Sunday, October 27, 2024
Homeಬೆಂಗಳೂರುಕತ್ರಿಗುಪ್ಪೆಯಲ್ಲಿ14 ನೇ ಆವೃತ್ತಿಯ “ನಿಮ್ಮ ಪಾರ್ಕ್‌ನಲ್ಲಿ ಹಬ್ಬ”

ಕತ್ರಿಗುಪ್ಪೆಯಲ್ಲಿ14 ನೇ ಆವೃತ್ತಿಯ “ನಿಮ್ಮ ಪಾರ್ಕ್‌ನಲ್ಲಿ ಹಬ್ಬ”

ಬೆಂಗಳೂರು: ಅನ್‌ಬಾಕ್ಸಿಂಗ್‌ ಬೆಂಗಳೂರು ಕತ್ರಿಗುಪ್ಪೆಯ ಕೆ. ಎಸ್. ನರಸಿಂಹಸ್ವಾಮಿ ಪಾರ್ಕ್‌ನಲ್ಲಿ “ನಿಮ್ಮ ಪಾರ್ಕ್‌ನಲ್ಲಿ ಹಬ್ಬ” 14 ನೇ ಆವೃತ್ತಿಯನ್ನು ಪ್ರಸ್ತುತಪಡಿಸುತ್ತಿದೆ. ಈ ಆಚರಣೆಯಲ್ಲಿ ಮನರಂಜನೆ ಸೇರಿದಂತೆ ಅನೇಕ ಚಟುವಟಿಕೆಗಳು ನಡೆಯಲಿದ್ದು, ನಿಮ್ಮ ಇಡೀ ದಿನವನ್ನು ಲವಲವಿಕೆಯಿಂದ ಇರಿಸಲಿದೆ.

ಕತ್ರಿಗುಪ್ಪೆ ಆವೃತ್ತಿಯು ಪೆನ್ಸಿಲ್‌ಜಾಮ್‌ನ ಸಹಯೋಗದೊಂದಿಗೆ ಹೊರಾಂಗಣ ಸ್ಕೆಚಿಂಗ್ ಇರಲಿದೆ. ಜೊತೆಗೆ, ಬಿಎಲ್‌ಆರ್ ಆರ್ಟ್ ಕಲೆಕ್ಟಿವ್ ಮಕ್ಕಳಿಗಾಗಿ “ಕಲಾ ಕಾರ್ಯಾಗಾರ”ರವನ್ನು ಆಯೋಜಿಸಿದೆ. Q ಶಾಲಾ ವತಿಯಿಂದ ಸಿಟಿ ರಸಪ್ರಶ್ನೆ ನಡೆಯಲಿದ್ದು, ಆಗಮಿಸುವ ಪ್ರತಿಯೊಬ್ಬರೂ ಪಾಲ್ಗೊಳ್ಳಬಹುದು.
ತ್ವರಿತಾ ಆರ್ಟ್ಸ್ ಕಲೆಕ್ಟಿವ್ ವತಿಯಿಂದ ಯಕ್ಷಗಾನ ಕಾರ್ಯಾಗಾರವಿದ್ದು, ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲೆಗಳ ಅನನ್ಯ ಅನುಭವವನ್ನು ಪಡೆಯಬಹುದು.

ಇನ್ನು, ಸಂಜೆಯ ಸಮಯವನ್ನು ಇನ್ನಷ್ಟು ರಂಜನೀಯವಾಗಿ ಕಳೆಯಲು ವೆಸ್ನೆಸ್ ಬೈ ವೆಸ್ಟ್‌ಸೈಡ್ ವತಿಯಿಂದ ಆಯೋಜಿಸಿರುವ ಜುಂಬಾ ಸೆಶನ್ ನಲ್ಲಿ ಪಾಲ್ಗೊಳ್ಳಬಹುದು. ಅದರೊಟ್ಟಿಗೆ ರಕ್ಷಣಾ ಶ್ರೀಧರ್ ಅವರ ತಂಡದಿಂದ ಸಂಗೀತ ಕಚೇರಿಯಯೂ ಇರಲಿದ್ದು, ನಿಮ್ಮ ಮನಸ್ಸಿಗೆ ಮುದ ನೀಡುವ ಸಂಗೀತ ರಸಸಂಜೆಯನ್ನು ಕಳೆಯಬಹುದು. ಇದರೊಟ್ಟಿಗೆ ಇನ್ನೂ ಹಲವಾರು ಆಸಕ್ತಿದಾಯಕ ಮತ್ತು ಮನರಂಜನಾ ಚಟುವಟಿಕೆಗಳು ನಡೆಯಲಿವೆ. ಈ ಹಬ್ಬದಲ್ಲಿ ಪ್ರತಿಯೊಬ್ಬರು ಉಚಿತವಾಗಿ ಪಾಲ್ಗೊಳ್ಳಬಹುದು.

ದಿನಾಂಕ:ಭಾನುವಾರ, 27th ಅಕ್ಟೋಬರ್‌ 2024
ಸಮಯ: 4:00 PM – 8:00 PM
ಸ್ಥಳ: ಕೆ.ಎಸ್‌. ನರಸಿಂಹಸ್ವಾಮಿ ಪಾರ್ಕ್‌, ಕತ್ರಿಗುಪ್ಪೆ , ಬೆಂಗಳೂರು
RSVP
https://lu.ma/t0ytfhu0

RELATED ARTICLES

Latest News