Monday, November 25, 2024
Homeರಾಜಕೀಯ | Politicsಯೋಗೇಶ್ವರ್ ಬಿಜೆಪಿಗೆ ದ್ರೋಹ ಬಗೆದಿದ್ದಾರೆ, ಚನ್ನಪಟ್ಟಣದ ಜನ ತಕ್ಕ ಪಾಠ ಕಲಿಸುತ್ತಾರೆ : ಆರ್.ಅಶೋಕ್

ಯೋಗೇಶ್ವರ್ ಬಿಜೆಪಿಗೆ ದ್ರೋಹ ಬಗೆದಿದ್ದಾರೆ, ಚನ್ನಪಟ್ಟಣದ ಜನ ತಕ್ಕ ಪಾಠ ಕಲಿಸುತ್ತಾರೆ : ಆರ್.ಅಶೋಕ್

R Ashok on CP Yogeshwar joining Congress

ಬೆಂಗಳೂರು,ಅ.23– ಕಾಂಗ್ರೆಸ್ ಸೇರ್ಪಡೆಯಾ ಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ದ್ರೋಹ ಬಗೆದು ಹೋಗಿದ್ದಾರೆ. ಉಪಚುನಾವಣೆಯಲ್ಲಿ ಅವರಿಗೆ ಚನ್ನಪಟ್ಟಣದ ಜನತೆ ತಕ್ಕಪಾಠ ಕಲಿಸಲ್ಲಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯೋಗೇಶ್ವರ್ಗೆ ಟಿಕೆಟ್ ಕೊಡಿಸಲು ಕೊನೆ ಕ್ಷಣದವರೆಗೂ ಸರ್ವ ಪ್ರಯತ್ನ ಮಾಡಿದೆವು. ಯಾವುದೇ ಕಾರಣಕ್ಕೂ ಅವರು ಕಾಂಗ್ರೆಸ್ ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಈಗ ಏಕಾಏಕಿ ಕಾಂಗ್ರೆಸ್ ಸೇರಿದ್ದಾರೆ. ಈ ಬಾರಿ ಕ್ಷೇತ್ರದ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.

ಅಷ್ಟಕ್ಕೂ ಯೋಗೇಶ್ವರ್ ಬಿಜೆಪಿಯಿಂದ ಬಂದವರಲ್ಲ. ಅವರು ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಬಂದಿರಲಿಲ್ಲ. ಪಕ್ಷದಲ್ಲಿ ಇದ್ದು ಇಲ್ಲದಂತಿದ್ದರು. ಮೈತ್ರಿ ಪಕ್ಷಕ್ಕೆ ದ್ರೋಹ ಬಗೆದಿರುವ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿ.ಪಿ.ಯೋಗೇಶ್ವರ್ ಅವರು ಐದು ಕಡೆಯಿಂದ ಬಿ ಫಾರಂ ತಂದಿದ್ದರು ಎಂಬ ಸುದ್ದಿ ಇದೆ. ನಮ ಮಾತು ಕೇಳದೇ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ನಲ್ಲಿ ಯೋಗೇಶ್ವರ್ಗೆ ಖಂಡಿತ ಭ್ರಮನಿರಸನ ಆಗುತ್ತದೆ ಎಂದು ಭವಿಷ್ಯ ನುಡಿದರು.

