Saturday, October 19, 2024
Homeರಾಜಕೀಯ | Politicsಸಿಎಂ ಹುದ್ದೆ ಕುರಿತು ಸಭೆ ನಡೆಸಿಲ್ಲ, ಇನ್ನೂ ಮುಂದೆ ಚರ್ಚೆ ಮಾಡಲ್ಲ : ಪರಮೇಶ್ವರ್

ಸಿಎಂ ಹುದ್ದೆ ಕುರಿತು ಸಭೆ ನಡೆಸಿಲ್ಲ, ಇನ್ನೂ ಮುಂದೆ ಚರ್ಚೆ ಮಾಡಲ್ಲ : ಪರಮೇಶ್ವರ್

G Parameshwar on CM Post

ಬೆಂಗಳೂರು, ಅ. 10- ಮುಖ್ಯಮಂತ್ರಿ ಹುದ್ದೆಯ ಕುರಿತು ಇನ್ನೂ ಮುಂದೆ ಯಾವುದೇ ಚರ್ಚೆ ಮಾಡುವುದಿಲ್ಲ. ನಾವು ಅನಗತ್ಯವಾಗಿ ಯಾವುದೇ ಸಭೆಗಳನ್ನು ನಡೆಸಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.

ವಿಧಾನಸೌಧದ ತಮ ಕಚೇರಿಯಲ್ಲಿಂದು ಆಯುಧ ಪೂಜೆಯ ಅಂಗವಾಗಿ ವಿಶೇಷ ಪೂಜೆ ನಡೆಸಿದ ಅವರು, ತಮ ಮನೆ ಹಾಗೂ ನಿವಾಸದ ಬಳಿ ಪ್ರತ್ಯೇಕವಾಗಿ ಮಾತನಾಡಿದರು. ಮುಖ್ಯಮಂತ್ರಿ ಹುದ್ದೆಯ ಕುರಿತು ಪದೇ ಪದೇ ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ಅಸಹನೆ ವ್ಯಕ್ತಪಡಿಸಿದರು.

ತಾವು ಸಂಪುಟದಲ್ಲಿ ಜವಾಬ್ಧಾರಿಯುತ ಸಚಿವರಾಗಿರುವ ಜೊತೆಗೆ, ಪಕ್ಷದಲ್ಲಿ ಹಿರಿಯ ರಾಜಕಾರಣಿಯಾಗಿದ್ದು, ನನಗೂ ಕೆಲವು ಜವಾಬ್ದಾರಿಗಳಿವೆ. ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಮಹದೇವಪ್ಪ ಅವರ ಜೊತೆ ತಾವು ಊಟ ಮಾಡಿ ಸಭೆ ನಡೆಸಿದಕ್ಕೆ ಚರ್ಚೆಗಳಾಗುತ್ತಿರುವುದು ವಿಷಾದಕರ. ನಾವು ಎಲ್ಲಿಯೂ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿ, ನಮನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿಲ್ಲ. ಸಾಮಾನ್ಯವಾಗಿ ಊಟಕ್ಕೆ ಸೇರಿದಾಕ್ಷಣ ಈ ರೀತಿಯ ವ್ಯಾಖ್ಯಾನಗಳು ಸರಿಯಲ್ಲ ಎಂದರು.

ಇನ್ನುಮುಂದೆ ಮಾಧ್ಯಮದವರು ಪ್ರಶ್ನೆ ಮಾಡಿದರೂ ಕೂಡ ನಾನು ಮುಖ್ಯಮಂತ್ರಿ ಹುದ್ದೆ ಕುರಿತು ಚರ್ಚೆ ಮಾಡುವುದಿಲ್ಲ, ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದರು.ಪರಮೆಶ್ವರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಕಾರಣಕ್ಕಾಗಿ ಸಿದ್ದಗಂಗಾ ಮಠದಲ್ಲಿ ಪೂಜೆ ಮಾಡಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಮ ಕುಟುಂಬಕ್ಕೂ ಹಾಗೂ ಸಿದ್ದಗಂಗಾ ಮಠಕ್ಕೂ ಸುದೀರ್ಘ ಹಾಗೂ ಭಾವನಾತಕ ಸಂಬಂಧ ಇದೆ.

