Friday, October 18, 2024
Homeರಾಜ್ಯರಜನಿಕಾಂತ್‌ ನಿವಾಸಕ್ಕೆ ನುಗ್ಗಿದ ನೀರು

ರಜನಿಕಾಂತ್‌ ನಿವಾಸಕ್ಕೆ ನುಗ್ಗಿದ ನೀರು

ಚೆನ್ನೈ,ಅ.16- ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ನಿವಾಸಕ್ಕೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಚೆನ್ನೈನಲ್ಲಿ ಕಳೆದ ಕೆಲ ದಿನಗಳಿಂದ ವರುಣ ಆರ್ಭಟಿಸುತ್ತಿದ್ದು, ಪೋಯಿಸ್‌‍ ಗಾರ್ಡನ್‌ನ ತಗ್ಗು ಪ್ರದೇಶದಲ್ಲಿರುವ ರಜನಿಕಾಂತ್‌ ಅವರ ಮನೆಗೆ ನೀರು ನುಗ್ಗಿರುವ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ.

ರಜನಿಕಾಂತ್‌ ಮನೆಯ ಎದುರಿನ ರಸ್ತೆ ಮಾತ್ರವಲ್ಲದೆ, ಅವರ ಮನೆಯ ಆವರಣದಲ್ಲಿಯೂ ನೀರು ನಿಂತಿದೆ . ಆದರೆ, ನೀರು ಮನೆಯ ಒಳಕ್ಕೆ ನುಗ್ಗಿಲ್ಲ. ರಜನಿಕಾಂತ್‌ ಹಾಗೂ ಕುಟುಂಬದವರು ವಿಡಿಯೋದಲ್ಲಿ ಕಾಣಿಸಿಲ್ಲ. ಈ ರೀತಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಚೆನ್ನೈನಲ್ಲಿ ಭಾರೀ ಮಳೆ ಆದಾಗ ಇದೇ ರೀತಿ ಆಗಿತ್ತು ಎನ್ನಲಾಗಿದೆ.

ಚೆನ್ನೈನ ಬಹುತೇಕ ರಸ್ತೆಗಳೆಲ್ಲ ನೀರಿನಿಂದ ತುಂಬಿ ಹೋಗಿವೆ. ನಗರದಲ್ಲಿ ರೆಡ್‌ ಅಲರ್ಟ್‌ ಘೋಷಣೆ ಆಗಿದೆ. ತಮಿಳುನಾಡು ಸರ್ಕಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಕೆಲ ದಿನಗಳ ಹಿಂದೆ ರಜನಿಕಾಂತ್‌ ಅವರು ಅನಾರೋಗ್ಯದಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸುದ್ದಿಯಾಗಿದ್ದರು. ನಂತರ ಅವರ ನಟನೆಯ ವೆಟ್ಟೈಯಾನ್‌ ಚಿತ್ರ ಬಿಡುಗಡೆಯಾಗಿ ಭಾರಿ ಸದ್ದು ಮಾಡಿದೆ.

ಇಂತಹ ಸಂದರ್ಭದಲ್ಲೇ ರಜನಿಕಾಂತ್‌ ಅವರ ನಿವಾಸಕ್ಕೆ ನೀರು ನುಗ್ಗಿರುವ ವಿಡಿಯೋವನ್ನು ಸಹಸ್ರಾರು ಮಂದಿ ವೀಕ್ಷಿಸಿ ಗಮನ ಸೆಳೆದಿದ್ದಾರೆ.

RELATED ARTICLES

Latest News