Sunday, October 6, 2024
Homeರಾಜಕೀಯ | Politicsಸಿಎಂ ಸಿದ್ದರಾಮಯ್ಯಗೆ 'ಮುಕ್ತ ಚರ್ಚೆ'ಯ ಸವಾಲ್ ಹಾಕಿದ ಕೇಂದ್ರ ಸಚಿವ ಕುಮಾರಸ್ವಾಮಿ

ಸಿಎಂ ಸಿದ್ದರಾಮಯ್ಯಗೆ ‘ಮುಕ್ತ ಚರ್ಚೆ’ಯ ಸವಾಲ್ ಹಾಕಿದ ಕೇಂದ್ರ ಸಚಿವ ಕುಮಾರಸ್ವಾಮಿ

Union Minister Kumaraswamy challenged CM Siddaramaiah

ಬೆಂಗಳೂರು,ಅ.6-ಕಾಂಗ್ರೆಸ್‌‍-ಜೆಡಿಎಸ್‌‍ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ನಾನು 14 ತಿಂಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಕಾಂಗ್ರೆಸ್‌‍ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 15 ತಿಂಗಳಲ್ಲಿ ಏನು ಮಾಡಿದ್ದಾರೆ ಎಂಬ ಬಗ್ಗೆ ಮುಕ್ತ ಚರ್ಚೆ ಮಾಡಲು ಸಿದ್ಧ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ ಪಕ್ಷದ 38 ಶಾಸಕರು ಆಗಿದ್ದರು. ಕಾಂಗ್ರೆಸ್‌‍ ಪೂರ್ಣ ಸಹಕಾರ ನೀಡದಿದ್ದರೂ ಉತ್ತಮ ಆಡಳಿತ ಕೊಟ್ಟಿದ್ದೇನೆ. ಪೂರ್ಣ ಬಹುಮತವಿರುವ ಕಾಂಗ್ರೆಸ್‌‍ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂಬುದರ ಚರ್ಚೆಯಾಗಲಿ ಎಂದರು.

ಕೊಟ್ಟ ಕುದರೆಯನ್ನು ಏರಿಲರಿಯದವರು ಎಂದು ಹಂಗಿಸುತ್ತಾರೆ. ನನಗೆ ಯಾವ ಕುದುರೆ ಕೊಟ್ಟಿದ್ದರು? ಎಂದು ಪ್ರಶ್ನಿಸಿದರು. ಮಾತು ಮಾತಿಗೆ ಹೊಟ್ಟೆ ಉರಿ ಎಂದು ಹೇಳುತ್ತಾರೆ. ಗೌರವಯುತವಾಗಿ ಮನೆಯಲ್ಲಿದ್ದ ಮಡದಿ ಅವರನ್ನು ಹೊರಗೆ ತರುವ ಕೆಲಸ ಮಾಡಿದವರು ವಿರೋಧ ಪಕ್ಷದವರಲ್ಲ ನೀವು ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

ಮಾತೆತ್ತಿದರೆ ಅಹಿಂದ ಎಂದು ಹೇಳುತ್ತೀರಿ. ಅಹಿಂದಕ್ಕೆ ಏನು ಮಾಡಿದ್ದೀರಿ? ವಾಲೀಕಿ ನಿಗಮದಲ್ಲಿ ಲೂಟಿ ಹೊಡೆದಿರುವುದು ಗೊತ್ತಿಲ್ಲವೇ ಎಂದು ವಾಗ್ದಾಳಿ ನಡೆಸಿದರು.ಮುಂಗಾರು ಮಳೆ ಉತ್ತಮವಾಗಿ ಬಿದ್ದರೂ ಕೆರೆಕಟ್ಟೆಗಳಿಗೆ ನೀರು ತುಂಬಿಸಿಲ್ಲ. ಮಳವಳ್ಳಿ ಭಾಗದಲ್ಲಿ ನೀರು ಬಿಡದೆ ಬಿತ್ತನೆ ಮಾಡಲು ಅವಕಾಶ ರೈತರಿಗೆ ಸಿಕ್ಕಿಲ್ಲ. ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ ಎಂದು ಆರೋಪಿಸಿದರು.

ಜನರು ವಿರೋಧ ಪಕ್ಷಗಳನ್ನು ಕ್ಷಮಿಸುತ್ತಾರೋ, ಒಪ್ಪುತ್ತಾರೋ ಅದರ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ನನ್ನನ್ನು ಏನು ಮಾಡುತ್ತೀರಿ ಎಂದು ಆರೋಪ ಹೊತ್ತಿರುವ ಸಿದ್ದರಾಮಯ್ಯ ಕೇಳಲಿ ಎಂದು ಟಾಂಗ್‌ ಕೊಟ್ಟರು. ಇಷ್ಟು ದಿನ ಅನುಷ್ಠಾನ ಮಾಡದವರು ಈಗ ಜಾತಿ ಗಣತಿ ಅನುಷ್ಠಾನ ಮಾಡುವ ಮಾತನಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಲಾಭವಷ್ಟೇ ಇದೆ ಎಂದು ಆರೋಪಿಸಿದರು.

ಕಾಂಗ್ರೆಸ್‌‍ ಸರ್ಕಾರ ಯಾವುದೇ ರೀತಿಯ ಜನರ ಸಮಸ್ಯೆಗೆ ಸ್ಪಂದಿಸದೆ ಆಡಳಿತದಲ್ಲಿ ನಿತ್ಯ ವೈಫಲ್ಯ ಕಾಣುತ್ತಿದೆ. ಎರಡುಮೂರು ದಿನಗಳಿಂದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ನಿನ್ನೆ ರಾತ್ರಿ ಬಿದ್ದ ಮಳೆಗೆ ಹಲವು ಭಾಗಗಳಲ್ಲಿ ಎರಡುಮೂರು ಸಾವಿರ ಕುಟುಂಬಗಳು ಜಾಗರಣೆ ಮಾಡಿವೆ. ಮನೆಗಳಿಗೆ ನೀರು ನುಗ್ಗಿದೆ. ಅನಾಹುತ ಉಂಟಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು ಗಡುವು ನೀಡಿದ ಡಿ.ಕೆ.ಶಿವಕುಮಾರ್‌ ಹಾರೆ ಹಿಡಿದು, ಅಗೆದು ಗುಣಾತಕ ಕೆಲಸ ಎಂದು ಹೇಳಿದ್ದಾರೆ. ಮಳೆಯಿಂದ ಏನಾಗಿದೆ ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ಕೇವಲ ಬೆಂಗಳೂರುನಗರ ಮಾತ್ರವಲ್ಲ ರಾಜ್ಯದ ಹಲವಾರು ಭಾಗಗಳಲ್ಲಿ ನಿರೀಕ್ಷೆಗಿಂತ ಮಳೆ ಹೆಚ್ಚಾಗಿದೆ. ಬೆಳೆ ನಷ್ಟ ಉಂಟಾಗಿ ರೈತರು, ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಸರ್ಕಾರ ಹಗರಣಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಮುಖ್ಯಮಂತ್ರಿಯಾದಿಯಾಗಿ ಯಾವುದೇ ಸಚಿವರಿಗೆ ಜನರ ಸಮಸ್ಯೆ ಬಗೆಹರಿಸುವ ಚಿಂತನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News