ಕೆಆರ್ ಪುರ, ಅ.24- ಬಾಬುಸಾ ಪಾಳ್ಯದ ಕಟ್ಟಡ ಕುಸಿತ ಜಾಗಕ್ಕೆ ಮಾಜಿ ಡಿಸಿಎಂಗಳಾದ ಆರ್.ಅಶೋಕ್, ಅಶ್ವಥ್ ನಾರಾಯಣ ಹಾಗೂ ಶಾಸಕ ಬೈರತಿ ಬಸವರಾಜ ಅವರು ಭೇಟಿ ನೀಡಿ ಪರಿಶೀಲಿಸಿದರು.ಬಳಿಕ ಮಾತನಾಡಿದ ಅಶೋಕ್, ಅಕ್ರಮ ಕಟ್ಟಡಗಳನ್ನು ಅಧಿಕಾರಿಗಳು ನಿಲ್ಲಿಸಿದ್ರೆ ಈ ರೀತಿ ದುರ್ಘಟನೆ ಆಗು ತ್ತಿರಲಿಲ್ಲ. ಬೆಂಗಳೂರಿನ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಅಧಿಕಾರಿಗಳೇ ನೇರ ಹೊಣೆ 2+1 ಗೆ ಅನುಮತಿ ಕೊಡಬೇಕು 7 ಅಂತಸ್ತು ಕಟ್ಟುವ ತನಕ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಬ್ರಾಂಡ್ ಬೆಂಗಳೂರು ಮಾಡ್ತೀವಿ ಅಂತಾರೆ ಮೊದಲು ರೆಗ್ಯುಲರ್ ಬೆಂಗಳೂರು ಮಾಡಲಿ, ಸಿಎಂ, ಡಿಸಿಎಂ ಬರ್ತಾರೆ ಅಂತ ಗೊತ್ತಿದ್ರು ಈ ಭಾಗದಲ್ಲಿ ಗುಂಡಿಗಳು ಮುಚ್ಚಿಲ್ಲ ಅಂದ್ರೆ ಇವರಿಗೇ ಎಷ್ಟು ಮಾತ್ರ ಮರ್ಯಾದೆ ಸಿಗುತ್ತಿದೆ ಅನ್ನೋದನ್ನು ಯೋಚನೆ ಮಾಡಬೇಕು ಎಂದು ಹೇಳಿದರು. ಅಕ್ರಮವಾಗಿ ಕಟ್ಟಡ ಕಟ್ಟಿರುವುದಲ್ಲದೆ ಕಳಪೆ ಮಟ್ಟದ ಕಾಮಗಾರಿ ಮಾಡಿರುವುದರಿಂದ ಈ ದುರ್ಘಟನೆ ನಡೆಸಿದ್ದು ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಂಗಳೂರನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ, ಮನೆಗಳಿಗೆ ನೀರು ನುಗ್ಗಿ ಮಕ್ಕಳು ಕೊಚ್ಚಿ ಹೋಗುವಂತದ್ದು ಮರ ಬಿದ್ದು ಸಾವು ನೋವಾಗುವುದನ್ನು ನಿಲ್ಲಿಸಲಿ ಎಂದು ಹೇಳಿದರು. ಬಾಬುಸಾಪಾಳ್ಯದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ , ಇನ್ನೊಂದು ಬಾಡಿ ಸಿಗಬೇಕು, ಎಸ್ ಡಿಆರ್ ಎಫ್ ತಂಡ ಕೆಲಸ ಮಾಡುತ್ತಿದೆ ಎಂದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಟ್ಟಡ ಕುಸಿತ ದುರಂತ ಆಗಿದೆ ಮೃತ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸರ್ಕಾರ ರಸ್ತೆಗಿಳಿದಿರುವುದು ರಾಜಕೀಯ ಮಾಡೋದಕ್ಕೆ ಜನರ ಸಮಸ್ಯೆ ಬಗೆಹರಿಸುವುದಕ್ಕಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬೈರತಿ ಬಸವರಾಜ, ಮಂಡಲ ಅಧ್ಯಕ್ಷ ಮುನೇಗೌಡ, ಮುಖಂಡರಾದ ಮುನಿಸ್ವಾಮಿ, ಗುರುಕಿರಣ್ ಮತ್ತಿತರರಿದ್ದರು.