Saturday, October 19, 2024
Homeರಾಷ್ಟ್ರೀಯ | Nationalಏಕರೂಪ ನಾಗರಿಕ ಸಂಹಿತೆಗೆ ಅಂತಿಮ ಮುದ್ರೆ

ಏಕರೂಪ ನಾಗರಿಕ ಸಂಹಿತೆಗೆ ಅಂತಿಮ ಮುದ್ರೆ

Uttarakhand panel frames UCC rules,

ಡೆಹ್ರಾಡೂನ್ (ಉತ್ತರಾಖಂಡ), ಅ.9- ಏಕರೂಪ ನಾಗರಿಕ ಸಂಹಿತೆಯ ನಿಯಮಗಳ ಕುರಿತ ರಚನೆ ಮಾಡಿರುವ ಸಮಿತಿಯು ಅಂತಿಮ ಮುದ್ರೆ ಒತ್ತಿದ್ದು, ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಅನುಷ್ಠಾನಕ್ಕೆ ಮಾರ್ಗವನ್ನು ಸುಗಮಗೊಳಿಸಿದೆ.

ಈ ಬಗ್ಗೆ ಮಾತನಾಡಿರುವ ಉತ್ತರಾಖಂಡ ಯೂನಿ-ಆರ್ಮಿ ಸಿವಿಲ್ ಕೋಡ್ ನಿಯಮಗಳ ಸಮಿತಿ ಅಧ್ಯಕ್ಷ ಶತ್ರುಘ್ನ ಸಿಂಗ್, ಯುಸಿಸಿ ನಿಯಮಗಳಿಗೆ ಅಂತಿಮ ಮುದ್ರೆ ಹಾಕಲಾಗಿದೆ ಮತ್ತು ಮುಂದಿನ ವಾರ ಅಥವಾ ಹತ್ತು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವರದಿಯನ್ನು ಸಲ್ಲಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆಯು ಈಗಾಗಲೇ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಅಂಗೀಕರಿಸಿತ್ತು. ಆ ಬಳಿಕ ನಿಯಮಗಳ ರಚನೆ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯ ಮೊದಲ ಸಭೆ – ಪ್ರೆಬ್ರವರಿ ಕೊನೆಯ ವಾರದಲ್ಲಿ ನಡೆದಿದ್ದು, ಇದೀಗ ಅಂತಿಮ ಸಭೆ ನಡೆಸಿ, ಏಕರೂಪ ನಾಗರಿಕ ಸಂಹಿತೆಯ ನಿಯಮಗಳಿಗೆ ಅನುಮೋದನೆ ನೀಡಲಾಗಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಯುಸಿಸಿ ಕೋಡ್ ಮಾಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ

ಸರಕಾರಿ ಕಚೇರಿಗೆ ಭೇಟಿ ನೀಡದೇ ಯುಸಿಸಿ ವೆಬ್ ಪೋರ್ಟಲ್ ಅಥವಾ ಆಪ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರಾಖಂಡ ಯುಸಿಸಿಯ ನಿಯಮಗಳ ರಚನೆಗೆ ಸಂಬಧಿಸಿದ ಪರಿಶೀಲನಾ ಸಭೆಯು ಬಿಜಾಪುರ ಅತಿಥಿ ಗೃಹದಲ್ಲಿ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಮತ್ತು ಯುಸಿಸಿ ಸಮಿತಿಯ ಸದಸ್ಯ ಶತ್ರುಘ್ನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತ್ತು.

ಗೃಹ, ಪೊಲೀಸ್, ಆರೋಗ್ಯ, ಅಬಕಾರಿ, ಅಲ್ಪಸಂಖ್ಯಾತ, ಸಂಸ್ಕೃತಿ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ಯೋಜನೆ ಮತ್ತು ಹಣಕಾಸು ಇಲಾಖೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಉತ್ತರಾಖಂಡ ಯುಸಿಸಿಯ ನಿಯಮಗಳನ್ನು ರೂಪಿಸಲು ಸಂಬಧಿಸಿದ ವಿವಿಧ ಅಂಶಗಳ ಬಗ್ಗೆ ಈ ಸಭೆಯಲ್ಲಿ ಕೂಲಂಕಷವಾಗಿ ಚರ್ಚೆ ನಡೆಸಲಾಗಿತ್ತು.

ರಾಧಾ ರತುರಿ ಮತ್ತು ಶತ್ರುಘ್ನ ಸಿಂಗ್ ಅವರು ಯುಸಿಸಿ ಅನುಷ್ಠಾನಕ್ಕೆ ಮಾಡಬೇಕಾದ ನಿಯಮಗಳನ್ನು ಅಂತಿಮಗೊಳಿಸುವಲ್ಲಿ ಸಹಕರಿಸಲು ಮತ್ತು ಸಮನ್ವಯಗೊಳಿಸಲು ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

ಬಿಜೆಪಿ ಸರ್ಕಾರವು ಈ ವರ್ಷದ -ಪೆಬ್ರವರಿ 6 ರಂದು ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸಿ, -ಫೆಬ್ರವರಿ ತಿಂಗಳಲ್ಲಿ ಸರಳ ಬಹುಮತದೊಂದಿಗೆ ಅಂಗೀಕರಿಸಲಾಗಿತ್ತು.

RELATED ARTICLES

Latest News