ಕೊಚ್ಚಿ, ಅ.29- ಕ್ರೈಸ್ತ ಸಮುದಾಯದ ಪ್ರಾರ್ಥನೆ ವೇಳೆ ಬಾಂಬ್ ದಾಳಿ ನಡೆದು ಒಬ್ಬರು ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯರ್ನಾಕುಲಂನಲ್ಲಿ ನಡೆದಿದೆ. ಇಂದು ಬೆಳಗ್ಗೆ ಯೆಹೋವನ ಸಾಕ್ಷಿ ಸಮಾವೇಶಕ್ಕಾಗಿ ಸಮುದಾಯ ಕೇಂದ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿತ್ತು. ಈ ವೇಳೆ ಈ ದಾಳಿ ನಡೆದಿದೆ ಎಂದು ಪೆಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಇದು ಉಗ್ರರ ಕೃತ್ಯ ಎಂದು ತಿಳಿದುಬಂದಿದ್ದು, ಸುಮಾರು ಮೂರು ಬಾರಿ ಸ್ಪೋಟ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ನಿನ್ನೆಯಷ್ಟೆ ಪ್ಯಾಲಸ್ಟೇನ್ ಬೆಂಬಲಿಸಿ ಬೃಹತ್ ರ್ಯಾಲಿ ನಡೆದಿತ್ತು. ಈ ನಡುವೆ ಇಂದು ಬೆಳಗ್ಗೆ ನಡೆದಿರುವ ಉಗ್ರರ ದಾಳಿ ಭಾರೀ ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಹಾಗೂ ಭದ್ರತಾ ಪಡೆಗಳು ಕೂಡ ದೌಡಾಯಿಸಿವೆ.
ಸರ್ಕಾರಿ ಸೇವೆ ಪರೀಕ್ಷೆಯಲ್ಲಿ ವಂಚನೆ : 10 ಜನರ ಬಂಧನ
ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ತಪಾಸಣೆ ವೇಳೆ ಸ್ಥಳೀಯವಾಗಿ ಸಿದ್ಧಪಡಿಸಿರುವ ಸ್ಪೋಟಕವನ್ನು ಈ ದಾಳಿಗೆ ಬಳಸಲಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ಕೇರಳದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಹಲವು ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ತನಿಖಾ ತಂಡ ಹಾಗೂ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿಗಳು ಕೂಡ ಕೇರಳಕ್ಕೆ ಭೇಟಿ ನೀಡಿದ್ದು, ಇದು ಪೂರ್ವ ನಿಯೋಜಿತ ಉಗ್ರರ ಕೃತ್ಯ ಎಂದು ಅಂದಾಜಿಸಿದೆ.
ಕಳೆದ ಶುಕ್ರವಾರದಿಂದ ಈ ಸಮಾವೇಶ ನಡೆಯುತ್ತಿದ್ದು, ಇಂದು ಅಂತಿಮಗೊಳ್ಳುತ್ತಿರುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮೂಲಗಳ ಪ್ರಕಾರ, ಒಂದು ಹಾಲ್‍ನಲ್ಲಿ ಅನೇಕ ಸ್ಪೋಟಗಳು ಸಂಭವಿಸಿವೆ. ಕೆಲ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಈಗ ದಕ್ಷಿಣ ಭಾರತದ ಹಲವು ರಾಜ್ಯಗಳಿಗೂ ಈಗ ಕೇಂದ್ರ ಸರ್ಕಾರ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದು, ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.