ಬೆಂಗಳೂರು,ಅ.21- ವಿದೇಶಗಳಿಂದ ಅಂಚೆ ಕಚೇರಿ ಮೂಲಕ ಡ್ರಗ್ಸ್ ತರಿಸುವುದನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಕೆಲವು ಡ್ರಗ್ಸ್ ಪೆಡ್ಲರ್‌ಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸುತ್ತಿದ್ದಾರೆ.
ಇತ್ತೀಚೆಗೆ ಕಸ್ಟಮ್ ಹಾಗೂ ಸಿಸಿಬಿ ಅಧಿಕಾರಿಗಳು ಜಂಟಿಯಾಗಿ ನಗರದ ಚಾಮರಾಜಪೇಟೆಯಲ್ಲಿರುವ ಫಾರಿನ್ ಪೋಸ್ಟ್ ಆಫೀಸ್‌ನಲ್ಲಿ ಪರಿಶೀಲನೆ ನಡೆಸಿದ್ದರು.
ಈ ಸಂದರ್ಭದಲ್ಲಿ ವಿದೇಶಗಳಿಂದ ನಗರಕ್ಕೆ ಬಂದಿದ್ದ ಸುಮಾರು 3,500 ಅನುಮಾನಸ್ಪದ ಪಾರ್ಸಲ್‌ಗಳನ್ನು ಶ್ವಾನದಳದ ಸಹಾಯದಿಂದ ಪರಿಶೀಲಿಸಿದಾಗ 606 ಪಾರ್ಸಲ್‌ಗಳಲ್ಲಿ ನಿಷೇಧಿತ ಮಾದಕವಸ್ತು ಇರುವುದು ಕಂಡುಬಂದಿತು. ಇದರ ಒಟ್ಟು ಬೆಲೆ 21.17 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಸಿಸಿಬಿ ಪೊಲೀಸರು 12 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿಗಳು ಈ ಡ್ರಗ್ಸ್ ಅನ್ನು ಹಾಂಕಾಂಗ್, ಥೈಲಾಂಡ್, ಅಮೆರಿಕ, ಬ್ರಿಟನ್ ಮುಂತಾದ ವಿದೇಶಗಳಿಂದ ತರಿಸಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಈ ಡ್ರಗ್‌್ಸ ಪೆಡ್ಲರ್‌ಗಳು ಅಂತಾರಾಷ್ಟ್ರೀಯ ಡ್ರಗ್‌್ಸ ನೆಟ್‌ವರ್ಕ್ ಅನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.