Wednesday, October 23, 2024
Homeರಾಜಕೀಯ | Politicsಕಮಲಬಿಟ್ಟು 'ಕೈ'ಹಿಡಿದ ಯೋಗೇಶ್ವರ್ ನಿರ್ಧಾರಕ್ಕೆ ಪುತ್ರಿ ನಿಶಾ ಬೇಸರ

ಕಮಲಬಿಟ್ಟು ‘ಕೈ’ಹಿಡಿದ ಯೋಗೇಶ್ವರ್ ನಿರ್ಧಾರಕ್ಕೆ ಪುತ್ರಿ ನಿಶಾ ಬೇಸರ

Daughter Nisha is upset with Yogeshwar's decision to leave the BJP

ಬೆಂಗಳೂರು,ಅ.23– ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿ ದ್ದಂತೆ ಅವರ ಪುತ್ರಿ ನಿಶಾ ಯೋಗೇಶ್ವರ್ ತಮ ಆಕ್ರೋಶವನ್ನು ಹೊರಹಾಕಿದ್ದಾರೆ. ದೇವರು ನನಗೆ ಎತ್ತರ, ಬಣ್ಣ, ತೂಕ ಎಲ್ಲವನ್ನೂ ಚೆನ್ನಾಗಿ ಕೊಟ್ಟಿದ್ದಾನೆ. ವಿದ್ಯೆ ಕೂಡ ಸಿಕ್ಕಿದೆ.

ಆದರೆ ನಾನು ಜೀವನವನ್ನು ಹಲವಾರು ಬಾರಿ ಮೊದಲಿನಿಂದ ಶುರು ಮಾಡಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಹೇಳಿಕೊಂಡಿದ್ದಾರೆ.ನಾನು 13 ವರ್ಷದವಳಿದ್ದಾಗ ನನ್ನ ತಂದೆ ಬೇರೊಂದು ಸಂಸಾರವನ್ನು ಕಟ್ಟಿಕೊಂಡಿದ್ದನ್ನು ಪತ್ರಿಕೆಗಳ ಮೂಲಕ ತಿಳಿದುಕೊಂಡೆ. ಅದನ್ನು ಸಹಿಸಿಕೊಳ್ಳಲಾಗಲಿಲ್ಲ.

ಇದ್ಯಾವುದೂ ಬೇಡ ಎಂದು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಟಾಪರ್ ಆಗಿ ಪಾಸಾದೆ. ಹೊಸ ಬದುಕು ಕಟ್ಟಿಕೊಳ್ಳಲು ಅಮೆರಕಗೆ ಹೋಗಿ ನಾಲ್ಕು ವರ್ಷ ವ್ಯಾಸಂಗ ಮುಗಿಸಿ ವಾಪಸ್ ಬಂದಾಗ ಓದಿದ್ದು ಸಾಕು, ಇಲ್ಲೇ ಬದುಕು ಕಟ್ಟಿಕೊ ಎಂದು ತಂದೆ ಹೇಳಿದರು. ಶಿಕ್ಷಣ ನಿಲ್ಲಿಸಬಾರದು ಎಂದು ಮತ್ತೆ ಅಮೆರಿಕಾಗೆ ಹೋಗಿ ಕೊನೆ ಸೆಮಿಸ್ಟರ್ ಮುಗಿಸಿ ಪದವಿ ಪಡೆದುಕೊಂಡೆ. ಇಲ್ಲಿ ಬಂದು ಕೆಲಸ ಕೊಡಿಸಿ ಎಂದಾಗ ಮೂರು ವರ್ಷ ಅಲೆಸಿದರು. ನನ್ನ ತಾಯಿ, ತಮನ ಭವಿಷ್ಯದ ಬಗ್ಗೆಯೂ ಆತಂಕವಿತ್ತು.

ಆ ವೇಳೆ ಚಲನಚಿತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು. ಅದು ತಂದೆಯ ಮೂಲಕ ಬಂದಿದ್ದಲ್ಲ. ದರ್ಶನ್ ಅವರ ಜೊತೆ ಅಂಬರೀಷ ಚಿತ್ರದಲ್ಲಿ ನಟಿಸುವ ಅವಕಾಶವಿತ್ತು. ಮಹೇಶ್ ಸುಖಧರೆ ನಿರ್ದೇಶಕರಾಗಿದ್ದರು. 13 ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಮಧ್ಯೆ ಬ್ರೇಕ್ ಬಂದಿತ್ತು. ಅನಂತರ ಚಿತ್ರದಿಂದ ನನ್ನನ್ನು ಹೊರಹಾಕಲಾಗಿತ್ತು. ಅದಕ್ಕೆ ಕಾರಣ ನನ್ನ ತಂದೆ.

