Thursday, October 24, 2024
Homeಮನರಂಜನೆ'ಯಲಾಕುನ್ನಿ' ಎನ್ನುತ್ತಾ ಈ ವಾರ ಚಿತ್ರಮಂದಿರಗಳಿಗೆ ಕೋಮಲ್‌ ಎಂಟ್ರಿ

‘ಯಲಾಕುನ್ನಿ’ ಎನ್ನುತ್ತಾ ಈ ವಾರ ಚಿತ್ರಮಂದಿರಗಳಿಗೆ ಕೋಮಲ್‌ ಎಂಟ್ರಿ

Yala Kunni Movie releasing this week

ಸೌಂದರ್ಯ ಸಿನಿ ಕಂಬ್ಸೃ್‌ ಹಾಗೂ ನರಸಿಂಹ ಸಿನಿಮಾಸ್‌‍ ಲಾಂಛನದಲ್ಲಿ ಅನುಸೂಯ ಕೋಮಲ್‌ ಕುಮಾರ್‌, ಸಹನ ಮೂರ್ತಿ ಅವರು ನಿರ್ಮಿಸಿರುವ ಹಾಗೂ ತಮ ಅಮೋಘ ಅಭಿನಯದ ಮೂಲಕ ಜನರ ಮನ ಗೆದ್ದಿರುವ ಕೋಮಲ್‌ ಕುಮಾರ್‌ ನಾಯಕರಾಗಿ ನಟಿಸಿರುವ ಹಾಗೂ ಹೊಸ ಪ್ರತಿಭೆ ಎನ್‌.ಆರ್‌.ಪ್ರದೀಪ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಯಲಾಕುನ್ನಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ಕೋಮಲ್ ಅವರು ಕನ್ನಡದ ಹೆಸರಾಂತ ನಟ ವಜ್ರಮುನಿ ಅವರ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೊಡ್ಡ ದೊಡ್ಡ ಕಲಾವಿದರ
ದಂಡೆ ಈ ಚಿತ್ರದಲ್ಲಿದೆ.

ದತ್ತಣ್ಣ , ಸಾಧು ಕೋಕಿಲ , ಮಿತ್ರ, ಸುಚೇಂದ್ರ ಪ್ರಸಾದ್‌ , ಶಿವರಾಜ್‌ ಕೆಆರ್‌ ಪೇಟೆ , ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್‌ ನಗರ್‌ಕರ್‌, ಮಾನಸಿ ಸುಧೀರ್‌(ಕಾಂತಾರ), ಜಗ್ಗೇಶ್‌ ಅವರ ದ್ವಿತಿಯ ಪುತ್ರ ಯತಿರಾಜ್‌ ಜಗ್ಗೇಶ್‌, ಜಯಸಿಂಹ ಮುಸುರಿ , ರಘು ರಾಮನಕೊಪ್ಪ, ಮಹಾಂತೇಶ್‌, ಬೌಬೌ ಜಯರಾಮ್‌, ನಿರ್ದೇಶಕ ಸಹನ ಮೂರ್ತಿ , ಭಜರಂಗಿ ಪ್ರಸನ್ನ, ತಿಥಿ ತಮಣ್ಣ, ಪ್ರದೀಪ್‌ ಪೂಜಾರಿ, ತೇಜಸ್‌‍, ಉಮೇಶ್‌ ಸಕ್ಕರೆ ನಾಡು ಮಂತಾದರವರ ತಾರಾಬಳಗವಿರುವ ಈ ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ಗಿಚ್ಚಿಗಿಲಿಯ ಅಮೃತಾ ಬಣ್ಣ ಹಚ್ಚಿದ್ದಾರೆ.

ವಿಶೇಷವಾಗಿ ವಜ್ರಮುನಿ ಯವರ ಮೊಮಗ ಆಕರ್ಶ್‌ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸುತ್ತಿದ್ದಾರೆ. ಮಯೂರ್‌ ಪಟೇಲ್‌ ಅವರು ಖಳ ನಾಯಕನಾಗಿ ನಟಿಸಿದ್ದಾರೆ.

ಸಂಪೂರ್ಣ ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರುವ ಯಲಾಕುನ್ನಿ ಸಿನಿಮಾಕ್ಕೆ ರಥಾವರ ಖ್ಯಾತಿಯ ಧರ್ಮ ವಿಶ್‌ ಸಂಗೀತ ನಿರ್ದೇಶನ, ದೀಪು ಎಸ್‌‍. ಕುಮಾರ್‌ ಸಂಕಲನ ಹಾಗೂ ಹಾಲೇಶ್‌ ಭದ್ರಾವತಿ ಅವರ ಛಾಯಾಗ್ರಹಣವಿದೆ. ಮುರಳಿ ಮಾಸ್ಟರ್‌ ನೃತ್ಯ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ನರಸಿಂಹ ಮಾಸ್ಟರ್‌ ಸಾಹಸ ಸಂಯೋಜನೆ ಮಾಡಿದ್ದಾರೆ. ಯಲಾಕುನ್ನಿ ಚಿತ್ರಕ್ಕೆ ಮೇರಾ ನಾಮ್‌ ವಜ್ರಮುನಿ ಎಂಬ ಅಡಿಬರಹವಿದೆ.

RELATED ARTICLES

Latest News