Wednesday, October 23, 2024
Homeಕ್ರೀಡಾ ಸುದ್ದಿ | SportsKGF-3 ಚಿತ್ರ ನೋಡಲು ಕಾತರಿಸುತ್ತಿದ್ದಾರಂತೆ ಶುಭಮನ್ ಗಿಲ್

KGF-3 ಚಿತ್ರ ನೋಡಲು ಕಾತರಿಸುತ್ತಿದ್ದಾರಂತೆ ಶುಭಮನ್ ಗಿಲ್

WATCH: Shubman Gill stumps Yash, actor says ‘KGF 3 will...’

ಬೆಂಗಳೂರು, ಅ. 23- ಕೆಜಿಎಫ್ 1 ಚಿತ್ರದ ನಂತರ ಪ್ರಪಂಚದಾದ್ಯಂತ ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ಸದ್ದು ಮಾಡುತ್ತಿದ್ದು, ಹಲವು ಭಾಷೆಗಳ ನಟರ ಹಾಗೂ ಕೆಲವು ಕ್ರಿಕೆಟ್ ಕಲಿಗಳ ಗಮನ ಸೆಳೆದಿದ್ದಾರೆ. ಟೀಮ್ ಇಂಡಿಯಾದ ಯುವ ಸ್ಟಾರ್ ಶುಭಮನ್ ಗಿಲ್ ಕೂಡ ನಾನು ಯಶ್ ಅವರ ಅಭಿಮಾನಿಯಾಗಿದ್ದು ಅವರ ನಟನೆಯ ಕೆಜಿಎಫ್ 3 ಸಿನಿಮಾವನ್ನು ನೋಡಲು ಕಾತರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗುವಂತೆ ಮಾಡಿದ್ದ ಕೆಜಿಎಫ್ 1 ಹಾಗೂ ಕೆಜಿಎಫ್ 2 ಫ್ಯಾನ್ ಇಂಡಿಯಾ ಚಿತ್ರಗಳು ನನಗೆ ಅಚ್ಚುಮೆಚ್ಚು ಆಗಿದ್ದು, ಕೆಜಿಎಫ್ 3 ಸಿನಿಮಾದ ಕುರಿತು ಯಾರಾದರೂ ಯಶ್ ಅವರನ್ನು ಕೇಳಿ ಎಂದು ಶುಭಮನ್ ಗಿಲ್ ಟ್ವಿಟ್ ಮಾಡಿದ್ದರು.

ಇತ್ತೀಚೆಗೆ ಪ್ರಶಸ್ತಿ ಸಮಾರಂಭವೊಂದರಲ್ಲಿ ಹೊಂಬಾಳೆ ಫಿಲ್‌ ನಿರ್ಮಾಪಕ ವಿಜಯ್ ಕಿರಂಗದೂರು ಅವರು ಮುಂಬರುವ 3-4 ತಿಂಗಳಲ್ಲಿ ಕೆಜಿಎಫ್ 3 ಚಿತ್ರದ ಬಗ್ಗೆ ಅಪ್ಡೇಟ್ ನೀಡುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಖ್ಯಾತ ಕ್ರಿಕೆಟಿಗ ಶುಭಮನ್ಗಿಲ್ ಅವರು ನಾನು ಯಶ್ ಅವರ ಅಭಿಮಾನಿಯಾಗಿದ್ದು, ಕೆಜಿಎಫ್ 3 ಕುರಿತು ಸ್ಪಷ್ಟ ಮಾಹಿತಿ ಎಂದು ಕೇಳಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾದಲ್ಲಿ ಸಂದರ್ಶಕಿ ಒಬ್ಬರು ಗಿಲ್ ಕೇಳಿರುವ ಪ್ರಶ್ನೆಗೆ ಉತ್ತರಿಸುವಂತೆ ಯಶ್ ಬಳಿ ಕೇಳಿದ್ದಾರೆ.
ಅದಕ್ಕೆ ಉತ್ತರಿಸಿರುವ ಯಶ್, `ಸದ್ಯ ನಾನು ಟಾಕ್ಸಿಸ್ ಹಾಗೂ ರಾಮಾಯಣ ಚಿತ್ರಗಳತ್ತ ಸಂಪೂರ್ಣವಾಗಿ ಗಮನ ಹರಿಸಿದ್ದೇನೆ, ಈ ಚಿತ್ರಗಳ ನಂತರ ಕೆಜಿಎಫ್3 ಸಿನಿಮಾದ ಚಿತ್ರೀಕರಣವನ್ನು ಸರಿಯಾದ ಸಮಯದಲ್ಲೇ ಕೈಗೆತ್ತಿಕೊಳ್ಳುತ್ತೇವೆ. ಕೆಜಿಎಫ್ ಚಾಪ್ಟರ್ 1 ಹಾಗೂ 2 ಯಶಸ್ಸಿಗೆ ಪ್ರೇಕ್ಷಕರು ಸಾಕಷ್ಟು ಬೆಂಬಲ ನೀಡಿದ್ದಾರೆ. ಹೀಗಾಗಿ ನಮ ಬಗ್ಗೆ ಅವರು ಹೆಮೆ ಪಡಬೇಕು. ಆ ರೀತಿಯಲ್ಲಿ ಸಿನಿಮಾ ನಿರ್ಮಾಣ ವಾಗುತ್ತದೆ. ಶುಭಮನ್ ಗಿಲ್ ಅಲ್ಲದೆ ಹಲವು ಕ್ರಿಕೆಟಿಗರು ಹಾಗೂ ಸೆಲಬ್ರಿಟಿಗಳು ಈ ಬಗ್ಗೆ ಕೇಳುತ್ತಿದ್ದು, ಕೆಜಿಎಫ್ 3 ಚಿತ್ರವನ್ನು ನೋಡಲು ಕಾತರಿಸುತ್ತಿದ್ದಾರೆ’ ಎಂದು ಯಶ್ ಹೇಳಿದ್ದಾರೆ.

ಕೆಜಿಎಫ್ 3 ಚಿತ್ರದ ಕುರಿತು ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂಗದೂರು ಹಾಗೂ ನಟ ಯಶ್ ಅವರು ಚರ್ಚಿಸುತ್ತಿದ್ದು, ಅತಿಶೀಘ್ರವೇ ಅಭಿಮಾನಿಗಳಿಗೆ ಚಿತ್ರತಂಡದಿಂದ ಶುಭಸುದ್ದಿ ಸಿಗುವ ಸಾಧ್ಯತೆಗಳಿವೆ.

RELATED ARTICLES

Latest News