Monday, November 25, 2024
Homeರಾಷ್ಟ್ರೀಯ | Nationalರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ವಿಜಯ ಕಿಶೋರ್‌ ರಹತ್ಕರ್‌ ನೇಮಕ

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ವಿಜಯ ಕಿಶೋರ್‌ ರಹತ್ಕರ್‌ ನೇಮಕ

Vijaya Kishore Rahatkar, Former BJP Women's Wing Chief, Appointed As NCW Chairperson

ನವದೆಹಲಿ,ಅ. 19 – ವಿಜಯ ಕಿಶೋರ್‌ ರಾಹತ್ಕರ್‌ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅಧಿಕೃತ ಆದೇಶ ತಿಳಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ, 1990 ರ ಸೆಕ್ಷನ್‌ 3 ರ ಅಡಿಯಲ್ಲಿ ನೇಮಕಾತಿಯು ಮೂರು ವರ್ಷಗಳ ಅವಧಿಗೆ ಅಥವಾ ಆಕೆಗೆ 65 ವರ್ಷ ತಲುಪುವವರೆಗೆ, ಯಾವುದು ಮೊದಲು ಬರುತ್ತದೆಯೋ ಅದು ಅನ್ವಯ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸರ್ಕಾರಿ ಅಧಿಸೂಚನೆಯಲ್ಲಿ ಘೋಷಿಸಲಾಗಿದೆ.

ರೇಖಾ ಶರ್ಮಾ ಅವರ ಉತ್ತರಾಧಿಕಾರಿಯಾಗಿ ವಿಜಯ ಕಿಶೋರ್‌ ರಾಹತ್ಕರ್‌ ಸ್ಥಾನ ತುಂಬಲಿದ್ದಾರೆ ಮತ್ತು ಅವರ ಅಧಿಕಾರಾವಧಿಯು ತಕ್ಷಣದಿಂದ ಜಾರಿಗೆ ಬರಲಿದೆ. ಈ ಪ್ರಕಟಣೆ ಭಾರತದ ಗೆಜೆಟ್‌ನಲ್ಲಿಯೂ ಪ್ರಕಟಿಸಲಾಗುತ್ತಿದೆ.

ರಹತ್ಕರ್‌ ಅವರ ನೇಮಕಾತಿಯ ಜೊತೆಗೆ, ಅರ್ಚನಾ ಮಜುಂದಾರ್‌ ಅವರನ್ನು ಮೂರು ವರ್ಷಗಳ ಅವಧಿಗೆ ಅಧಿಕೃತವಾಗಿ ಸದಸ್ಯರಾಗಿ ಹೆಸರಿಸಲಾಗಿದೆ. , ಶಾಸನಬದ್ಧ ಸಂಸ್ಥೆಯಾಗಿ ಮಹಿಳೆಯರ ಹಕ್ಕುಗಳ ಪ್ರಗತಿಗೆ ಕೆಲಸ ಮಾಡಲು ಅಧಿಕಾರವನ್ನು ಹೊಂದಿದೆ. ಇದರ ಆದೇಶವು ಮಹಿಳೆಯರಿಗೆ ಒದಗಿಸಲಾದ ಸಾಂವಿಧಾನಿಕ ಮತ್ತು ಕಾನೂನು ರಕ್ಷಣೆಗಳನ್ನು ಪರಿಶೀಲಿಸುವುದನ್ನು ಒಳಗೊಂಡಿದೆ.

ರಹತ್ಕರ್‌ ಅವರು ವಿವಿಧ ರಾಜಕೀಯ ಮತ್ತು ಸಾಮಾಜಿಕ ಜವಾಬ್ದಾರಿಗಳಲ್ಲಿ ನಾಯಕತ್ವದ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ (2016-2021) ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಅವರು ಸಕ್ಷಮಾ (ಆಸಿಡ್‌ ದಾಳಿಯಿಂದ ಬದುಕುಳಿದವರಿಗೆ ಬೆಂಬಲ), ಪ್ರಜ್ವಲ (ಕೇಂದ್ರ ಸರ್ಕಾರದ ಯೋಜನೆಗಳಿಗೆ ಸ್ವ-ಸಹಾಯ ಗುಂಪುಗಳನ್ನು ಲಿಂಕ್‌ ಮಾಡುವುದು) ನಂತಹ ಉಪಕ್ರಮಗಳನ್ನು ಮುನ್ನಡೆಸಿದರು. ಸುಹಿತಾ (ಮಹಿಳೆಯರಿಗಾಗಿ 247 ಸಹಾಯವಾಣಿ ಸೇವೆ).

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ), ತ್ರಿವಳಿ ತಲಾಖ್‌ ವಿರೋಧಿ ಕೋಶಗಳು ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳಂತಹ ವಿಷಯಗಳ ಮೇಲೆ ಕೇಂದ್ರೀಕರಿಸುವ ಕಾನೂನು ಸುಧಾರಣೆಗಳಲ್ಲಿ ಅವರು ಕೆಲಸ ಮಾಡಿದರು.

ರಹತ್ಕರ್‌ ಅವರು ಡಿಜಿಟಲ್‌ ಸಾಕ್ಷರತಾ ಕಾರ್ಯಕ್ರಮಗಳನ್ನು ಪರಿಚಯಿಸಿದರು ಮತ್ತು ಮಹಿಳೆಯರ ಸಮಸ್ಯೆಗಳಿಗೆ ಮೀಸಲಾಗಿರುವ ಸಾದ್‌‍ ಎಂಬ ಪ್ರಕಟಣೆಯನ್ನು ಪ್ರಾರಂಭಿಸಿದರು. 2007 ರಿಂದ 2010 ರವರೆಗೆ ಛತ್ರಪತಿ ಸಂಭಾಜಿನಗರದ ಮೇಯರ್‌ ಆಗಿ, ರಾಹತ್ಕರ್‌ ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದರು.

ಅವರು ಪುಣೆ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ,ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆಗಳು ರಾಷ್ಟ್ರೀಯ ಕಾನೂನು ಪ್ರಶಸ್ತಿ ಮತ್ತು ರಾಷ್ಟ್ರೀಯ ಸಾಹಿತ್ಯ ಪರಿಷತ್ತಿನ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪುರಸ್ಕಾರ ಇವರಿಗೆ ಸಂದಿದೆ.

RELATED ARTICLES

Latest News