಿಯುವುದು ಖಚಿತ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 90ರಲ್ಲಿ 59 ಸ್ಥಾನಗಳನ್ನು ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 21 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಧ್ರುವ್ ರಿಸರ್ಚ್ ಪ್ರಕಾರ, ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟ 57 ಸ್ಥಾನಗಳನ್ನು ಮತ್ತು ಎನ್ಡಿಎ ಮೈತ್ರಿಕೂಟ 27 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಅಲ್ಲದೆ, ಇತರೆ ಪಕ್ಷಗಳು 0ರಿಂದ 6 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಸಿಎನ್ಎನ್ 24ನ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಇಂಡಿಯಾ ಮೈತ್ರಿಕೂಟವು 59 ಸ್ಥಾನಗಳನ್ನು ಮತ್ತು ಓಆಂ ಮೈತ್ರಿಕೂಟವು ರಾಜ್ಯದಲ್ಲಿ 21 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅಲ್ಲದೆ ಇತರೆ ಪಕ್ಷಗಳು 10 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಎಕ್ಸಿಟ್ ಪೋಲ್ ಕಾಂಗ್ರೆಸ್ ಪರ ಬರುತ್ತಿದ್ದಂತೆ ಕೈ ಪಾಳಯದಲ್ಲಿ ಈಗಲೇ ಹಲವು ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಪೈಫೋಟಿ ತೆರೆಮರೆಯಲ್ಲಿ ಶುರು ಮಾಡಿದ್ದಾರೆ.

ಭೂಪಿಂದರ್ ಸಿಂಗ್ ಹೂಡಾ:
ಸಿಎಂ ಪಟ್ಟಿಯಲ್ಲಿ ಕೇಳಿ ಬರುತ್ತಿರುವ ಮೊದಲ ಹೆಸರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರದ್ದು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದಾರೆ. ಇದಲ್ಲದೇ 2005ರಿಂದ 2014ರವರೆಗೆ ಎರಡು ಬಾರಿ ಸಿಎಂ ಆಗಿದ್ದರು. ಮುಖ್ಯಮಂತ್ರಿ ಸ್ಥಾನದ ಫೈಟ್ ಬಗ್ಗೆ ಮಾತನಾಡಿದ ಅವರು, ನಾನು ಇನ್ನೂ ನಿವೃತ್ತಿ ಆಗಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಸರ್ಕಾರ ರಚನೆ ಮಾಡಲಿದೆ, ಇದಲ್ಲದೇ ಮುಖ್ಯಮಂತ್ರಿ ಯಾರಾಗಬೇಕೆಂದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ

ಶೈಲಜಾ ಸುಂದರಿ:
ಸಿಎಂ ರೇಸ್ನಲ್ಲಿರುವ ಮತ್ತೋರ್ವ ಪ್ರಬಲ ಪೈಪೋಟಿಯ ಹೆಸರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಮತ್ತು ಸಿರ್ಸಾದ ಸಂಸದೆ ಕುಮಾರಿ ಶೈಲಜಾ ಅವರು. ಇವರು ಪ್ರಮುಖ ದಲಿತ ನಾಯಕಿಯಾಗಿದ್ದು, ಗಾಂಧಿ ಕುಟುಂಬಕ್ಕೆ ತುಂಬಾ ಆಪ್ತರೂ ಆಗಿದ್ದಾರೆ. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಇವರು ತಮಗೆ ನೀಡಿದ ಜವಾಬ್ಬಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಸಿಎಂ ರೇಸ್ ಬಗ್ಗೆ ತಮ ಹಕ್ಕೊತ್ತಾಯವನ್ನು ಮಂಡಿಸಿದ ಕುಮಾರಿ ಶೈಲಜಾ ಅವರು, ಕಾಂಗ್ರೆಸ್ ನನ್ನ ಅನುಭವ ಮತ್ತು ಪಕ್ಷದ ಬಗ್ಗೆ ನನ್ನ ಪ್ರಶ್ನಾತೀತ ನಿಷ್ಠೆಯನ್ನು ತಿರಸ್ಕರಿಸಲು ಸಾಧ್ಯವಿಲ್ಲ, ನಾನು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತೆ ಮತ್ತು ಯಾವಾಗಲೂ ಹಾಗೆಯೇ ಇರುತ್ತೇನೆ. ಕಾಂಗ್ರೆಸ್ನಲ್ಲಿ ಸಿಎಂ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದನ್ನು ಹೈಕಮಾಂಡ್ ಮಾಡುತ್ತದೆೞ ಎಂದು ಹೇಳಿದ್ದಾರೆ.