ಕಾಲಕಾಲಕ್ಕೆ ಅಲ್ಲಿಗೆ ನಾನು ಭೇಟಿ ನೀಡುತ್ತಿರುತ್ತೇನೆ. ಡಾ. ಶ್ರೀ ಶಿವಕುಮಾರ್ ಸ್ವಾಮೀಜಿ ಅವರ ಗದ್ದುಗೆಗೆ ನಮಸ್ಕರಿಸುತ್ತೇನೆ. ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನ ಭೇಟಿ ಮಾಡಿ ಬರುವುದು ಸಾಮಾನ್ಯ. ಅಲ್ಲಿ ರಾಜಕೀಯ ಮಾತನಾಡುತ್ತೇವೆ ಎಂದು ಹೇಳುತ್ತಿರುವುದು ಸರಿಯಲ್ಲ. ಬೇರೆ ಕಡೆ ಎಲ್ಲಿಯಾದರೂ ಪೂಜೆ ಸಲ್ಲಿಸಿದಾಗ ಬೇಕಿದ್ದರೆ ವಿರೋಧ ಪಕ್ಷದವರು ಟೀಕೆ ಮಾಡಲಿ, ಸಿದ್ದಗಂಗಾ ಮಠದ ವಿಚಾರವಾಗಿ ಈ ರೀತಿ ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.


ವರದಿ ಶೀಘ್ರ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ವಿವಿಧ ಹಗರಣಗಳ ಕುರಿತು ನಾನಾ ರೀತಿಯ ತನಿಖೆಗಳು ನಡೆಯುತ್ತಿವೆ. ಕೆಲವು ಪೂರ್ಣಗೊಂಡಿವೆ, ಇನ್ನೂ ಕೆಲವು ಅಂತಿಮ ಹಂತದಲ್ಲಿದೆ. ಆದರೆ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ವರದಿಯ ಕುರಿತು ಚರ್ಚೆ ನಡೆಸಲು ಸಾಧ್ಯ. ಆದಕ್ಕೂ ಮೊದಲು ಪ್ರಸ್ತಾಪ ಮಾಡುವುದು ಅನಗತ್ಯ ಎಂದರು.

ನಮ ಸರ್ಕಾರ ಹಣಕಾಸಿನ ಅವ್ಯವಹಾರ ಹಾಗೂ ಇತರ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ. ಯಾರೇ ತಪ್ಪು ಮಾಡಿದರೂ ಕ್ಷಮಿಸುವ ಪ್ರಶ್ನೆ ಇಲ್ಲ ಎಂದು ಹೇಳಿದರು.ಉದ್ಯಮಿ ರತನ್ ಟಾಟಾ ಮದುವೆಯನ್ನೇ ಆಗದೆ ಸಮಾಜಕ್ಕೆ ತಮನ್ನು ಮುಡುಪಾಗಿಟ್ಟಿದ್ದರು. ಸೂರ್ಯ, ಚಂದ್ರ ಇರುವುರೆಗೆ ಭಾರತ, ಟಾಟಾ ಅವರ ಕುಟುಂಬವವನ್ನು ಮರೆಯುವುದಿಲ್ಲ.

ಉದ್ಯಮಕ್ಕೆ ಅಷ್ಟೇ ಅಲ್ಲ, ದೇಶಾಭಿವೃದ್ಧಿಗೆ ಅವರ ಕೊಡುಗೆ ಅಪಾರ. ದೊಡ್ಡ ಮಾನವತವಾದಿ ಕೂಡ ಎಂದರು.ಅವರ ಉದ್ಯಮದಲ್ಲಿ ಗಳಿಸಿದ ಲಾಭವನ್ನು ಶೈಕ್ಷಣಿಕ ಆರೋಗ್ಯ ಕ್ಷೇತ್ರದಲ್ಲಿ ಬಳಕೆ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಒಂದೂವರೆ ಕೋಟಿ ಸಾವಿರ ರೂ. ದೇಣಿಗೆ ನೀಡಿದ್ದರು ಎಂದು ಹೇಳಿದರು.

RELATED ARTICLES

Latest News