Sunday, November 24, 2024
Homeಮನರಂಜನೆನಟ ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

ನಟ ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

Kiccha Sudeep-mother-passed-away

ಬೆಂಗಳೂರು, ಅ.20– ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರೋಜಾ ಅವರು ಇಂದು ಬೆಳಗ್ಗೆ 7.04ರಲ್ಲಿ ತಮ್ಮ ಜೀವನದ ಪಯಣ ಮುಗಿಸಿದ್ದಾರೆ.

ಜೆ ಪಿ ನಗರದಲ್ಲಿರುವ ಕಿಚ್ಚನ ನಿವಾಸದಲ್ಲಿ ಬೆಳಗ್ಗೆ 11 ಗಂಟೆಯಿಂದ ಸರೋಜಾ ಅವರ ಪಾರ್ಥೀವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಚಿತ್ರರಂಗ ಹಾಗೂ ರಾಜಕೀಯದ ಹಲವು ಗಣ್ಯರು ಹಾಗೂ ಸುದೀಪ್ ಅಭಿಮಾನಿಗಳು ಅಂತಿಮ ದರ್ಶನ ಪಡೆದಿದ್ದಾರೆ.

ಬಿಗ್‌ಬಾಸ್ ಸೀಸನ್ 11ರ ನಿಮಿತ್ತ ನಿನ್ನೆ ಇದ್ದ ಬಿಗ್‌ಬಾಸ್ ಶೋನ ಶೂಟಿಂಗ್ ಅನ್ನು ಸುದೀಪ್ ಅವರು ಬೇಗ ಮುಗಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದರಿಂದ ನಿನ್ನೆಯ ವಾರದ ಪಂಚಾಯಿತಿಯ ಪ್ರಸಾರದ ಅವಧಿಯೂ ಕಡಿಮೆಯಾಗಿತ್ತು.

ಇತ್ತೀಚೆಗೆ ಬಿಗ್‌ಬಾಸ್‌ನ ವೇದಿಕೆಗೆ ಬರಿಗಾಲಲ್ಲಿ ಬಂದಿದ್ದ ಕಿಚ್ಚ ಸುದೀಪ್, ಕ್ಯಾಮೆರಾವನ್ನು ನೋಡಿಕೊಂಡು ಅಮ್ಮ ನೋಡಿ ಬರಿಗಾಲಲ್ಲಿ ಬಂದಿದ್ದೀನಿ, ನವರಾತ್ರಿ ಹಬ್ಬಕ್ಕೆ ತಕ್ಕಂತೆ ಡ್ರೆಸ್ ಹಾಕಿಕೊಂಡಿದ್ದೀನಿ ಎಂದು ಸುದೀಪ್ ಭಾವುಕರಾಗಿ ನುಡಿದಿದ್ದರು.

RELATED ARTICLES

Latest News