ನನ್ನ ಮಗಳು ಚಿತ್ರರಂಗದಲ್ಲಿ ಮುಂದುವರೆಯಬಾರದು ಎಂದು ಹೊರಹಾಕಿಸಿದ್ದರು. ಅವರು ಮನಸ್ಸು ಮಾಡಿದ್ದರೆ ನನಗೆ ಎಲ್ಲಾ ರೀತಿಯ ಭದ್ರತೆ ಒದಗಿಸಬಹುದಿತ್ತು. ಆದರೆ ಬೆಳೆಯಬಾರದು ಎಂದು ಅಡ್ಡಿಪಡಿಸಿದರು. ನನ್ನ ತಂದೆ ಪ್ರಭಾವಿಯಾಗಿದ್ದರಿಂದ ಅವರನ್ನು ಎದುರು ಹಾಕಿಕೊಂಡು ಬೆಳೆಯುವುದು ಕಷ್ಟಕರವಾಗಿತ್ತು. ನನಗೆ ಯಾರೂ ಅವಕಾಶ ನೀಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಅನಂತರ ಜೀವನವನ್ನು ಮತ್ತೆ ಹೊಸದಾಗಿ ಕಟ್ಟಿಕೊಳ್ಳಲು ಒಬ್ಬಳೇ ಬಾಂಬೆಗೆ ತೆರಳಿ ಕಚೇರಿಗಳಿಗೆ ಅಲೆದೆ. ಯಾವ ಅವಕಾಶಗಳೂ ಸಿಗಲಿಲ್ಲ. ಅಲ್ಲಿಂದ ವಾಪಸ್ ಕರೆಸಿಕೊಳ್ಳಲು ತಂದೆ ತುಂಬಾ ಪ್ರಯತ್ನ ಪಟ್ಟರು. ಅವರ ಮಾತು ಕೇಳಿ 2016 ರಲ್ಲಿ ವಾಪಸ್ ಬಂದೆ. ಅನಂತರ ಅವರ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೆ.

ಒಟ್ಟಾಗಿ ಬ್ಯುಸಿನೆಸ್ ಮಾಡೋಣ ಎಂದು ಭರವಸೆ ನೀಡಿದರು. ಇದನ್ನು ನಂಬಿ ನಾನು ಸ್ವತಂತ್ರ್ಯವಾಗಿ ಬದುಕು ಕಟ್ಟಿಕೊಳ್ಳಬಹುದು ಎಂದು ನಿರೀಕ್ಷಿಸಿದ್ದೆ. ಒಂದು ಹಂತದಲ್ಲಿ ಲೋಕಸಭಾ ಚುನಾವಣೆಯ ಟಿಕೆಟ್ ಸಿಗಬಹುದು ಎಂಬ ಚರ್ಚೆಗಳಾದವು. ಅದನ್ನೂ ಕೂಡ ತಂದೆಯವರೇ ತಪ್ಪಿಸಿದ್ದಾರೆ. ನನಗೆ ನನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗಲಿಲ್ಲ.

ಮತ್ತೆ ಹೊಸದಾಗಿ ಜೀವನ ಕಟ್ಟಿಕೊಳ್ಳಲು ಅಮೆರಕಾಗೆ ಹೋಗಿ ಅಲ್ಲಿ ಕೆಲಸಕ್ಕೆ ಸೇರಿ ನೆಮದಿಯ ಜೀವನ ಮಾಡಲು ಶುರು ಮಾಡಿದಾಗ ಕೋವಿಡ್ ಶುರುವಾಗಿತ್ತು. ಮತ್ತೆ ತಂದೆ ಕರೆ ಮಾಡಿ ವಾಪಸ್ ಕರೆದರು. ಅಪ್ಪನ ಮಾತನ್ನು ಮೀರಬಾರದು ಎಂದು ವಾಪಸ್ ಬಂದೆ ಎಂದು ವಿವರಿಸಿದ್ದಾರೆ.

ಮದುವೆ ಮಾಡಿಸುವುದಾಗಿ ಹೇಳಿ 2 ವರ್ಷ ಕಾಲಾಹರಣ ಮಾಡಿದರು. ಈ ನಡುವೆ ನನ್ನ ಮಲತಾಯಿ ಶೀಲಮ ಅಪಪ್ರಚಾರ ಮಾಡುತ್ತಾರೆ. ಮಗಳ ಮದುವೆಗಾಗಿ ಬ್ರೋಕರ್ನನ್ನು ಭೇಟಿ ಮಾಡಿಸಿದ ಮೊದಲ ತಂದೆ ಯೋಗೇಶ್ವರ್ ಎಂದು ಕಿಡಿಕಾರಿದ್ದಾರೆ.ನನಗೊಂದು ಬ್ಯುಸಿನೆಸ್ ಹಾಕಿಕೊಡಿ. ನಾನು ಅದನ್ನು ಬೆಳೆಸಿಕೊಂಡು ಹೋಗುತ್ತೇನೆ ಎಂದು ಕೇಳಿಕೊಂಡೆ. ನನ್ನ ಮೇಲೆ ಅವಲಂಬಿತಳಾಗಬೇಡ. ನಿನಗೆ ಕೊಡಲು ನನ್ನ ಬಳಿ ಏನೂ ಇಲ್ಲ ಎಂದರು.

