Friday, October 25, 2024
Homeರಾಷ್ಟ್ರೀಯ | Nationalಎನ್‌ಐಎ ವಾಂಟೆಡ್‌ ಲಿಸ್ಟ್‌ಗೆ ಅನ್ಮೋಲ್ ಬಿಷ್ಣೋಯ್‌ ಸೇರ್ಪಡೆ

ಎನ್‌ಐಎ ವಾಂಟೆಡ್‌ ಲಿಸ್ಟ್‌ಗೆ ಅನ್ಮೋಲ್ ಬಿಷ್ಣೋಯ್‌ ಸೇರ್ಪಡೆ

NIA announces bounty of Rs 10 lakh on Lawrence Bishnoi brother Anmol Bishnoi

ನವದೆಹಲಿ,ಅ.25- ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್‌ ಅವರ ಸಹೋದರ ಅನೋಲ್‌ ಬಿಷ್ಣೋಯ್‌ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮೋಸ್ಟ್‌ ವಾಂಟೆಡ್‌ ಪಟ್ಟಿಗೆ ಸೇರಿಸಿದೆ.ಬಾಲಿವುಡ್‌ ನಟ ಸಲಾನ್‌ ಖಾನ್‌ ಅವರ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಬೇಕಾಗಿರುವ ಅನೋಲ್‌ ಬಿಷ್ಣೋಯ್‌ ಬಂಧನಕ್ಕೆ ಭಯೋತ್ಪಾದನಾ ನಿಗ್ರಹ ಸಂಸ್ಥೆ 10 ಲಕ್ಷ ಬಹುಮಾನವನ್ನು ಘೋಷಿಸಿದೆ.

ಲಾರೆನ್‌್ಸ ಬಿಷ್ಣೋಯ್‌ ಪ್ರಸ್ತುತ ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗಹದಲ್ಲಿ ಬಂಧಿಯಾಗಿದ್ದಾರೆ – ಮತ್ತು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್‌ ಏಪ್ರಿಲ್‌ನಲ್ಲಿ ಮುಂಬೈನ ಖಾನ್‌ ಅವರ ಬಾಂದ್ರಾ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲ್ಪಟ್ಟ ವ್ಯಕ್ತಿಗಳಲ್ಲಿ ಸೇರಿದ್ದಾರೆ.

ಈ ಪ್ರಕರಣದಲ್ಲಿ ನವಿ ಮುಂಬೈ ಪೊಲೀಸರು ಐವರು ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರನ್ನು ಬಂಧಿಸಿದ್ದಾರೆ – ಧನಂಜಯ್‌ ಅಲಿಯಾಸ್‌‍ ಅಜಯ್‌ ಕಶ್ಯಪ್‌ ಅಲಿಯಾಸ್‌‍ ನಹ್ವಿ, ಗೌರವ್‌ ಭಾಟಿಯಾ, ವಾಸ್ಪಿ ಖಾನ್‌ ಅಲಿಯಾಸ್‌‍ ವಾಸಿಮ್‌ ಚಿಕ್ನಾ, ರಿಜ್ವಾನ್‌ ಖಾನ್‌ ಅಲಿಯಾಸ್‌‍ ಜಾವೇದ್‌ ಮತ್ತು ದೀಪಕ್‌ ಹವಾ ಸಿಂಗ್‌ ಅಲಿಯಾಸ್‌‍ ಜಾನ್‌ ಸೇರಿದ್ದಾರೆ.

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್‌ ಹತ್ಯೆ ಪ್ರಕರಣದಲ್ಲೂ ಅನೋಲ್‌ ಬಿಷ್ಣೋಯ್‌ ಹೆಸರು ಕೇಳಿಬಂದಿತ್ತು. 66 ವರ್ಷದ ಎನ್‌ಸಿಪಿ ನಾಯಕನನ್ನು ಅಕ್ಟೋಬರ್‌ 12 ರಂದು ಮುಂಬೈನಲ್ಲಿ ಅವರ ಶಾಸಕ ಪುತ್ರ ಜೀಶನ್‌ ಸಿದ್ದಿಕ್‌ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.

RELATED ARTICLES

Latest News