ನವದೆಹಲಿ, ಅ.8– ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ರನ್ ಔಟ್ ಆಗಿದ್ದ ಯುವ ಆಟಗಾರ, ತಮ್ಮ ಶಿಷ್ಯ ಅಭಿಷೇಕ್ ಶರ್ಮಾಗೆ ವಿಶ್ವಕಪ್ ವಿಜೇತ ಆಟಗಾರ ಯುವರಾಜ್‍ಸಿಂಗ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಗ್ವಾಲಿಯರ್ ನಡೆದಿದ್ದ ಮೊದಲ ಪಂದ್ಯದಲ್ಲಿ 7 ಎಸೆತದಲ್ಲಿ 2 ಬೌಂಡರಿ ಹಾಗೂ 1 ಸಿಕ್ಸ್ ಸಹಿತ 16 ರನ್ ಗಳಿಸಿ ಸೋಟಕ ಲಯದಲ್ಲಿದ್ದ ಅಭಿಷೇಕ್ ಶರ್ಮಾ, ವಿಕೆಟ್ ಕೀಪರ್ ಸಂಜುಸ್ಯಾಮ್ಸನ್ ಜೊತೆಗೆ ಸರಿಯಾದ ಸಂಯೋಜನೆ ಇಲ್ಲದೆ ರನ್ ಔಟ್ ಆಗಿದ್ದರು.
ಇದರಿಂದ ಬೇಸತ್ತ ಯುವರಾಜ್, ಸರಿಯಾಗಿ ಬುದ್ಧಿ ಉಪಯೋಗಿಸಿ ಆಟವಾಡು ಎಂದು ಪ್ರೀತಿಯ ಶಿಷ್ಯನಿಗೆ ನಯವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.