Sunday, October 20, 2024
Homeರಾಷ್ಟ್ರೀಯ | Nationalಬಾಲಿವುಡ್‌ ಚಿತ್ರ ನಿರ್ಮಿಸಿದ್ದ ರತನ್‌ ಟಾಟಾ

ಬಾಲಿವುಡ್‌ ಚಿತ್ರ ನಿರ್ಮಿಸಿದ್ದ ರತನ್‌ ಟಾಟಾ

Ratan Tata once produced a Bollywood film starring Amitabh Bachchan

ನವದೆಹಲಿ, ಅ.10– ಭಾರತದ ಖ್ಯಾತ ಉದ್ಯಮಿ ರತನ್‌ ಟಾಟಾ ಅವರು ಹಲವು ಉದ್ಯಮಗಳಲ್ಲಿ ತಮಲ್ಲಿ ಗುರುತಿಸಿಕೊಂಡಂತೆ ಚಿತ್ರರಂಗ ದಲ್ಲೂ ಒಂದು ಹೆಜ್ಜೆ ಇಟ್ಟಿದ್ದರು.

ಆದರೆ ಉದ್ಯಮಗಳಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದ ಟಾಟಾ ಅವರು ಆ ಚಿತ್ರದಿಂದ ಕೈಸುಟ್ಟುಕೊಂಡ ನಂತರ ಅವರು ಚಿತ್ರರಂಗದಿಂದ ಬಹುತೇಕ ದೂರವೇ ಉಳಿದರು.1992ರಲ್ಲಿ ಹಾಲಿವುಡ್‌ನಲ್ಲಿ ಬಿಡುಗಡೆಯಾಗಿದ್ದ ಫಿಯರ್‌' ಚಿತ್ರದಿಂದ ಸ್ಫೂರ್ತಿ ಪಡೆದು ಬಾಲಿವುಡ್‌ನಲ್ಲಿಐತಬಾರ್‌’ ಎಂಬ ಚಿತ್ರವನ್ನು ನಿರ್ಮಿಸಿದ್ದರು.

2002ರಲ್ಲೇ 9.20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರದಲ್ಲಿ ಬಿಗ್‌ಬಿ ಅಮಿತಾಬ್‌ಬಚ್ಚನ್‌, ಜಾನ್‌ ಅಬ್ರಾಹಂ, ಬಿಪಾಶಾಬಶುರಂತಹ ದೊಡ್ಡ ತಾರಾಗಣವೇ ಇದ್ದ ಈ ಚಿತ್ರ 2004ರಲ್ಲಿ ಬಿಡುಗಡೆಗೊಂಡು 7.50 ಕೋಟಿ ಗಳಿಸಿತ್ತು. ಈ ಸಿನಿಮಾಕ್ಕೆ ಜತಿನ್‌ಕುಮಾರ್‌, ಖುಷ್ಪುಬುದ್ರಾ, ಮನದೀಪ್‌ಸಿಂಗ್‌ ಅವರು ಕೂಡ ಪಾಲುದಾರರಾಗಿದ್ದರು.

RELATED ARTICLES

Latest News