Saturday, October 26, 2024
Homeಅಂತಾರಾಷ್ಟ್ರೀಯ | Internationalಅಮೆರಿಕದಲ್ಲಿ ಆತಂಕ ಸೃಷ್ಟಿಸಿದ ಮೆಕ್‌ಡೊನಾಲ್ಡ್ ಬರ್ಗರ್

ಅಮೆರಿಕದಲ್ಲಿ ಆತಂಕ ಸೃಷ್ಟಿಸಿದ ಮೆಕ್‌ಡೊನಾಲ್ಡ್ ಬರ್ಗರ್

E. coli infections tied to McDonald's burgers rise to 75, US FDA says

ವಾಷಿಂಗ್ಟನ್,ಅ.26- ಅಮೆರಿಕದಲ್ಲಿ ಮೆಕ್‌ಡೊನಾಲ್ಡ್ ಬರ್ಗರ್ ಸೇವಿದ ಹಲವಾರು ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ತನ್ನ ಕ್ವಾರ್ಟರ್ ಪೌಂಡರ್ ಬರ್ಗರ್‌ಗಳು ಅಮೆರಿಕದ ಸುಮಾರು 10 ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದೆ.

ಈಗಾಗಲೆ ಒಬ್ಬರು ಸಾವನ್ನಪ್ಪಿದ್ದು,ಹಲವಾರು ಮಂದಿ ಅನೇಕ ಕಾಯಿಲೆಗಳಿಗೆ ಒಳಗಾಗಿದ್ದು, ಅಽಕಾರಿಗಳು ಈಗ ಆಹಾರ ಸುರಕ್ಷತೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ನಡುವೆ ಸಿಡಿಸಿ ತನಿಖೆಗೆ ಸರ್ಕಾರ ಆದೇಶ ನೀಡಿದೆ. ಈರುಳ್ಳಿ, ದನದ ಕೊಬ್ಬು ಸೇರಿ ಕೆಲವು ಹಾನಿಕಾರಕ ಪದಾರ್ಥಗಳು ಮೆಕ್‌ಡೊನಾಲ್ಡ್ ಬರ್ಗರ್‌ನಲ್ಲಿ ಕಂಡುಬಂದಿದ್ದು, ಈಗ ಎಲ್ಲಾ ಮಳಿಗೆಗಳನ್ನು ಮಚ್ಚಲಾಗಿದೆ. ಸುಮಾರು 50 ಪ್ರಕರಣಗಳು ವರದಿಯಾಗಿವೆ.

ಮೆಕ್‌ಡೊನಾಲ್ಡ್ ಕ್ವಾರ್ಟರ್ ಪೌಂಡರ್, ಬರ್ಗರ್‌ಗಳು ಅಮೆರಿಕದಲ್ಲಿ ಜನಪ್ರಿಯವಾಗಿದ್ದು, ಈಗ ವಿಶ್ವದಾದ್ಯಂತ ಇರುವ ಮೆಕ್‌ಡೊನಾಲ್ಡ್ ಸಮಸ್ಯೆ ಎದುರಿಸುತ್ತಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಆಹಾರ ಸುರಕ್ಷತೆ ಎಚ್ಚರಿಕೆಯನ್ನು ನೀಡಿವೆ.
ಕೊಲೊರಾಡೋ ಮತ್ತು ನೆಬ್ರಸ್ಕಾದಲ್ಲಿ ಹೆಚ್ಚಿನ ಕಾಯಿಲೆಗಳು ವರದಿಯಾಗಿವೆ. ಅನೇಕ ಬಾರಿ ವ್ಯಕ್ತಿಗಳು ಮೆಕ್ ಡೊನಾಲ್ಡ್ ಬರ್ಗರ್ ಸೇವಿಸುತ್ತಿದ್ದಾರೆಂದು ವರದಿಯಾಗಿದ್ದು, ತನಿಖೆ ಮಾಡುತ್ತಿದೆ. ಆದರೆ ಇನ್ನೂ ನಿರ್ದಿಷ್ಟ ಕಾರಣ ಗುರುತಿಸಿಲ್ಲ. ಈ ನಡುವೆ ಕೆಲವು ರಾಜ್ಯಗಳಲ್ಲಿ ಮೆಕ್‌ಡೊನಾಲ್ಡ್ ತಾಜಾ ಈರುಳ್ಳಿ ಮತ್ತು ಕ್ವಾರ್ಟರ್ ಪೌಂಡರ್ ಬೀಪ್ ಪ್ಯಾಟಿಗಳನ್ನು ಬಳಸುವುದನ್ನು ನಿಲ್ಲಿಸಿದೆ.

