Friday, November 22, 2024
Homeಬೆಂಗಳೂರುಮಳೆಗೆ ತತ್ತರಿಸಿದ ಬೆಂಗಳೂರು ಜನತೆಗೆ ಸ್ಪಂದಿಸದ ಸರ್ಕಾರ : ಎಸ್‌‍.ಹರೀಶ್‌ ಆರೋಪ

ಮಳೆಗೆ ತತ್ತರಿಸಿದ ಬೆಂಗಳೂರು ಜನತೆಗೆ ಸ್ಪಂದಿಸದ ಸರ್ಕಾರ : ಎಸ್‌‍.ಹರೀಶ್‌ ಆರೋಪ

the people of Bengaluru who were shaken by the rain did not respond to the government:

ಬೆಂಗಳೂರು, ಅ.21- ಸಿಲಿಕಾನ್‌ ಸಿಟಿ ಮಳೆಯಿಂದ ತತ್ತರಿಸಿದ್ದು ಹಲವು ಬಡಾವಣೆ ನದಿಯಂ ತಾಗಿದ್ದು ಮನೆಗಳಿಗೆ ನೀರು ನುಗ್ಗಿ ಭಾರಿ ಅವಾಂತರವನ್ನೇ ಸೃಷ್ಟಿಸಿದೆ ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದ್ದ ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳು ಕಾಣಿಯಾಗಿದ್ದಾರಾ ಎಂದು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್‌‍.ಹರೀಶ್‌ ಅವರು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಇತ್ತೀಚೆಗೆ ಮುಚ್ಚಿದ್ದ ರಸ್ತೆ ಗುಂಡಿಗಳು ಮತ್ತೆ ಬಾಯ್ತೆರೆದು ಕೊಂಡಿದ್ದು ಪಾಲಿಕೆಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ, ಟೆಂಡರ್‌ ಶೂರ್‌ ಅಡಿಯಲ್ಲಿ ನಗರದ ಕನ್ನಿಂಗ್‌ ಹ್ಯಾಮ್‌ ರಸ್ತೆ ಹಾಗೂ ಮತ್ತಿತರ ರಸ್ತೆಗಳು ಸಹ ಮಳೆಯಿಂದ ಜಲಾವೃತವಾಗಿದ್ದು, ಕಳಪೆ ಕಾಮಗಾರಿಯಿಂದ ಎಲ್ಲೆಂದರಲ್ಲಿ ಗುಂಡಿ ಬಿದ್ದಿದ್ದರೂ ಸಹ ಸರ್ಕಾರ ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಉಪಚುನಾವಣೆ, ಮುಡಾ ಹಗರಣದಿಂದ ಮುಖ್ಯಮಂತ್ರಿಗಳ ರಕ್ಷಣೆಯಲ್ಲೇ ಮುಳುಗಿರುವಾಗ ಬೆಂಗಳೂರು ಮುಳುಗಡೆ ಅವರ ಕಣ್ಣಿಗೆ ಕಾಣುತ್ತಿಲ್ಲ ಜನರ ಸಮಸ್ಯೆಗಳ ಕಡೆ ಗಮನ ಹರಿಸದೆ ಮಳೆಯಿಂದ ಹಾನಿಯಾದ ಬಡಾವಣೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದೆ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿಗಳು ಕಾಣೆಯಾಗಿದ್ದಾರೆ? ಇವರನ್ನು ಹುಡುಕಿ ಕೋಡಿ , ಇತ್ತ ಬಿಬಿಎಂಪಿಯೂ ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ದಿವ್ಯನಿರ್ಲಕ್ಷ ತೋರುತ್ತಿದೆ ಎಂದು ಕಿಡಿಕಾರಿದ್ದಾರೆ

RELATED ARTICLES

Latest News