Thursday, January 15, 2026
Homeರಾಷ್ಟ್ರೀಯಹಿಂದೂಗಳ ಶಿರಚ್ಛೇದ ಮಾಡಲು ಪ್ರತಿಜ್ಞೆ ಮಾಡಿದ ಲಷ್ಕರ್‌ ಉಗ್ರ ಅಬು ಮೂಸಾ

ಹಿಂದೂಗಳ ಶಿರಚ್ಛೇದ ಮಾಡಲು ಪ್ರತಿಜ್ಞೆ ಮಾಡಿದ ಲಷ್ಕರ್‌ ಉಗ್ರ ಅಬು ಮೂಸಾ

Lashkar terrorist threatens to slit Hindus’ throats: Abu Musa

ನವದೆಹಲಿ, ಜ.15- ಆಪರೇಷನ್‌ ಸಿಂಧೂರ ಕಾರ್ಯಚರಣೆಯ ನಂತರ ಹಿಂದೂಗಳ ಶಿರಚ್ಛೇದ ಮಾಡಲು ಲಷ್ಕರ್‌ ನಾಯಕರು ಪ್ರತಿಜ್ಞೆ ಮಾಡಿದ್ದಾರೆ.ಸಿಂಧೂರಕ್ಕೆ ಪ್ರತೀಕಾರವಾಗಿ ಹಿಂದೂಗಳ ಶಿರಚ್ಛೇದಕ್ಕೆ ಲಷ್ಕರ್‌ ನಾಯಕ ಅಬೂ ಮೂಸಾ ಕಾಶ್ಮೀರಿ ಕರೆ ನೀಡಿದ್ದಾನೆ ಎನ್ನಲಾದ ವಿಡಿಯೋ ಇದೀಗ ವೈರಲ್‌ ಆಗಿದೆ.

ರಾವಲ್‌ಕೋಟ್‌ನಲ್ಲಿ ಮಾತಾಡಿರುವ ಮೂಸಾ, ಶಾಂತಿಯುತ ಮನವಿ ಮೂಲಕ ನಮಗೆ ಸ್ವಾತಂತ್ರ್ಯ ಸಿಕ್ಕಲ್ಲ. ಇನ್ನೇನಿದ್ದರೂ ಜಿಹಾದ್‌ ಆರಂಭಿಸೋಣ.. ಸಿಕ್ಕ ಸಿಕ್ಕ ಹಿಂದೂಗಳ ತಲೆ ಕಡಿಯೋಣ. ಆಗಲೇ ನಮಗೆ ಸ್ವಾತಂತ್ರ್ಯ ಸಿಕ್ಕೋದು ಅಂತ ಸಾರ್ವಜನಿಕರನ್ನು ಪ್ರಚೋದಿಸಿದ್ದಾನೆ ಎನ್ನಲಾಗಿದೆ.

ಅಲ್ಲದೆ, ಕಾಶ್ಮೀರ ಸಮಸ್ಯೆ ಜಿಹಾದ್‌, ಟೆರರಿಸಂನಿಂದ ಮಾತ್ರವೇ ಬಗೆಹರಿಸಲು ಸಾಧ್ಯ ಅಂತ ಈಗಾಗಲೇ ಪ್ರಧಾನಿ, ಸಚಿವರಿಗೆ ನಾನು ಹೇಳಿದ್ದೇನೆ ಅಂತಲೂ ಹೇಳಿದ್ದಾನೆ. ಪಹಲ್ಗಾಮ್‌ ಉಗ್ರಕೃತ್ಯಕ್ಕೂ ಮುನ್ನ ಇದೇ ರೀತಿಯಾಗಿ ಈ ಉಗ್ರ ಕಾಶ್ಮೀರಿ ಹಿಂದೂಗಳ ನರಮೇಧಕ್ಕೆ ಕರೆ ನೀಡಿದ್ದ ಎನ್ನುವುದು ವಿಶೇಷವಾಗಿದೆ.

RELATED ARTICLES

Latest News