Friday, November 22, 2024
Homeರಾಜ್ಯಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರನ ಮೃತದೇಹ ಪತ್ತೆ

ಮಾಜಿ ಶಾಸಕ ಮೊಯಿದ್ದೀನ್‌ ಬಾವ ಸಹೋದರನ ಮೃತದೇಹ ಪತ್ತೆ

ಬೆಂಗಳೂರು, ಅ.7- ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್‌ ಬಾವ ಅವರ ಸಹೋದರ, ಉದ್ಯಮಿ ಮುಮ್ತಾಜ್‌ ಅಲಿ(52) ಅವರು ನದಿಗೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಮುಮ್ತಾಜ್‌ ಅಲಿ ಅವರ ಶವ ಫಲ್ಗುಣಿ ನದಿಯ ಕೂಳೂರು ಸೇತುವೆ ಬಳಿ ಪತ್ತೆಯಾಗಿದೆ.

ಮುಮ್ತಾಜ್‌ ಅಲಿ ಅವರು ಶಿಕ್ಷಣ ಸಂಸ್ಥೆಗಳು ಹಾಗೂ ಹಲವು ಉದ್ಯಮಗಳನ್ನು ನಡೆಸುತ್ತಿದ್ದರಲ್ಲದೆ, ವಿವಿಧ ಸಂಘ ಸಂಸ್ಥೆಗಳಿಗೆ ಸದಸ್ಯರಾಗಿದ್ದರು. ಅಲ್ಲದೆ ಮುಸ್ಲಿಂ ಸಮುದಾಯದ ಪ್ರಮುಖರಾಗಿದ್ದರು. ಬ್ಲಾಕ್‌ಮೇಲ್‌ ಹಾಗೂ ಹನಿಟ್ರಾಪ್‌ನಿಂದ ಅಲಿ ಅವರು ಆತಹತ್ಯೆ ಮಾಡಿಕೊಂಡಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿನ್ನೆ ಮುಂಜಾನೆ 3ಗಂಟೆ ಸುಮಾರಿನಲ್ಲಿ ಮುಮ್ತಾಜ್‌ ಅಲಿ ಅವರು ತಮ ಬಿಎಂಡಬ್ಲ್ಯೂ ಕಾರು ತೆಗೆದುಕೊಂಡು ಮನೆಯಿಂದ ಹೊರಟು ಸ್ನೇಹಿತರಿಗೆ ಹಾಗೂ ತಮ ಪುತ್ರಿಗೆ ನಾನು ಬದುಕಿ ಉಳಿಯಲ್ಲ, ದೇವರ ಬಳಿ ಹೋಗುತ್ತಿದ್ದೇನೆ ಎಂದು ಬ್ಯಾರಿ ಭಾಷೆಯಲ್ಲಿ ವಾಟ್ಸಾಪ್‌ ಮಾಡಿದ್ದಾರೆ.

ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಮಂಗಳೂರಿನಿಂದ ಪಣಂಬೂರಿಗೆ ಬಂದಿದ್ದಾರೆ. ಅಲ್ಲಿಂದ ಕೂಳೂರು ಹೈವೇಯಲ್ಲಿ ಹೋಗುತ್ತಿದ್ದಾಗ ಖಾಸಗಿ ಬಸ್‌‍ಗೆ ಡಿಕ್ಕಿ ಹೊಡೆದ ರಭಸಕ್ಕೆ ನಂಬರ್‌ ಪ್ಲೇಟ್‌ ಬಿದ್ದಿದೆ. ಮುಮ್ತಾಜ್‌ ಅಲಿ ಅವರು ಕಾರನ್ನು ನಿಲ್ಲಿಸದೆ ಯೂಟರ್ನ್‌ ತೆಗೆದುಕೊಂಡು ಕೂಳೂರು ಸೇತುವೆ ಮಧ್ಯ ಬಂದು ತಮ ಕಾರನ್ನು ನಿಲ್ಲಿಸಿ ಪಲ್ಗುಣಿ ನದಿಗೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಮಂಗಳೂರು ನಗರ ಪೊಲೀಸ್‌‍ ಆಯುಕ್ತ ಅನೂಪ್‌ ಅಗರ್‌ವಾಲ್‌ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದರಾದರೂ ಮುಮ್ತಾಜ್‌ ಅಲಿ ಅವರ ಮಾಹಿತಿ ಲಭ್ಯವಾಗಿರಲಿಲ್ಲ.

ನಂತರ ನುರಿತ ಈಜು ತಜ್ಞರು, ಕೋಸ್ಟಲ್‌ಗಾರ್ಡ್‌, ಎನ್‌ಡಿಆರ್‌ಎಫ್‌, ಎಸ್‌‍ಟಿಆರ್‌ಎಫ್‌ನಿಂದ ಸತತ 28ಗಂಟೆಗಳ ಕಾಲ ಪಲ್ಗುಣಿ ನದಿಯಲ್ಲಿ ಹುಡುಕಾಟ ನಡೆಸಿದಾಗ ಇಂದು ಬೆಳಿಗ್ಗೆ ಮುಮ್ತಾಜ್‌ ಅಲಿ ಅವರ ಮೃತದೇಹ ಪತ್ತೆಯಾಗಿದೆ. ಮುಮ್ತಾಜ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಬಗ್ಗೆ ಕಾವೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆೆ.

RELATED ARTICLES

Latest News