ದೀಪೇಂದ್ರ ಹೂಡಾ:
ಒಂದು ವೇಳೆ ಭೂಪಿಂದರ್ ಸಿಂಗ್ ಹೂಡಾ ಮುಖ್ಯಮಂತ್ರಿ ಸ್ಥಾನದ ರೇಸ್ನಿಂದ ಹೊರಗುಳಿದಿದರೆ ಅವರ ಪುತ್ರ ದೀಪೇಂದ್ರ ಹೂಡಾ ಅವರ ಹೆಸರನ್ನು ಮುಂದಿಡುವ ಸಾಧ್ಯತೆಯ ಬಗ್ಗೆ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ. ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಕುಮಾರಿ ಶೈಲಜಾ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, ಕಾಂಗ್ರೆಸ್ನಲ್ಲಿ ಇದಕ್ಕೆ ಪ್ರಕ್ರಿಯೆ ಇದೆ, ಬಹುಮತ ಪಡೆದು ಸರ್ಕಾರ ರಚನೆ ಮಾಡುವುದು ಪಕ್ಷದ ಮೊದಲ ಆದ್ಯತೆ. ಮುಖ್ಯಮಂತ್ರಿ ಹೆಸರಿಗೆ ಸಂಬಂಧಿಸಿದಂತೆ ಪಕ್ಷವು ಹೈಕಮಾಂಡ್ ಮಟ್ಟದಲ್ಲಿ ಸಭೆಯನ್ನು ನಡೆಸುತ್ತದೆ, ಇದರಲ್ಲಿ ಚುನಾಯಿತ ಶಾಸಕರನ್ನು ಸಮಾಲೋಚಿಸಲಾಗುತ್ತದೆ ಮತ್ತು ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ದೀಪೇಂದ್ರ ಹೂಡಾ ಹೇಳಿದ್ದಾರೆ.

ರಣದೀಪ್ ಸಿಂಗ್ ಸುರ್ಜೆವಾಲಾ:
ರಣದೀಪ್ ಸಿಂಗ್ ಸುರ್ಜೇವಾಲಾ ಹೆಸರಿನ ಚರ್ಚೆಯೂ ಸಿಎಂ ಸ್ಥಾನದ ರೇಸ್ನಲ್ಲಿ ಮುನ್ನೆಲೆಗೆ ಬಂದಿದೆ. ತವರು ಕ್ಷೇತ್ರ ಕೈತಾಲ್ನಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ರಾಜ್ಯಸಭಾ ಸಂಸದ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಱಸಿಎಂ ಆಗುವ ಮಹತ್ವಾಕಾಂಕ್ಷೆ ಇರುವುದು ತಪ್ಪಲ್ಲ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೈಗೊಂಡಿರುವ ನಿರ್ಧಾರವನ್ನು ನಾವು ಒಪ್ಪುತ್ತೇವೆ ಎಂದು ಹೇಳಿದ್ದಾರೆ.

ಉದಯ್ ಭಾನ್:
ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಮತ್ತು ದಲಿತ ನಾಯಕ ಉದಯ್ ಭಾನ್ ಕೂಡ ಸಿಎಂ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರು ಎಂದು ಪಕ್ಷದ ಮೂಲಗಳು ಹೇಳುತ್ತವೆ. ಅವರನ್ನು ಭೂಪಿಂದರ್ ಸಿಂಗ್ ಹೂಡಾಗೆ ನಿಕಟವಾಗಿರುವ ನಾಯಕರ ಎಂದು ಪರಿಗಣಿಸಲಾಗಿದೆ. ದೆಹಲಿಯಲ್ಲಿ ನಡೆದ ಎಐಸಿಸಿ ನಾಯಕರ ಜತೆಗಿನ ಸಭೆಯಲ್ಲಿ ಅವರು ರಾಜ್ಯದಲ್ಲಿ ದಲಿತರ ಮುಖವನ್ನು ಮುಂದಿಡುವ ಬಗ್ಗೆ ಮಾತನಾಡಿದ್ದಾರೆ.

RELATED ARTICLES

Latest News