Friday, November 22, 2024
Homeರಾಷ್ಟ್ರೀಯ | Nationalಪತ್ನಿಯನ್ನು ಕೊಂದು ಪರಾರಿಯಾಗಿದ್ದ ಪತಿ ಸೆರೆ

ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಪತಿ ಸೆರೆ

The husband who killed his wife and ran away was arrested

ಥಾಣೆ, ಅ.18- ಮಗಳನ್ನು ನೋಡಿಕೊಳ್ಳಲಿಲ್ಲ ಸರಿಯಾಗಿ ನೋಡುಕೊಳ್ಳುತ್ತಿಲ್ಲ ಎಂದು ಪತ್ನಿಯನ್ನು ಭೀಕರವಾಗಿ ಕೊಂದು ಪಾರಾರಿಯಾಗಿದ್ದ ಪತಿಯನ್ನು ಉತ್ತರಪ್ರದೇಶದ ವಾರಣಾಸಿಯಲ್ಲಿ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.ಥಾಣೆ ನಗರದ ಅಂಬರನಾಥ್‌ ಪ್ರದೇಶದ ವಿಕ್ಕಿ ಬಬನ್‌ ಲೋಂಡೆ(27)ಬಂಧಿತ ಆರೋಪಿ ಕಳೆದ ಅಕ್ಟೋಬರ್‌ 8 ರಂದು ತನ್ನ ಪತ್ನಿ ರೂಪಾಲಿ (26)ಯನ್ನು ಮನೆಯಲ್ಲೇ ಕತ್ತು ಸೀಳಿ ಕೊಂದಿದ್ದ ಎಂದು ಥಾಣೆ ನಗರ ಪೊಲೀಸ್‌‍ಅಧಿಕಾರಿ ಸೈಲೇಶ್‌ ಸಾಲ್ವಿ ತಿಳಿಸಿದ್ದಾರೆ.


ಮೂರು ವರ್ಷಗಳ ಹಿಂದೆ ವಿವಾಹವಾದ ಲೋಂಡೆ ಅವರು ತಮ್ಮ ಪತ್ನಿ ಮತ್ತು ಅವರ ಒಂದು ವರ್ಷದ ಮಗಳೊಂದಿಗೆ ಅಂಬರನಾಥ್‌ ಪಟ್ಟಣದ ಪಾಲೆಗಾಂವ್‌ ಪ್ರದೇಶದ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದರು. ತಮ ಮಗುವನ್ನು ಸರಿಯಾಗಿ ನೋಡಿಕೊಳ್ಳದಿದ್ದಕ್ಕಾಗಿ ಅಸಮಾಧಾನಗೊಂಡಿದ್ದನು.

ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆತ ವಾರಣಾಸಿಯಲ್ಲಿರುವುದು ಗೊತ್ತಾಗಿತ್ತು. ಥಾಣೆ ಪೊಲೀಸರ ತಂಡ ಉತ್ತರ ಪ್ರದೇಶದ ದೇವಸ್ಥಾನ ಪಟ್ಟಣ ವಾರಣಾಸಿಗೆ ತೆರಳಿದಾಗ ಆರೋಪಿ ವೇಶ ಮರೆಸಿಕೊಂಡಿದ್ದ .ಸ್ಥಳೀಯರು ಮತ್ತು ತಾಂತ್ರಿಕ ಬುದ್ಧಿವಂತಿಕೆಯನ್ನು ಬಳಸಿ ಲೊಂಡೆಯನ್ನು ನಮ ತಂಡ ಬಂಧಿಸಿ ಠಾಣೆಗೆ ಕರೆತರಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ

RELATED ARTICLES

Latest News