Wednesday, October 23, 2024
Homeರಾಷ್ಟ್ರೀಯ | Nationalತನ್ನ ಪತ್ನಿ ಟ್ರಾನ್ಸ್‌ಜೆಂಡರ್ ಎಂದು ಆರೋಪಿಸಿ ಲಿಂಗತ್ವ ಪರೀಕ್ಷೆಗಾಗಿ ಹೈಕೋರ್ಟ್ ಮೊರೆಹೋದ ಪತಿ..!

ತನ್ನ ಪತ್ನಿ ಟ್ರಾನ್ಸ್‌ಜೆಂಡರ್ ಎಂದು ಆರೋಪಿಸಿ ಲಿಂಗತ್ವ ಪರೀಕ್ಷೆಗಾಗಿ ಹೈಕೋರ್ಟ್ ಮೊರೆಹೋದ ಪತಿ..!

delhi-man-claims-wife-is-transgender-moves-high-court-seeking-medical-examination

ನವದೆಹಲಿ,ಅ.23- ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಟ್ರಾನ್ಸ್‌ಜೆಂಡರ್ ಎಂದು ಆರೋಪಿಸಿ, ಆಕೆಯ ಲಿಂಗತ್ವ ಪರೀಕ್ಷೆ ನಡೆಸಬೇಕು ಎಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ವಿಷಯವನ್ನು ಮುಚ್ಚಿಟ್ಟು ಮೋಸದಿಂದ ತನಗೆ ಮದುವೆ ಮಾಡಲಾಗಿದೆ. ಇದರಿಂದ ಮಾನಸಿಕ ಆಘಾತ ಉಂಟಾಗಿದೆ ಎಂದು ಆರೋಪಿಸಿದ್ದಾನೆ.

ವಕೀಲ ಅಭಿಷೇಕ್ ಕುಮಾರ್ ಚೌಧರಿ ಸಲ್ಲಿಸಿದ ಮನವಿಯಲ್ಲಿ ವ್ಯಕ್ತಿಯ ಲಿಂಗದ ಗುರುತು ಖಾಸಗಿ ವಿಷಯವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ ಮದುವೆಯ ಸಂದರ್ಭದಲ್ಲಿ ಆರೋಗ್ಯಕರ ವೈವಾಹಿಕ ಜೀವನವನ್ನು ನಡೆಸಲು ಖಚಿತಪಡಿಸಿಕೊಳ್ಳಲು ಅವಕಾಶವಿದೆ.

ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಎರಡೂ ವ್ಯಕ್ತಿಗಳ ಜೀವನಕ್ಕೆ ಮೂಲಭೂತ ಹಕ್ಕುಗಳನ್ನು ಗೌರವಿಸುವುದು ಬಹಳ ಮುಖ್ಯ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕಾನೂನಿನಲ್ಲಿ ಪತ್ನಿ ಮಹಿಳೆ ಎಂದು ಅರ್ಹತೆ ಹೊಂದಿಲ್ಲದಿದ್ದರೆ ಅರ್ಜಿದಾರರು ಜೀವನಾಂಶವನ್ನು ಪಾವತಿಸಬೇಕಾಗಿಲ್ಲ. ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಾನೂನುಗಳಡಿ ಆರೋಪಗಳನ್ನು ಎದುರಿಸಬೇಕಾಗಿಲ್ಲ ಎಂದು ವಕೀಲರು ಹೇಳಿದ್ದಾರೆ.

ಇದಕ್ಕೂ ಮುನ್ನ ಅರ್ಜಿದಾರರು ತಮ ಪತ್ನಿಯ ಪರೀಕ್ಷೆಗಾಗಿ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಕೋರಲು ಸಿಪಿಸಿಯ ಸೆಕ್ಷನ್ 151 ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ವಿಚಾರಣಾ ನ್ಯಾಯಾಲಯವು ವೈದ್ಯಕೀಯ ಪರೀಕ್ಷೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು

RELATED ARTICLES

Latest News