ಬೆಂಗಳೂರು, ಅ.14- ನಗರದಲ್ಲಿ 30 ವರ್ಷಗಳ ಅವಧಿಗೆ ಕಸದ ಟೆಂಡರ್ ಕರೆಯಲು ಸರ್ಕಾರ ಅನುಮೋದನೆ ನೀಡಿದೆ ಎಂದು ಬಿ ಬಿ ಎಂ ಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. 30 ವರ್ಷಗಳ ಅವಧಿಗೆ ಕಸದ ಟೆಂಡರ್ ಕರೆಯುವ ಸವಿಸ್ತಾರವಾದ ಡ್ರಾಪ್ಟ್ ಅನ್ನು ನಾವು ಸರ್ಕಾರಕ್ಕೆ ಕಳುಹಿಸಿದ್ದೇವು. ಇದೀಗ ನಮ್ಮ ಕರಡಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಅದಷ್ಟು ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.
30 ವರ್ಷಗಳ ಕಸದ ಟೆಂಡರ್ ನೀಡಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದ್ದರು ಸರ್ಕಾರ ಕೇವಲ ಐದೇ ತಿಂಗಳಲ್ಲಿ ಯೋಜನೆಗೆ ಒಪ್ಪಿಗೆ ನೀಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬಿಬಿಎಂಪಿ ಕಸ ಡ್ರಾಫ್ಟ್ ನಲ್ಲಿ ಏನೇನಿದೆ;
- ಬೆಂಗಳೂರಿನ ಕಸ ವಿಲೇವಾರಿ ಗುತ್ತಿಗೆ 30 ವರ್ಷಕ್ಕೆ ಅನ್ವಯ
- ಒಂದೇ ಕಂಪೆನಿಗೆ 30 ವರ್ಷಕ್ಕೆ ಕಸ ವಿಲೇವಾರಿ ಟೆಂಡರ್
- 30 ವರ್ಷದ ಗುತ್ತಿಗೆ ಪಡೆಯಲು ಓಪನ್ ಬಿಡ್ ನಡೆಸಲಿರುವ ಪಾಲಿಕೆ
- ಅತಿ ಕಡಿಮೆಗೆ ಬಿಡ್ ಮಾಡುವ ಸಂಸ್ಥೆಗೆ ಗುತ್ತಿಗೆ ನೀಡಲು ಪಾಲಿಕೆ ನಿರ್ಧಾರ
- ಎಂಟು ವಲಯದಲ್ಲಿ ಒಬ್ಬ ಆಥವಾ ಕಂಪೆನಿಗೆ ಕಸ ವಿಲೇವಾರಿ ಹೊಣೆ
- ಮನೆಯಿಂದ ಕಸ ಸಂಗ್ರಹ, ಸಾರಿಗೆ ಹಾಗೂ ವಿಲೇವಾರಿ ಎಲ್ಲವೂ ಗುತ್ತಿಗೆದಾರರದ್ದೇ ಹೊಣೆ
- ಪಾಲಿಕೆ ವಾಹನಗಳು, ಪೌರಕಾರ್ಮಿಕರನ್ನು ಬಳಸಲೇ ಬೇಕು ಎನ್ನುವ ಒತ್ತಡವಿಲ್ಲ
- ಬಳಸಿದರೆ ಅದರ ಸಂಪೂರ್ಣ ನಿರ್ವಹಣೆ ಕೂಡ ಅದೇ ಕಂಪೆನಿಯದ್ದು
- ಸದ್ಯ ಪ್ರತಿ ದಿನ ನಗರದಲ್ಲಿ 5 ಸಾವಿರ ಅಧಿಕ ಟನ್ ಕಸ ಉತ್ಪತ್ತಿ
- 5 ಸಾವಿರ ಟನ್ ಲೆಕ್ಕದಲ್ಲಿ ಸದ್ಯ ವಾರ್ಷಿಕವಾಗಿ 480 ಕೋಟಿ ವೆಚ್ಚ
- ಈ ಹೊಸ ಯೋಜನೆಯಲ್ಲಿ 6,566 ಟನ್ ಲೆಕ್ಕದಲ್ಲಿ ಟೆಂಡರ್ ನೀಡಲು ಮುಂದು
- ಇದರ ಪ್ರಕಾರ ವಾರ್ಷಿಕವಾಗಿ 730 ಕೋಟಿ ನೀಡಲಿರುವ ಪಾಲಿಕೆ
- ಪ್ರತಿ ವರ್ಷ ಮುಲಾ ವಿಲೇವಾರಿ ಬೆಲೆಗೆ ಶೇ.10ರಷ್ಟು ಏರಿಕೆ
- ಸದ್ಯ ದಿನಕ್ಕೆ 1.80 ಕೋಟಿ ಕಸವಿಲೇವಾರಿಗೆ ಖರ್ಚು
- ಹೊಸ ಯೋಜನೆ ಪ್ರಕಾರ 30 ವರ್ಷಕ್ಕೆ 33 ಕೋಟಿ ಪ್ರತಿ ದಿನ ವೆಚ್ಚ
- ಅದರಂತೆ 30 ವರ್ಷಕ್ಕೆ ವಾರ್ಷಿಕವಾಗಿ 12 ಸಾವಿರ ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ
- ಹೊಸ ಪ್ರಸ್ತಾವನೆ ಪ್ರಕಾರ ಪಾಲಿಕೆ ಬೊಕ್ಕಸಕ್ಕೆ ಸುಮಾರು ಶೇ.40 ರಷ್ಟು ಹೆಚ್ಚುವರಿ ಹೊರೆ