ಇಂದು ನನಗೆ ಅವರನ್ನು ನಂಬಲು ಶಕ್ತಿಯಿಲ್ಲ. ಇದು ಕೊನೆ ಎಂದು ಮತ್ತೆ ಅಮೆರಿಕಾಗೆ ಹೋಗಿದ್ದೆ. ಅಲ್ಲಿ ಕೆಲಸ ಹುಡುಕುವಾಗ ಇಲ್ಲಿ ಚನ್ನಪಟ್ಟಣದಲ್ಲಿ ತಾಯಿ, ತಮನನ್ನು ಮನೆಯಿಂದ ಹೊರಹಾಕಿರುತ್ತಾರೆ. ಹೀಗಾಗಿ ಮತ್ತೆ ನಾನು ವಾಪಸ್ ಬರಬೇಕಾಗುತ್ತದೆ. ಅವರ ಮನೆಗೆ ಹೋಗಿ ಕೇಳಿದಾಗ ಕಪಾಳಕ್ಕೆ ಹೊಡೆದು, ಬಾಯಲ್ಲಿ ರಕ್ತ ಬರುವಂತೆ ಹಲ್ಲೆ ಮಾಡುತ್ತಾರೆ.

ಇದಾದ ಮೇಲೂ ತಂದೆ ಮೇಲೆ ನಂಬಿಕೆ ಇರಬೇಕು ಎಂದು ಮೂರು ತಿಂಗಳು ತಾಳೆಯಿಂದ ಕಾಯುತ್ತಿದ್ದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಬಳಿಕ ಡಿ.ಕೆ.ಶಿವಕುಮಾರ್ ಅವರ ಬಳಿ ವೈಯಕ್ತಿಕ ವಿಚಾರಕ್ಕಾಗಿ ಹೋಗಿದ್ದೆ. ರಾಜಕೀಯಕ್ಕಾಗಿ ಅಲ್ಲ. ಆದರೆ ಅಲ್ಲೂ ಅಡ್ಡಿಪಡಿಸಿದ್ದಾರೆ. ನನಗೆ ಯಾವ ಸ್ಥಾನವೂ ಸಿಗದಂತೆ ನೋಡಿಕೊಂಡಿದ್ದಾರೆ ಎಂದು ದೂರಿದರು.

ಆ ವೇಳೆಗಾಗಲೇ ನನ್ನ ಸಂಪಾದನೆ, ಉಳಿತಾಯ ಎಲ್ಲವೂ ಖಾಲಿಯಾಗಿರುತ್ತದೆ. ಸರಳವಾಗಿ ಜೀವನ ಮಾಡೋಣ ಎಂದು ಮತ್ತೆ ಹೊಸದಾಗಿ ಜೀವನ ಆರಂಭಿಸುತ್ತೇನೆ. ನನ್ನ ಬಳಿಯಿದ್ದ ಮೌಲ್ಯಯುತವಾದ ಆಸ್ತಿಯನ್ನು ಬಳಕೆ ಮಾಡಿಕೊಂಡು ಹೊಸ ಜೀವನ ಶುರು ಮಾಡಲು ಯತ್ನಿಸಿದಾಗ ಮತ್ತೊಂದು ಸಮಸ್ಯೆ ಎದುರಾಗಿದೆ.ನನ್ನ ತಂದೆ ಸಮನ್ಸ್ ನೀಡಿ ಮಗಳ ಆಸ್ತಿಯಲ್ಲಿ ಭಾಗ ಕೇಳಿದ್ದಾರೆ. ನನ್ನ ವಾಕ್ ಸ್ವಾತಂತ್ರ್ಯವನ್ನು ಕಸಿದಿದ್ದಾರೆ.

ದೇವರು ನನ್ನ ಹಣೆಬರಹದಲ್ಲಿ ಏನು ಬರೆದಿದ್ದಾನೋ ಗೊತ್ತಿಲ್ಲ. ಆದರೆ ಇವರು ನನ್ನನ್ನು ಬೀದಿಗೆ ತಂದು ಭಿಕ್ಷೆ ಬೇಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News