Friday, November 22, 2024
Homeರಾಜ್ಯಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ : 1 ಸಾವಿರ ಹುದ್ದೆಗಳಿಗೆ 4.8 ಲಕ್ಷ ಅಭ್ಯರ್ಥಿಗಳ ಪೈಪೋಟಿ

ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ : 1 ಸಾವಿರ ಹುದ್ದೆಗಳಿಗೆ 4.8 ಲಕ್ಷ ಅಭ್ಯರ್ಥಿಗಳ ಪೈಪೋಟಿ

Village Administrator Recruitment Exam

ಬೆಂಗಳೂರು,ಆ.27– ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪರ್ಧಾತಕ ಪರೀಕ್ಷೆಗೆ ಇಂದು ರಾಜ್ಯಾದ್ಯಂತ ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು.

ಗ್ರಾಮ ಆಡಳಿತಾಧಿಕಾರಿಯ ಒಂದು ಸಾವಿರ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಗೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಾಜ್ಯಾದ್ಯಂತ ನಡೆದ ಈ ಪರೀಕ್ಷೆಗೆ 4.8 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದು, 1173 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್‌‍ ಬಂದೋಬಸ್ತ್‌ ಹಾಗೂ ಹಲವು ನಿಯಮಗಳನ್ನುಜಾರಿಗೊಳಿಸಲಾಗಿತ್ತು.

ಬೆಂಗಳೂರು ನಗರ ಗ್ರಾಮಾಂತರ ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು.

ಸೆಪ್ಟೆಂಬರ್‌ 26ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಒಎಂಆರ್‌ ಶೀಟ್‌ನಲ್ಲಿ ನೋಂದಣಿ ಸಂಖ್ಯೆ ಮತ್ತು ವರ್ಷನ್‌ ಕೋಡ್‌ ನಮೂದಿಸುವಾಗ ಸುಮಾರು 9 ಸಾವಿರ ಮಂದಿ ತಪ್ಪೆಸಗಿದ್ದು, ಇಂತಹ ತಪ್ಪು ಮರುಕಳಿಸಬಾರದೆಂಬ ಸಲುವಾಗಿ ಒಎಂಆರ್‌ ಶೀಟ್‌ ನೀಡಲಾಗಿದೆ.

ಅಭ್ಯರ್ಥಿಗಳು ಸರಿಯಾಗಿ ಅಭ್ಯಾಸ ಮಾಡಿಕೊಂಡು ಬರಬೇಕು. ಪುನಃ ಪುನಃ ತಪ್ಪುಗಳಾದರೆ ಅದಕ್ಕೆ ಪ್ರಾಧಿಕಾರ ಜವಾಬ್ದಾರಿ ಅಲ್ಲ ಎಂಬ ಸೂಚನೆಯನ್ನು ಈಗಾಗಲೇ ನೀಡಲಾಗಿದೆ.ಮಾದರಿ ಒಎಂಆರ್‌ ಶೀಟ್‌ನ್ನು ಪರೀಕ್ಷಾ ಕೇಂದ್ರಗಳಿಗೆ ತರದಂತೆ ಕೂಡ ಸಲಹೆ ಮಾಡಲಾಗಿತ್ತು. ಒಟ್ಟಾರೆ 1 ಸಾವಿರ ಹುದ್ದೆಗಳ ನೇಮಕಾತಿಗೆ 4 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

RELATED ARTICLES

Latest News