Thursday, January 15, 2026
Homeಮನರಂಜನೆಹೈಕೋರ್ಟ್‌ನಲ್ಲೇ ಜನನಾಯಗನ್‌ ಚಿತ್ರ ವಿವಾದ ಬಗೆಹರಿಸಿಕೊಳ್ಳಿ : ಸುಪ್ರೀಂ

ಹೈಕೋರ್ಟ್‌ನಲ್ಲೇ ಜನನಾಯಗನ್‌ ಚಿತ್ರ ವಿವಾದ ಬಗೆಹರಿಸಿಕೊಳ್ಳಿ : ಸುಪ್ರೀಂ

Vijay's 'Jana Nayagan' release delayed: Supreme Court refuses to intervene,

ನವದೆಹಲಿ, ಜ. 15 (ಪಿಟಿಐ)- ತಮಿಳುನಾಡಿನ ಖ್ಯಾತ ಚಿತ್ರನಟ ಕಮ್‌ ರಾಜಕಾರಣಿ ವಿಜಯ್‌ ಅಭಿನಯದ ತಮಿಳು ಚಿತ್ರ ಜನ ನಾಯಗನ್‌ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯ ಅನುಮತಿ ನೀಡುವಂತೆ ಏಕ ಸದಸ್ಯ ನ್ಯಾಯಾಧೀಶರ ನಿರ್ದೇಶನಕ್ಕೆ ತಡೆ ನೀಡಿದ ಮದ್ರಾಸ್‌‍ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಸಮಸ್ಯೆಯನ್ನು ಹೈಕೋರ್ಟ್‌ನಲ್ಲೇ ಪರಿಹರಿಸಿಕೊಳ್ಳುವಂತೆ ಸಲಹೆ ನೀಜಿ ಅರ್ಜಿಯನ್ನು ವಜಾಗೊಳಿಸಿದೆ.

ಮದ್ರಾಸ್‌‍ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಯ ವೇಗವನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ದೀಪಂಕರ್‌ ದತ್ತ ಮತ್ತು ಆಗಸ್ಟೀನ್‌ ಜಾರ್ಜ್‌ ಮಸಿಹ್‌ ಅವರ ಪೀಠವು, ಪರಿಹಾರಕ್ಕಾಗಿ ಚಲನಚಿತ್ರ ನಿರ್ಮಾಪಕರು ಹೈಕೋರ್ಟ್‌ನ ವಿಭಾಗೀಯ ಪೀಠವನ್ನು ಸಂಪರ್ಕಿಸುವಂತೆ ಸೂಚಿಸಿದೆ.

ನಿರ್ಮಾಪಕರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು, ಚಲನಚಿತ್ರವು ಹಾಳಾಗುವ ವಸ್ತುವಾಗಿದ್ದು, ವಿಷಯ ವಿಳಂಬವಾದರೆ ಅದು ಗಂಭೀರ ಹಾನಿ ಉಂಟುಮಾಡುತ್ತದೆ ಎಂದು ಹೇಳಿದ ನಂತರ, ಸುಪ್ರೀಂ ಕೋರ್ಟ್‌ ಜನವರಿ 20 ರಂದು ಅರ್ಜಿಯನ್ನು ನಿರ್ಧರಿಸುವಂತೆ ಮದ್ರಾಸ್‌‍ ಹೈಕೋರ್ಟ್‌ಗೆ ಕೇಳಿದೆ.

ಜನವರಿ 9 ರಂದು, ಮದ್ರಾಸ್‌‍ ಹೈಕೋರ್ಟ್‌ ಜನ ನಾಯಗನ್‌ ಚಿತ್ರಕ್ಕೆ ಸೆನ್ಸಾರ್‌ ಪ್ರಮಾಣಪತ್ರವನ್ನು ತಕ್ಷಣವೇ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ)ಗೆ ನಿರ್ದೇಶಿಸಿದ ಏಕ ನ್ಯಾಯಾಧೀಶರ ಆದೇಶವನ್ನು ತಡೆಹಿಡಿದಿದ್ದು, ರಾಜಕೀಯ ಹಿನ್ನೆಲೆಯಿಂದ ಗಮನ ಸೆಳೆದಿರುವ ನಟ-ರಾಜಕಾರಣಿ ವಿಜಯ್‌ ಅವರ ಚಿತ್ರದ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ.

ಕಳೆದ ಶುಕ್ರವಾರ ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ ಆದೇಶದ ವಿರುದ್ಧ ಕೆವಿಎನ್‌ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ ಮೇಲ್ಮನವಿ ಸಲ್ಲಿಸಿತು.ವಿಜಯ್‌ ಇತ್ತೀಚೆಗೆ ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಪ್ರಾರಂಭಿಸಿದರು. ವಿಜಯ್‌ ಅವರ ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಕ್ಕೆ ಮೊದಲು ಅವರ ಕೊನೆಯ ಚಿತ್ರ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾದ ಜನ ನಾಯಗನ್‌‍ ಜನವರಿ 9 ರಂದು ಪೊಂಗಲ್‌ಗೆ ಬಿಡುಗಡೆಯಾಗಬೇಕಿತ್ತು.ಆದಾಗ್ಯೂ, ಸಿಬಿಎಫ್‌ಸಿ ಸಮಯಕ್ಕೆ ಸರಿಯಾಗಿ ಪ್ರಮಾಣೀಕರಣವನ್ನು ನೀಡದ ಕಾರಣ ಚಿತ್ರವು ಕೊನೆಯ ಕ್ಷಣದ ಅಡೆತಡೆಗಳನ್ನು ಎದುರಿಸುತ್ತಿದೆ.

RELATED ARTICLES

Latest News