Saturday, October 19, 2024
Homeರಾಷ್ಟ್ರೀಯ | Nationalಜಮ್ಮು-ಕಾಶ್ಮೀರದ ಸಿಎಂ ಆಗಿ ಒಮರ್‌ ಅಬ್ದುಲ್ಲಾ ಪ್ರಮಾಣವಚನ ಸ್ವೀಕಾರ

ಜಮ್ಮು-ಕಾಶ್ಮೀರದ ಸಿಎಂ ಆಗಿ ಒಮರ್‌ ಅಬ್ದುಲ್ಲಾ ಪ್ರಮಾಣವಚನ ಸ್ವೀಕಾರ

Omar Abdullah sworn in as first CM of UT Jammu and Kashmir


ಶ್ರೀನಗರ,ಅ.16- ಒಂದು ದಶಕದ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ನ್ಯಾಷನಲ್‌ ಕಾನ್ಪರೆನ್ಸ್ ಮುಖಂಡ ಒಮರ್‌ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕರಿಸಿದರು. ಒಮರ್‌ ಅಬ್ದುಲ್ಲಾ ಅವರ ಜೊತೆ ಜಮುಕಾಶೀರ ರಾಜ್ಯ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಅವರನ್ನು ಪರಾಭವಗೊಳಿಸಿದ್ದ ಪಕ್ಷೇತರ ಶಾಸಕ ಸುರೇನ್‌ ಚೌಧರಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಉಳಿದಂತೆ ಸಕೀನಾ, ಜಾವೇದ್‌ ಅಹಮದ್‌ ರಾಣ, ಜಾವೇದ್‌ ದಾರ್‌, ಸತೀಶ್‌ ಶರ್ಮ ಅವರುಗಳು ಸಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಐತಿಹಾಸಿಕ ದಾಲ್‌ ಸರೋವರದ ದಡದಲ್ಲಿರುವ ಶೇರ್‌ ಎ ಕಾಶೀರ್‌ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಬೆಳಗ್ಗೆ 11.30ಕ್ಕೆ ಜಮು ಮತ್ತು ಕಾಶೀರ ಲೆಫ್ಟಿನೆಂಟ್‌ ಗವರ್ನರ್‌ ಜನರಲ್‌ ಮನೋಜ್‌ ಸಿನ್ಹಾ ಪ್ರಮಾಣ ವಚನ ಬೋಧಿಸಿದರು. ಆರ್ಟಿಕಲ್‌ 370 ರದ್ಧತಿಯ ಬಳಿಕ ನಡೆದ ಚೊಚ್ಚಲ ವಿಧಾನಸಭೆಯಲ್ಲಿ ಗೆದ್ದ ನ್ಯಾಷನಲ್‌ ಕಾನ್ಫರೆನ್ಸ್ ನ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಇದಕ್ಕೂ ಮುನ್ನ 2009-2014ರಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

90 ವಿಧಾನಸಭೆ ಸದಸ್ಯರನ್ನು ಹೊಂದಿರುವ ಜಮು – ಕಾಶೀರದಲ್ಲಿ ನಿಯಮದ ಪ್ರಕಾರ 8 ಮಂದಿ ಸಚಿವರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಸೇರಿದಂತೆ ಒಟ್ಟು 9 ಮಂದಿ ಅಧಿಕಾರ ಸ್ವೀಕಾರಿಸಿದರು. ಅಚ್ಚರಿ ಎಂದರೆ ಚುನವಣೆಗೂ ಮುನ್ನ ಮೈತ್ರಿ ಮಾಡಿಕೊಂಡಿದ್ದ ಎನ್‌.ಸಿ ಹಾಗೂ ಕಾಂಗ್ರೆಸ್‌‍ ನಡುವೆ ಕೊನೆ ಕ್ಷಣದಲ್ಲಿ ಹೊಂದಾಣಿಕೆ ಮುರಿದು ಬಿದ್ದ ಕಾರಣ ಕಾಂಗ್ರೆಸ್‌‍ ಸಂಪುಟಕ್ಕೆ ಸೇರ್ಪಡೆಯಾಗದೆ ಹೊರಗುಳಿದಿದೆ.

ಮೂಲಗಳ ಪ್ರಕಾರ ಸಂಪುಟದಲ್ಲಿ ಎರಡರಿಂದ ಮೂರು ಸಚಿವ ಸ್ಥಾನವನ್ನು ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿತ್ತು. ಆದರೆ ಈ ಪ್ರಸ್ತಾವನೆಯನ್ನು ಒಮರ್‌ ಒಪ್ಪದೆ ಕೇವಲ ಒಂದು ಸ್ಥಾನವನ್ನು ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್‌‍ ಸರ್ಕಾರದಲ್ಲಿ ಭಾಗಿಯಾಗದೆ ಕೇವಲ ಬಾಹ್ಯ ಬೆಂಬಲ ನೀಡಿದೆ.

ಜಮು ಮತ್ತು ಕಾಶೀರ ನ್ಯಾಷನಲ್‌ ಕಾನ್ಫರೆನ್ಸ್ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿ, ಇಂಡಿಯಾ ಒಕ್ಕೂಟದ ನಾಯಕರ ಚಿತ್ರಗಳನ್ನು ಹಂಚಿಕೊಂಡಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ರಾಷ್ಟ್ರೀಯವಾದಿ ಕಾಂಗ್ರೆಸ್‌‍ ಪಕ್ಷದ (ಶರದ್‌ ಪವಾರ್‌) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ, ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್ ವಾದಿ) ಕೇಂದ್ರ ಸಮಿತಿಯ ಹಂಗಾಮಿ ನಾಯಕ ಪ್ರಕಾಶ್‌ ಕಾರಟ್‌, ದ್ರಾವಿಡ ಮುನ್ನೇತ್ರ ಕಳಗಂನ ಉಪ ಪ್ರಧಾನ ಕಾರ್ಯದರ್ಶಿ ಕನಿಮೊಳಿ ಹಾಗೂ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಹೆಚ್ಚು ವಿಐಪಿಗಳು ಆಗಮಿಸಿದ ಹಿನ್ನೆಲೆ ಭದ್ರತೆ ಹೆಚ್ಚಿಸಲಾಗಿತ್ತು.

ಜಮುಕಾಶೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಾತನಾಡಿದ, ನ್ಯಾಷನಲ್‌ ಕಾನ್ಫರೆನ್‌್ಸ ಪಕ್ಷದ ನಾಯಕ ಒಮರ್‌ ಅಬ್ಧುಲ್ಲಾ, ಕೇಂದ್ರ ಸರ್ಕಾರದಿಂದ ಕಾರ್ಯ ನಿರ್ವಹಣೆಗೆ ಸಹಕಾರವನ್ನು ಎದುರು ನೋಡುತ್ತಿದ್ದೇನೆ ಎಂದರು. ಇದೇ ವೇಳೆ ಕೇಂದ್ರಾಡಳಿತ ಪ್ರದೇಶದ ಸಿಎಂ ಆಗಿ ಕಾರ್ಯ ನಿರ್ವಹಣೆಯೂ ತನ್ನದೇ ಆದ ಸವಾಲಿನಿಂದ ಕೂಡಿದೆ ಎಂದು ಹೇಳಿದರು.

ಜಮುಕಾಶೀರದಲ್ಲಿ ಆರು ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಡೇಯದಾಗಿ ಸೇವೆ ಸಲ್ಲಿಸಿದ್ದ ಸಿಎಂ ನಾನಾಗಿದ್ದೇನೆ. ಇದೀಗ ರಾಜ್ಯ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಮುಖ್ಯಮಂತ್ರಿಯಾಗುತ್ತಿದ್ದೇನೆ. ಆರು ವರ್ಷದ ಸೇವೆಯು ಸಂತೋಷಕರವಾಗಿದ್ದು, ಇದೀಗ ಕೇಂದ್ರಾಡಳಿತದ ಸಿಎಂ ಆಗಿರುವುದು ಮತ್ತೊಂದು ಬಗೆಯ ಅನುಭವ ಆಗಿರಲಿದೆ. ಇದು ತನ್ನದೇ ಆದ ಸವಾಲ ಹೊಂದಿದೆ.

ಈ ಕೇಂದ್ರಾಡಳಿತದ ಸ್ಥಾನಮಾನವೂ ತಾತ್ಕಲಿಕವಾಗಿದೆ ಎಂದು ನಾನು ಆಶಿಸುತ್ತೇನೆ. ಜನರ ಸಮಸ್ಯೆ ನಿವಾರಣೆಯಲ್ಲಿ ಕಾರ್ಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಸಹಕಾರವನ್ನು ಎದುರು ನೋಡುತ್ತಿದ್ದೇವೆ. ರಾಜ್ಯ ಸ್ಥಾನಮಾನವನ್ನು ಮರಳಿ ತರುವುದಕ್ಕೆ ಇದು ಉತ್ತಮ ಆರಂಭದ ಹಾದಿ ಎಂದು ಅವರು ತಿಳಿಸಿದ್ದಾರೆ.

ಜನರು ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಜನರು ಸಂಕಷ್ಟದ ಸಮಯದಲ್ಲಿದ್ದು, ಸರ್ಕಾರದಿಂದ ಅವರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ನಾವು ಸಾಕಷ್ಟು ಕೆಲಸ ಮಾಡಬೇಕಿದೆ. ಸರ್ಕಾರವೂ ನಿಮ ಸಮಸ್ಯೆ ಆಲಿಸುತ್ತಿದೆ ಎಂಬ ಭರವಸೆಯನ್ನು ಜನರಿಗೆ ನೀಡಬೇಕಿದೆ. ಕಳೆದ 5-6 ವರ್ಷದಿಂದ ಇದನ್ನು ಅವರು ಕೇಳಿಲ್ಲ. ಅವರ ಮನವಿ ಕೇಳುವುದು ಅದಕ್ಕೆ ಕಾರ್ಯ ನಿರ್ವಹಿಸುವುದು ನಮ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ, ಇಂಡಿಯಾ ಒಕ್ಕೂಟದ ನಾಯಕರಾದ ಅಖಿಲೇಶ್‌ ಯಾದವ್‌, ಸುಪ್ರಿಯಾ ಸುಳೆ, ಪ್ರಕಾಶ್‌ ಕಾರಂಟ್‌, ಕನ್ನಿಮೋಳಿ ಹಾಜರಿರಲಿದ್ದು, ಅವರಿಗೆ ಸ್ವಾಗತ ಕೋರುವ ಬ್ಯಾನರ್ಗಳು ಶ್ರೀನಗರ ವಿಮಾನ ನಿಲ್ದಾಣದ ಹೊರಗೆ ಕಂಡು ಬಂದವು.

ಜಮು ಮತ್ತು ಕಾಶೀರಕ್ಕಿದ್ದ ವಿಶೇಷ ಸ್ಥಾನಮಾನದ ವಿಧಿ 370ನ್ನು ರದ್ದು ಮಾಡಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಿದ ಮೇಲೆ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. 90 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಸಿ- ಕಾಂಗ್ರೆಸ್‌‍ ಮೈತ್ರಿ ಕೂಟ 48 ಸ್ಥಾನಗಳಲ್ಲಿ ಗೆಲುವು ಕಂಡಿವೆ.

RELATED ARTICLES

Latest News