ನಾವೆಲ್ಲರೂ ಇದು ಜೆಡಿಎಸ್ ಟಿಕೆಟ್, ಹೆಚ್ಡಿಕೆ ಅವರೇ ತೀರ್ಮಾನ ಮಾಡಬೇಕು ಅಂತನೇ ಹೇಳಿಕೊಂಡು ಬಂದಿದ್ದೆವು. ಹೆಚ್ಡಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆಗೆ ಆಫರ್ ಕೊಟ್ಟರು. ಕಾಂಗ್ರೆಸ್ ಬದಲು ಜೆಡಿಎಸ್ನಿಂದಲೇ ನಿಲ್ಲಬಹುದಿತ್ತು, ಎನ್ಡಿಎಗೆ ಅನುಕೂಲ ಆಗುತ್ತಿತ್ತು. ಸಿಪಿವೈ ಈಗ ಪಕ್ಷ ದ್ರೋಹ ಮಾಡಿ ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಪಿವೈ ನಮಲ್ಲಿ ಹಿರಿಯ ನಾಯಕರಾಗಿದ್ದರು. ಈಗ ಅವರು ಕಾಂಗ್ರೆಸ್ನಲ್ಲಿ ಲಾಸ್ಟ್ ಬೆಂಚ್ನ ನಾಯಕರಾಗಿದ್ದಾರೆ. ಅವರನ್ನು ಅಲ್ಲಿ ಬೆಳೆಯಲು ಡಿ.ಕೆ.ಶಿವಕುಮಾರ್ ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್ ಸೇರಿ ಯೋಗೇಶ್ವರ್ ತಮ ಭವಿಷ್ಯ ಹಾಳು ಮಾಡಿಕೊಂಡರು ಎಂದು ಹೇಳಿದರು.
ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ಉರುಳಿದಾಗ ಒಬ್ಬರಿಂದ ಬಿಜೆಪಿ ಸರ್ಕಾರ ಬರಲಿಲ್ಲ. ಆಗ ಯಾರ್ಯಾರು ಬಿಜೆಪಿಗೆ ಬಂದಿದ್ದರು? ಯಾರು ಕರೆತಂದರು ಎಂಬುದು ಜಗತ್ತಿಗೇ ಗೊತ್ತು. ನಾನೂ ಅವರನ್ನು ಕರೆತಂದೆ, ಯಡಿಯೂರಪ್ಪ, ವಿಜಯೇಂದ್ರ ಸಹ ಕರೆತಂದಿದ್ದಾರೆ, ಯೋಗೇಶ್ವರ್ ಒಬ್ಬರೇ ಕಾರಣರಲ್ಲ ಎಂದು ಗುಡುಗಿದರು.

ಯೋಗೇಶ್ವರ್ ಕಾಂಗ್ರೆಸ್ ಸೇರುತ್ತಾರೆ ಎಂಬ ಬಗ್ಗೆ ನಿನ್ನೆಯೇ ನಮಗೆ ಸುಳಿವಿತ್ತು ಎಂದ ಅವರು, ಇದರ ಬಗ್ಗೆ ಪ್ರಹ್ಲಾದ್ ಜೋಷಿಗೆ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೆವು ಎಂದು ಬೇಸರಗೊಂಡರು. ಚನ್ನಪಟ್ಟಣದಲ್ಲಿ ನಾವೇ ಗೆಲ್ಲುತ್ತೇವೆ. ಅವರು ಹೋದರೂ ನಮಗೇನೂ ನಷ್ಟವುಕ್ಕ, ಅವರು ಇಲ್ಲದಿದ್ದಾಗಲೂ ನಾವು ಗೆದ್ದಿದ್ದೇವೆ. ಎಂದು ಹೇಳಿದರು.

ಈಗ ಜೆಡಿಎಸ್ನವರಯ ಯಾರಿಗೇ ಟಿಕೆಟ್ ಕೊಟ್ರು ಒಗ್ಗಟ್ಟಿನ ನಿಂದ ಕೆಲಸ ಮಾಡಿ ಗೆಲ್ಲಿಸ್ತೇವೆ. ಜೆಡಿಎಸ್ ಅಭ್ಯರ್ಥಿ ಯಾರೇ ಆದರೂ ಮುಕ್ತ ಮನಸಿಂದ ಕೆಲಸ ಮಾಡಿ ಗೆಲ್ಲಿಸ್ತೇವೆ ಎಂದರು.
ಯೋಗೇಶ್ವರ್ ಚನ್ನಪಟ್ಟಣಕ್ಕೆ ಮಾತ್ರ ಸೀಮಿತ. ನಮಲ್ಲಿ ಇನ್ನೂ ಪ್ರಬಲ ಒಕ್ಕಲಿಗ ನಾಯಕರಿದ್ದಾರೆ. ಇವರ ಸೇರ್ಪಡೆ ಹಳೇ ಮೈಸೂರು ಭಾಗದ ಮೇಲೆ ಆಗುವುದಿಲ್ಲ. ಮಾಜಿ ಶೆಟ್ಟರ್ ಅವರು ಕೂಡ ಹೀಗೆ ಕಾಂಗ್ರೆಸ್ಗೆ ಹೋಗಿ ವಾಪಸ್ ಬಂದ್ರು. ಈಗ ಸಿಪಿವೈ ಹೋಗಿದ್ದಾರೆ, ಮುಂದೇನಾಗುತ್ತದೆ ನೀವೇ ನೋಡುತ್ತೀರಿ ಎಂದು ಹೇಳಿದರು.

RELATED ARTICLES

Latest News