Thursday, October 24, 2024
Homeಬೆಂಗಳೂರುಯಲಹಂಕ ಮೇಲ್ಸೇತುವೆ ಮೇಲೆ ಸರಣಿ ಅಪಘಾತ, 7 ಕಾರುಗಳು ಜಖಂ

ಯಲಹಂಕ ಮೇಲ್ಸೇತುವೆ ಮೇಲೆ ಸರಣಿ ಅಪಘಾತ, 7 ಕಾರುಗಳು ಜಖಂ

Serial accident on Yalahanka flyover, seven cars injured

ಬೆಂಗಳೂರು,ಅ.24- ಬೆಳ್ಳಂಬೆಳಗ್ಗೆ ಯಲಹಂಕ ಮೇಲ್ಸೇತುವೆ ಮೇಲೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಏಳು ಕಾರುಗಳು ಜಖಂ ಗೊಂಡಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಗರದಲ್ಲಿ ಸತತ ಮಳೆಯಿಂ ದಾಗಿ ಸಂಭವಿಸಿರುವ ಅವಘಡಗಳ ನಡುವೆಯೇ ಇತ್ತ ಯಲಹಂಕ ಮೇಲ್ಸೇತುವೆ ಮೇಲೆ ಇಂದು ಬೆಳಗ್ಗೆ 6.20ರ ಸುಮಾರಿನಲ್ಲಿ ಕಾರುಗಳು ಒಂದರ ಹಿಂದೆ ಒಂದರಂತೆ ತೆರಳುತ್ತಿದ್ದಾಗ ಏಕಾಏಕಿ ಸರಣಿ ಅಪಘಾತ ಸಂಭವಿಸಿದೆ

ಪರಿಣಾಮ ಕಾರುಗಳು ಗುದ್ದಿಕೊಂಡು ಏಳು ಕಾರುಗಳು ಜಖಂಗೊಂಡಿವೆ. ಒಂದು ಕಾರಿನಲ್ಲಿದ್ದ ಮಗುವಿನ ಕೈಗೆ ಗಂಭೀರ ಗಾಯವಾಗಿದ್ದು, ಅದೃಷ್ಟವಶಾತ್‌ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಯಲಹಂಕಕ್ಕೆ ತೆರಳುವ ಮುಖ್ಯ ರಸ್ತೆಯಲ್ಲೇ ಸರಣಿ ಅಪಘಾತ ಸಂಭವಿಸಿದ್ದರಿಂದ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಫ್ಲೈ ಓವರ್ ಮೇಲೆ ವಾಹನಗಳು ಸಾಲುಗಟ್ಟಿ ನಿಂತಿದ್ದಲ್ಲದೆ ನಿಧಾನಗತಿಯಲ್ಲಿ ಚಲಿಸುತ್ತಿದದ್ದು ಕಂಡುಬಂತು.

RELATED ARTICLES

Latest News