ಕೋಲ್ಕತ್ತಾ, ಅ.27- ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಭಾರತ-ಬಾಂಗ್ಲಾದೇಶ ಭೂ ಗಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ಪ್ರಯಾಣಿಕರ ಟರ್ಮಿನಲ್ ಮತ್ತು ಕಾರ್ಗೋ ಗೇಟ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದಾರೆ.
ಪೆಟ್ರಾಪೋಲ್‌ನಲ್ಲಿರುವ ಕ್ರಾಸಿಂಗ್ ದಕ್ಷಿಣ ಏಷ್ಯಾದ ಅತಿದೊಡ್ಡ ಭೂ ಬಂದರು ಮತ್ತು ಎರಡು ದೇಶಗಳ ನಡುವಿನ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಪ್ರಮುಖ ಗೇಟ್‌ವೇ ಆಗಿದೆ. ಅಮಿತ್ ಶಾ ಅವರು ಕಳೆದ ರಾತ್ರಿಯೇ ಇಲ್ಲಿಗೆ ಆಗಮಿಸಿದ್ದು, ಇಂದು ಬೆಳಿಗ್ಗೆ ಪೆಟ್ರಾಪೋಲ್‌ನಲ್ಲಿ ಪ್ರಯಾಣಿಕರ ಟರ್ಮಿನಲ್ ಮತ್ತು ಕಾರ್ಗೋ ಗೇಟ್ ಉದ್ಘಾಟಿಸಿದರು.
ಪೆಟ್ರಾಪೋಲ್ (ಭಾರತ)-ಬೆನಾಪೋಲ್ (ಬಾಂಗ್ಲಾದೇಶ) ಎರಡು ದೇಶಗಳ ನಡುವಿನ ಪ್ರಮುಖ ಭೂ ಗಡಿ ದಾಟುವಿಕೆಗಳಲ್ಲಿ ಒಂದಾಗಿದೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಭೂ-ಆಧಾರಿತ ವ್ಯಾಪಾರದ ಸುಮಾರು 70 ಪ್ರತಿಶತವು ಈ ಸೌಲಭ್ಯದ ಮೂಲಕ ಬಳಸಲಾಗುತ್ತಿದೆ ಇದನ್ನು ಗೃಹ ಸಚಿವಾಲಯದ ವಿಭಾಗವಾದ ಭಾರತದ ಭೂ ಬಂದರುಗಳ ಪ್ರಾಽಕಾರ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.
ಇದು ಭಾರತದ ಎಂಟನೇ ಅತಿದೊಡ್ಡ ಅಂತರಾಷ್ಟ್ರೀಯ ವಲಸೆ ಬಂದರು ಮತ್ತು ಭಾರತ ಮತ್ತು ಬಾಂಗ್ಲಾದೇಶದ ನಡುವೆ ವಾರ್ಷಿಕವಾಗಿ 23.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸುತ್ತದೆ. ದೃಢವಾದ ನಿರ್ಮಾಣ ಮತ್ತು ಸುಧಾರಿತ ತಾಂತ್ರಿಕ ವ್ಯವಸ್ಥೆಗಳೊಂದಿಗೆ, ಟರ್ಮಿನಲ್ ಎಲ್ಲಾ ಬಳಕೆದಾರರಿಗೆ ಸುರಕ್ಷತೆ, ದಕ್ಷತೆ ಮತ್ತು ಸೌಕರ್ಯದ ಭರವಸೆ ನೀಡಿದೆ.