ಬೆಂಗಳೂರು,ಅ.7- ಜಾತಿ ಜನಗಣತಿ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗಿಂತ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ರಾಜ್ಯದಲ್ಲಿ ನಡೆದಿರುವ ವರದಿ ಕುರಿತು ಇಲ್ಲಿನ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಜಾತಿ ಜನಗಣತಿಯಾಗಬೇಕು ಎಂಬ ನಿಲುವನ್ನು ಹೊಂದಿದೆ. ಈ ಬಗ್ಗೆ ಹಲವು ಬಾರಿ ಹೇಳಿಕೆಗಳನ್ನು ನೀಡಲಾಗಿದ್ದು, ರಾಜ್ಯಗಳಿಗೂ ತನ್ನ ಅಭಿಪ್ರಾಯವನ್ನು ರವಾನೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಿರುವ ಸಮೀಕ್ಷಾ ವರದಿಯ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಖರ್ಗೆಯವರು ರಾಜ್ಯಸರ್ಕಾರವೇ ಈ ಕುರಿತು ಉತ್ತರ ನೀಡಬೇಕು ಎಂದು ಹೇಳಿ ಜಾರಿಕೊಂಡರು.
ಇತ್ತೀಚೆಗೆ ನಡೆದ ಜಮು-ಕಾಶೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ನಾವು ಹೇಳುತ್ತಿದ್ದೆವು. ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಜಮು-ಕಾಶೀರದಲ್ಲಿ ನ್ಯಾಶನಲ್ ಕಾನ್ಫರೆನ್‌್ಸ (ಎನ್‌ಸಿ) ಪಕ್ಷದ ಮೈತ್ರಿಯೊಂದಿಗೆ ಸಮಿಶ್ರ ಸರ್ಕಾರ ರಚಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.