Friday, October 18, 2024
Homeರಾಷ್ಟ್ರೀಯ | Nationalವಿಮಾನಗಳಿಗೆ ಬಾಂಬ್‌ ಬೆದರಿಕೆ : ಅಪ್ರಾಪ್ತ ಬಾಲಕ ಮತ್ತು ಆತನ ತಂದೆ ವಶಕ್ಕೆ

ವಿಮಾನಗಳಿಗೆ ಬಾಂಬ್‌ ಬೆದರಿಕೆ : ಅಪ್ರಾಪ್ತ ಬಾಲಕ ಮತ್ತು ಆತನ ತಂದೆ ವಶಕ್ಕೆ

Hoax bomb threats to flights: Mumbai cops summon minor boy, his father from Chhattisgarh

ರಾಜನಂದಗಾಂವ್‌,ಅ.16-ಮೂರು ವಿಮಾನಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಬಾಂಬ್‌ ಬೆದರಿಕೆ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಛತ್ತೀಸ್‌‍ಗಢದ ರಾಜನಂದಗಾಂವ್‌ನ ಅಪ್ರಾಪ್ತ ಬಾಲಕ ,ಅವನ ತಂದೆ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಅ.14 ರಂದು ಮುಂಬೈನಿಂದ ಹೊರಟಿದ್ದ ಮೂರು ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು.ನ್ಯೂಯಾರ್ಕ್‌ಗೆ ಹೋಗುವ ಏರ್‌ ಇಂಡಿಯಾ ವಿಮಾನವನ್ನು ನವದೆಹಲಿ ಇಳಿಸಿ ತಪಾಸಣೆ ಮಾಡಲಾಗಿತ್ತು ಮಸ್ಕತ್‌ ಮತ್ತು ಜೆಡ್ಡಾಕ್ಕೆ ತೆರಳುತಿದ್ದಇನ್ನೆರಡು ಇಂಡಿಗೋ ವಿಮಾನ ಹಲವಾರು ಗಂಟೆಗಳ ಕಾಲ ವಿಳಂಬವಾಗಿತ್ತು.ಕೊನೆಗೆ ವಿಮಾನದಲ್ಲಿ ಯಾವುದೇ ಅನುಮಾನಾಸ್ಪದವಾದ ವಸ್ತು ಕಂಡುಬಂದಿಲ್ಲ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ಮೈಕ್ರೋ ಬ್ಲಾಗಿಂಗ್‌ ಪ್ಲಾಟ್‌ಫಾರ್ಮ್‌ ಎಕ್‌್ಸನಲ್ಲಿ ಪೋಸ್ಟ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದ್ದು, ಇದನ್ನುಪರಿಶೀಲಿಸಲಾಗುತ್ತಿದೆ ಎಂದು ರಾಜನಂದಗಾಂವ್‌ ಪೊಲೀಸ್‌‍ ವರಿಷ್ಠಾಧಿಕಾರಿ ಮೋಹಿತ್‌ ಗಾರ್ಗ್‌ ಹೇಳಿದ್ದಾರೆ.

ರಾಯ್‌ಪುರ ಸೈಬರ್‌ ಸೆಲ್‌ ಮತ್ತು ರಾಜ್‌ನಂದಗಾಂವ್‌ನ ಕೊತ್ವಾಲಿ ಪೊಲೀಸ್‌‍ ಮತ್ತು ಸೈಬರ್‌ ಸೆಲ್‌ನೊಂದಿಗೆ ಟ್ವೀಟ್‌ನ ಸಂಪರ್ಕದ ಬಗ್ಗೆ ಮಾಹಿತಿ ಪಡೆದ ನಂತರ ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್‌ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.

ಪ್ರಕರಣ ದಾಖಲಿಸಿ ತನಿಖೆ ಭಾಗವಾಗಿ ಮುಂಬೈ ಪೊಲೀಸರ ತಂಡ ರಾಜನಂದಗಾಂವ್‌ ಪೊಲೀಸರ ಸಹಾಯದಿಂದ ನಗರದ ನಿವಾಸಿ 17 ವರ್ಷದ ಹುಡುಗ, ಅವನ ತಂದೆ ,ಎಕ್‌್ಸಖಾತೆಯನ್ನು ಬಳಸಿದ ವ್ಯಕ್ತಿಗೆ ನೋಟಿಸ್‌‍ ನೀಡಿ ಅವರನ್ನು ವಿಚಾರಣೆಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ಮುಂಬೈಗೆ ಕರೆಸಲಾಗಿದೆ ಎಂದು ಅಧಿಕಾರಿ ಹೇಳಿದರು.

RELATED ARTICLES

Latest News