ಕೊಲೊರಾಡೋ, ಅಯೋವಾ, ಕಾನ್ಸಾಸ್, ಮಿಸೌರಿ, ಮೊಂಟಾನಾ, ನೆಬ್ರಸ್ಕಾ, ಒರೆಗಾನ್, ಉತಾಹ್, ವಿಸ್ಕಾನ್ಸಿನ್ ಮತ್ತು ವ್ಯಯೋಮಿಂಗ್‌ನಲ್ಲಿನ ಅಂಗಡಿಗಳಿಂದ ದೋಷಪೂರಿತ ಪೀಡಿತ ಪದಾರ್ಥಗಳನ್ನು ತೆಗೆದುಹಾಕಲಾಗಿದೆ. ಕ್ವಾರ್ಟರ್ ಪೌಂಡರ್ ಬರ್ಗರ್‌ಗಳು ಇತರ ರಾಜ್ಯಗಳಲ್ಲಿ ಲಭ್ಯವಿಲ್ಲದಿರಬಹುದು. ಆದನ್ನು ಬಳಸಬೇಡ ಆರೋಗ್ಯ ಸಮಸ್ಯೆ ಮೀರಿ ಹೋಗಬಹುದು ಎಂದು ಸಿಡಿಸಿ ಎಚ್ಚರಿಸಿದೆ.

ಕ್ವಾರ್ಟರ್ ಪೌಂಡರ್ ಬೀಪ್ ಪ್ಯಾಟೀಸ್ ಮತ್ತು ಈರುಳ್ಳಿಗಳ ರಾಸಾಯನಿಕ ಕ್ರಿಯೆ ಅಪಾಯ ಉಂಟುಮಾಡಬಹುದು ಎಂದು ಸಿಡಿಸಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆರಂಭಿಕ ಸಂಶೋಧನೆಗಳು ಮೂರು ವಿತರಣಾ ಕೇಂದ್ರಗಳಿಗೆ ಒಂದೇ ಕಡೆಯಿಂದ ಬರ್ಗರ್ ಪೂರೈಕೆ ಮಾಡಲಾಗಿದೆ. ಇ. ಕೋಲಿ ಸೋಂಕಿಗೆ ಒಳಗಾದ ಜನರು ತೀವ್ರವಾದ ಹೊಟ್ಟೆ ಸೆಳೆತ, ಅತಿಸಾರ, ಜ್ವರ ಮತ್ತು ವಾಂತಿಯನ್ನು ಅನುಭವಿಸಬಹುದು. ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಂಡ ಮೂರು ಅಥವಾ ನಾಲ್ಕು ದಿನಗಳ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಪ್ರಾರಂಭವಾಗುತ್ತವೆ. ಹೆಚ್ಚಿನವರು ಒಂದು ವಾರದೊಳಗೆ ಚೇತರಿಸಿಕೊಂಡರೂ, ಕೆಲವರು ಗಂಭೀರ ಮೂತ್ರಪಿಂಡದ ಸಮಸ್ಯೆಗಳನ್ನು ಬೆಳೆಸಿಕೊಳ್ಳಬಹುದು ಮತ್ತು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಅಮೆರಿಕದಲ್ಲಿ ಈಗ ಜನರು ಮೆಕ್‌ಡೊನಾಲ್ಡ್ ನಲ್ಲಿ ತಿನ್ನಲು ಹಿಂಜರಿಯುತ್ತಾರೆ, ಇದು ಕಂಪನಿಯ ಆದಾಯದಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದೆ. ಆದಾಗ್ಯೂ, ಆಹಾರ ದೈತ್ಯ ಸಂಸ್ಥೆಯಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಕಳೆದ ಡಿಸೆಂಬರ್ 2006ರಲ್ಲಿ ಅಮೆರಿದ ಐದು ರಾಜ್ಯಗಳಲ್ಲಿ 71 ಜನರು ಕೊಲಿ ಘಟನೆಯಿಂದ ಪ್ರಭಾವಿತರಾದರು. 53 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 8 ಮಂದಿ ಮೂತ್ರಪಿಂಡ ವೈಫಲ್ಯದಿಂದ ಬಳಲಿದರು. ಇನ್ನು ಬ್ಲೂ ಬೆಲ್ ಐಸ್‌ಕ್ರೀಮ್‌ನಿಂದ ಉಂಟಾಗುವ ಲಿಸ್ಟೀರಿಯೊಸಿಸ್ ಸಾಂಕ್ರಾಮಿಕ ರೋಗದಿಂದಾಗಿ, ಬ್ಲೂ ಬೆಲ್ ತನ್ನ ಎಲ್ಲಾ ಸರಕುಗಳನ್ನು 2015ರಲ್ಲಿ ಸ್ವಯಂಪ್ರೇರಣೆಯಿಂದ ಹಿಂಪಡೆಯಿತು. ಕನ್ಸಾಸ್ ಆಸ್ಪತ್ರೆಯಲ್ಲಿ ಐವರು ರೋಗಿಗಳು ಲಿಸ್ಟೇರಿಯಾದ ಸ್ಟೆನ್‌ನಿಂದ ಅಸ್ವಸ್ಥರಾಗಿದ್ದರು. ಇದು ಬ್ಲೂ ಬೆಲ್ ಐಸ್‌ಕ್ರೀಮ್ ಅಡ್ಡ ಪರಿಣಾಮ ಎಂದು ತಿಳಿದುಬಂದಿತ್ತು.

RELATED ARTICLES

Latest News