ನವದೆಹಲಿ,ಅ.22- ಕೆನಡಾದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿರುವ ಮಧ್ಯೆ, ಭಾರತವು ತನ್ನ ಎದುರಾಳಿಗಳ ವಿರುದ್ಧ ಪರಮಾಣು ನಿರೋಧಕತೆ ಯನ್ನು ಬಲಪಡಿಸಲು ಈ ವಾರ ವಿಶಾಖಪಟ್ಟಣಂನ ಶಿಪ್ ಬಿಲ್ಡಿಂಗ್ ಸೆಂಟರ್ನಲ್ಲಿ ನಾಲ್ಕನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (ಎಸ್ಎಸ್ಬಿಎನ್) ಜಲಾಂತ ರ್ಗಾಮಿ ನೌಕೆಯಲ್ಲಿ ಸದ್ದಿಲ್ಲದೆ ಬಿಡುಗಡೆ ಮಾಡಿದೆ.
ಭಾರತದ ಎರಡನೇ ಐಎನ್ ಎಸ್ ಅರಿಹಂತ್ ಕೇಂದ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಆ.29 ರಂದು ಲೋಕಾರ್ಪಣೆ ಮಾಡಿದ್ದಾರೆ. ಮೂರನೇ ಐಎನ್ ಎಸ್ ಅರಿಹಂತ್ ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. ಅ.9 ರಂದು ಭದ್ರತಾ ಕ್ಯಾಬಿನೆಟ್ ಸಮಿತಿ ಇಂಡೋ-ಪೆಸಿಫಿಕ್ನಲ್ಲಿ ಯಾವುದೇ ವಿರೋಧಿಗಳನ್ನು ತಡೆಯಲು ಎರಡು ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಗೊತ್ತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪರಮಾಣು ನಿರೋಧಕತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡದೆ ಗೌಪ್ಯತೆಯನ್ನು ಕಾಪಾಡಿಕೊಂಡಿದೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ದಮಗುಂಡಂ ಅರಣ್ಯ ಪ್ರದೇಶದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅತಿ ಕಡಿಮೆ ಆವರ್ತನ ನೌಕಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಅ. 16 ರಂದು ಎಸ್ಎಸ್ಬಿಎನ್ ಎಂಬ ಸಂಕೇತನಾಮದೊಂದಿಗೆ ನಾಲ್ಕನೇ ಎಸ್ 4 ಅನ್ನು ಪ್ರಾರಂಭಿಸಲಾಗಿದೆ.
ಹೊಸದಾಗಿ ಪ್ರಾರಂಭಿಸಲಾದ ಎಸ್ಎಸ್ಬಿಎನ್ 4 ಸುಮಾರು ಶೇ.75 ಸ್ಥಳೀಯ ತಂತ್ರಜ್ಞಾನ ಹೊಂದಿದೆ. 3,500 ಕೆ.ಎಂ ವ್ಯಾಪ್ತಿಯ ಏ-4 ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮಾತ್ರ ಹೊಂದಿದೆ, ಇದನ್ನು ಲಂಬ ಉಡಾವಣಾ ವ್ಯವಸ್ಥೆಗಳ ಮೂಲಕ ಹಾರಿಸಬಹುದು. ಮೊದಲನೆಯ ಎಸ್ ಎಸ್ ಬಿ ಎನ್ ಅರಿಹಂತ್ 750 ಕಿಮೀ ವ್ಯಾಪ್ತಿಯ ಏ-15 ಪರಮಾಣು ಕ್ಷಿಪಣಿಗಳನ್ನು ಹೊತ್ತೊಯ್ಯುತ್ತದೆ.
ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾಟ್ ಎರಡೂ ಈಗಾಗಲೇ ಆಳ ಸಮುದ್ರದ ಗಸ್ತು ತಿರುಗುತ್ತಿವೆ ಮತ್ತು ರಷ್ಯಾದ ಅಕುಲಾ ವರ್ಗದ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ 2028 ರಲ್ಲಿ ಲೀಸ್ಗೆ ಸೇರಲು ಸಿದ್ಧವಾಗಿದೆ.