Wednesday, January 14, 2026
Homeಬೆಂಗಳೂರುಬೆಂಗಳೂರಲ್ಲಿ ಗ್ಯಾಂಗ್‌ ಫೈಟ್‌ಗೆ ಅವಕಾಶವಿಲ್ಲ : ಪೊಲೀಸ್ ಆಯುಕ್ತರ ಎಚ್ಚರಿಕೆ

ಬೆಂಗಳೂರಲ್ಲಿ ಗ್ಯಾಂಗ್‌ ಫೈಟ್‌ಗೆ ಅವಕಾಶವಿಲ್ಲ : ಪೊಲೀಸ್ ಆಯುಕ್ತರ ಎಚ್ಚರಿಕೆ

No gang fight allowed in Bengaluru: Police Commissioner warns

ಬೆಂಗಳೂರು, ಜ.14- ನಗರದಲ್ಲಿ ಗ್ಯಾಂಗ್‌ ಫೈಟ್‌ಗೆ ಅವಕಾಶ ಕೊಡುವುದಿಲ್ಲ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಇಂದಿಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡೇಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.

ಕೊಲೆಯಾಗಿರುವ ವ್ಯಕ್ತಿ ಹಳೇ ಆರೋಪಿ. ಎರಡು- ಮೂರು ದಿನಗಳ ಹಿಂದೆ ವೈಯಕ್ತಿಕ ದ್ವೇಷದಿಂದ ಹಳೇ ಆರೋಪಿ ಹಾಗೂ ಇತರರ ನಡುವೆ ಜಗಳವಾಗಿದ್ದು, ಕೊಲೆಗೆ ದ್ವೇಷವೇ ಕಾರಣವೆಂಬು ವುದು ತನಿಖೆಯಿಂದ ಗೊತ್ತಾಗಿದೆ. ಸದ್ಯಕ್ಕೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ನಮ ಪೊಲೀಸರ ಕರ್ತವ್ಯ ವೈಫಲ್ಯ ಕಂಡು ಬಂದರೆ ಅವರ ಮೇಲೂ ಸಹ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಅವರು ತಿಳಿಸಿದರು. ಮಾದಕ ವಸ್ತು ಸಾಗಾಣೆ ಮತ್ತು ಮಾರಾಟ ಮಾಡುವವರು ಯಾರೇ ಆದರೂ ಸಹ ಅವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

RELATED ARTICLES

Latest News