ಅಬುಜಾ, ಅ.16-ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಪಲ್ಟಿಯಾಗಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಅಪಘಾತಗೊಂಡಿದ್ದ ವಾಹನದಿಂದ ಇಂಧನವನ್ನು ಸಂಗ್ರಹಿಸಲು ಜನರು ಗುಂಪು ಧಾವಿಸಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬುಜಾ ವಿಶ್ವವಿದ್ಯಾನಿಲಯದ ಸಮೀಪ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಟ್ಯಾಂಕರ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ನಂತರ ಜಿಗಾವಾ ರಾಜ್ಯದ ಮಜಿಯಾ ಪಟ್ಟಣದಲ್ಲಿ ಮಧ್ಯರಾತ್ರಿ ಅಪಘಾತಕೀಡಾಗಿದೆ ಎಂದು ಪೊಲೀಸ್ ವಕ್ತಾರ ಲಾವನ್ ಆಡಮ್ ತಿಳಿಸಿದ್ದಾರೆ.
ಆಫ್ರಿಕಾದ ಅತ್ಯಂತ ಜನನಿಬಿಡ ದೇಶವಾದ ನೈಜೀರಿಯಾದಲ್ಲಿ ಮಾರಣಾಂತಿಕ ಟ್ಯಾಂಕರ್ ಅಪಘಾತಗಳು ಸಾಮಾನ್ಯವಾಗಿದೆ, ಅಲ್ಲಿ ಅನೇಕ ಸ್ಥಳಗಳಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿಲ್ಲ ಮತ್ತು ಸರಕುಗಳನ್ನು ಸಾಗಿಸಲು ಸಮರ್ಥ ರೈಲ್ವೆ ವ್ಯವಸ್ಥೆಯಂತಹ ಪರ್ಯಾಯಗಳ ಕೊರತೆಯಿದೆ. ಇಂತಹ ಅಪಘಾತಗಳ ನಂತರ ಜನರು ಇಂಧನವನ್ನು ತುಂಬಿಸಿಕೊಳ್ಳುವುದು ಕೂಡ ಸಾಮಾನ್ಯವಾಗಿದೆ, ವಿಶೇಷವಾಗಿ ನೈಜೀರಿಯಾದ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ.
ಅಪಘಾತದ ಬಗ್ಗೆ ಕೇಳಿದ ಸ್ಥಳೀಯ ನಿವಾಸಿಗಳು ಘಟನಾ ಸ್ಥಳಕ್ಕೆ ಧಾವಿಸಿ ಇಂಧನವನ್ನು ಸ್ಕೂಲಿಂಗ್ ಮಾಡುತ್ತಿದ್ದರು ಆಗ ಸ್ಪೋಟ ಸಂಭವಿಸಿ ನರಕದಂತ ದೃಶ್ಯ ಹುಟ್ಟುಹಾಕಿತು, ಇದು ಸ್ಥಳದಲ್ಲೇ 94 ಜನರನ್ನು ಬಲಿ ತೆಗೆದುಕೊಂಡಿತು ಎಂದು ಆಡಮ್ ಹೇಳಿದರು.
ಇಡೀ ಪ್ರದೇಶದಾದ್ಯಂತ ಬೃಹತ್ ಬೆಂಕಿಯನ್ನು ವ್ಯಾಪಿಸಿರುವುದನ್ನುವೀಡಿಯೊದಲ್ಲಿ ತೋರಿಸಿದೆ, ಘಟನಾ ಸ್ಥಳದಲ್ಲಿ ದೇಹಗಳು ಕಸದ ರಾಶಿಯಾಗಿ ಕಂಡುಬಂದಿದೆ ಎಂದು ತಿಳಿಸಿದರು