Saturday, November 23, 2024
Homeರಾಜಕೀಯ | Politicsಖರ್ಗೆ ಅವರನ್ನು ಬಿಟ್ಟರೆ ನಾನೇ ಸೀನಿಯರ್ : ಸಚಿವ ಮುನಿಯಪ್ಪ

ಖರ್ಗೆ ಅವರನ್ನು ಬಿಟ್ಟರೆ ನಾನೇ ಸೀನಿಯರ್ : ಸಚಿವ ಮುನಿಯಪ್ಪ

I am senior after Kharge : Minister KH Muniyappa

ಕೋಲಾರ, ಅ. 10- ಕಾಂಗ್ರೆಸ್ನಲ್ಲಿ ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯಾಗುವುದಾದರೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಹೊರತುಪಡಿಸಿದರೆ ತಾವೇ ಹಿರಿಯರೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಪ್ರತಿಪಾದಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿ ಕಾಣಿಸಿಕೊಳ್ಳುವುದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಿಂದಲೂ ದಲಿತ ಮುಖ್ಯಮಂತ್ರಿಯ ವಿಚಾರ ಚರ್ಚೆಯಾಗುತ್ತಲೇ ಇದೆ. ಖರ್ಗೆ ಅತ್ಯಂತ ಹಿರಿಯ ನಾಯಕರು, ಅವರನ್ನೇ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಮೇಶ್ವರ್ ಪ್ರತ್ಯೇಕ ಸಭೆ ನಡೆಸುತ್ತಿರುವ ಬಗ್ಗೆ ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ನ ದಲಿತ ನಾಯಕರಲ್ಲಿ ಖರ್ಗೆ ಅವರನ್ನು ಬಿಟ್ಟರೆ, ಹಿರಿಯ ನಾಯಕರು ಯಾರು? ತಾವೇ ಅಂದಮೇಲೆ ಬೇರೆ ರೀತಿಯ ಚರ್ಚೆ ಇನ್ನೆಲ್ಲಿದೆ ಎಂಬ ಅರ್ಥದಲ್ಲಿ ಪ್ರತಿಕ್ರಿಯಿಸಿದರು.

ಜಾತಿಗಣತಿ ಜಾರಿಯಿಂದ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಸಿಗುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿಗಣತಿಯೂ ಎಲ್ಲರಿಗೂ ಅನುಕೂಲಕರವಾಗಲಿದೆ. ಹಿಂದುಳಿದ ವರ್ಗದ ಜಾತಿಗಳಲ್ಲಿ ನೂರಾರು ಉಪಜಾತಿಗಳಿದ್ದು ಅವರಿಗೆ ಅನುಕೂಲವಾಗುತ್ತದೆ ಎಂದರು.

ವರದಿ ಕುರಿತು ಸಂಪುಟದಲ್ಲಿ ಚರ್ಚೆ ನಡೆಸಿ ಎಲ್ಲರ ಅಭಿಪ್ರಾಯವನ್ನು ಪಡೆದು ಲೋಪದೋಷಗಳಿದ್ದಲ್ಲಿ ಸರಿಪಡಿಸಿ, ಜಾರಿಗೆ ತರಲಾಗುವುದು ಎಂದರು.ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗದ ಹೊರತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಯಾರೇ ಟೀಕೆ ಮಾಡಿದರೂ, ಅದರ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು.

ಉದ್ಯಮಿ ರತನ್ ಟಾಟಾ ರವರು ಈ ದೇಶಕ್ಕೆ ನೀಡಿರುವ ಕೊಡುಗೆ ಅಪಾರ ವಾಗಿದ್ದು, ಅವರ 86 ನೇ ವರ್ಷದವರೆಗೂ ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸಿದರು. ಸ್ವತಂತ್ರ ಭಾರತದ ಮೊದಲಿನಿಂದ ಇಂದಿನವರೆಗೂ ಅವರು ಸ್ಥಾಪಿಸಿದ ಪ್ರಮುಖ ಸಂಸ್ಥೆಗಳಾದ ಟಾಟಾ ಇನ್ಸ್ಟಿಟ್ಯೂಟ್ ನಿಂದ ಆರಂಭಿಸಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್‌್ಸ ಸ್ಥಾಪನೆವರೆಗೂ ಅವರ ಶ್ರಮ ಬಹಳ ದೊಡ್ಡದು. ರತನ್ ಟಾಟಾ ರವರನ್ನು ಕೈಗಾರಿಕೆಗಳ ಭೀಷ ಎಂದೇ ಕರೆಯಬಹುದು ಎಂದರು.

RELATED ARTICLES

Latest News