Sunday, October 27, 2024
Homeರಾಷ್ಟ್ರೀಯ | Nationalಮನ್‌ ಕೀ ಬಾತ್‌ನಲ್ಲಿ ಕರ್ನಾಟಕದ 'ಡಿಜಿಟಲ್ ವಂಚನೆ' ಪ್ರಕರಣ ಪ್ರಸ್ತಾಪಿಸಿ ಜಾಗೃತಿ ಮೂಡಿಸಿದ ಪ್ರಧಾನಿ ಮೋದಿ

ಮನ್‌ ಕೀ ಬಾತ್‌ನಲ್ಲಿ ಕರ್ನಾಟಕದ ‘ಡಿಜಿಟಲ್ ವಂಚನೆ’ ಪ್ರಕರಣ ಪ್ರಸ್ತಾಪಿಸಿ ಜಾಗೃತಿ ಮೂಡಿಸಿದ ಪ್ರಧಾನಿ ಮೋದಿ

'Mann Ki Baat': PM Modi cautions against digital arrest scam

ನವದೆಹಲಿ,ಅ.27- ದೇಶದಲ್ಲಿ ಇತ್ತೀಚೆಗೆ ಸೈಬರ್‌ ಕ್ರೈಂ ವಂಚನೆ ಹಾಗೂ ಡಿಜಿಟಲ್‌ ಅರೆಸ್ಟ್‌ ಸೇರಿದಂತೆ ವಂಚನೆ ಮಾಡುವವರಿಂದ ಬರುವ ಕರೆಗಳಿಂದ ಆದಷ್ಟು ದೂರವಿರಿ ಎಂದು ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದ ಪ್ರಕರಣವೊಂದನ್ನು ಉಲ್ಲೇಖಿಸಿ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.

ಕರ್ನಾಟಕದ ವಿಜಯಪುರ ಜಿಲ್ಲೆಯ ಸಂತೋಷ ಎಂಬುವರಿಗೆ ಮುಂಬೈನಿಂದ ಕರೆ ಮಾಡಿ ನಾವು ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು ಎಂದು ಎದುರಿಸಿ ಬ್ಲಾಕ್‌ಮೇಲ್‌ ಮಾಡಿದ್ದರು.ಈ ಎಲ್ಲಾ ದೃಶ್ಯಾವಳಿಗಳನ್ನು ವಂಚನೆಗೊಳಗಾದ ಸಂತೋಷ ಮೊಬೈಲ್‌ನಲ್ಲಿ ತಮಗಾದ ಅನ್ಯಾಯನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಪ್ರಕರಣವನ್ನು ಉಲ್ಲೇಖಿಸಿದ ಮೋದಿಯವರು ಸೈಬರ್‌ ಕ್ರೈಂ ವಂಚನೆ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕೆಂದು ಮನವಿ ಮಾಡಿದರು.

ಮೂರನೇ ಬಾರಿಗೆ ಕೇಂದ್ರದಲ್ಲಿ ಪ್ರಧಾನಿಯಾದ ನಂತರ ತಮ ಬಹು ನೆಚ್ಚಿನ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದ 115 ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಸೈಬರ್‌ ಕ್ರೈಂ ವಂಚನೆ, ಡಿಜಿಟಲ್‌ ಅರೆಸ್ಟ್‌, ಪೊಲೀಸ್‌‍ ತನಿಖೆ ನೆಪದಲ್ಲಿ ವಿಡಿಯೋ ಕಾಲ್‌, ಪೊಲೀಸ್‌‍, ಸಿಬಿಐ, ಇಡಿ ಹೀಗೆ ಇನ್ನಿತರ ನೆಪಗಳನ್ನಿಟ್ಟುಕೊಂಡು ಕಾಲ್‌ ಮಾಡುತ್ತಾರೆ. ಕರ್ನಾಟಕದ ಪ್ರಕರಣ ಉಲ್ಲೇಖಿಸಿ, ನಿಮ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ. ಭಯದ ವಾತಾವರಣ ನಿರ್ಮಾಣ ಮಾಡಿ, ನಿಮನ್ನು ಹೆದರಿಸುತ್ತಾರೆ. ಅಂತಹ ಸಮಯದಲ್ಲಿ ವಿಡಿಯೋ ರೆಕಾರ್ಡ್‌ ಮಾಡಿಟ್ಟುಕೊಳ್ಳಿ.

ಡಿಜಿಟಲ್‌ ಅರೆಸ್ಟ್‌ ವಂಚನೆಗೆ ಎಲ್ಲ ವಯಸ್ಸಿನ ಜನರಿದ್ದಾರೆ. ಈ ಮೂಲಕ ತಮ ದುಡಿಮೆಯ ಹಣವನ್ನು ಕಳೆದುಕೊಳ್ಳುತ್ತಾರೆ. ಇಂತಹ ಕರೆ ಬಂದರೆ ಆತಂಕಗೊಳ್ಳಬೇಡಿ. ನಿಮ ಯಾವುದೇ ಮಾಹಿತಿಯನ್ನು ನೀಡಬೇಡಿ. ಸರ್ಕಾರಿ ತನಿಖಾ ಸಂಸ್ಥೆಗಳು ಹೀಗೆ ವಿಡಿಯೋ ಕರೆ ಮಾಡಿ ಬೆದರಿಕೆ ಹಾಕುವುದಿಲ್ಲ. ಇಂತಹ ಘಟನೆ ನಡೆದರೆ ರಾಷ್ಟ್ರೀಯ ಸೈಬರ್‌ ಕ್ರೈಂಗೆ ದೂರು ನೀಡಿ ಎಂದು ಸಲಹೆ ಮಾಡಿದರು.

ಡಿಜಿಟಲ್‌ ಅರೆಸ್ಟ್‌ ಎನ್ನುವುದು ಕಾನೂನಿನ ವ್ಯವಸ್ಥೆಯಲ್ಲಿಯೇ ಇಲ್ಲ. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರದ ಸಂಸ್ಥೆಗಳ ತನಿಖೆ ಮಾಡುತ್ತಿವೆ. ಇಂತಹ ಕಾಲ್‌ ಮಾಡುವುವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಹಾಗೂ ಅಂತವರ ಐಡಿ ಮತ್ತು ಸಿಮ್‌ ಬಂದ್‌ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಆನ್‌ಲೈನ್‌ನಲ್ಲಿ ನಡೆಯುತ್ತಿರುವ ವಂಚನೆ ಹಾಗೂ ವಂಚಕರ ವಂಚನೆ ವಿಧಾನಗಳ ಬಗ್ಗೆ ಪ್ರಧಾನಿಗಳು ಸಾಕಷ್ಟು ಮಾಹಿತಿ ನೀಡಿ, ಹುಷಾರಾಗಿರುವಂತೆ ಜನತೆಗೆ ಮೋದಿ ಕರೆ ನೀಡಿದರು.

ಡಿಜಿಟಲ್‌ ಅರೆಸ್ಟ್‌ ಅನ್ನೋ ಕಾನೂನು ಯಾವುದೂ ಇಲ್ಲ. ಕಾನೂನಿನಲ್ಲಿ ಡಿಜಿಟಲ್‌ ಅರೆಸ್ಟ್‌ ಅನ್ನೋ ವ್ಯವಸ್ಥೆಯೇ ಇಲ್ಲ. ಡಿಜಿಟಲ್‌ ಅರೆಸ್ಟ್‌ ಮಾಡಿದ್ದೇವೆ ಎನ್ನುವುದು ಬರೀ ಸುಳ್ಳು. ಕ್ರಿಮಿನಲ್‌ ಗ್ಯಾಂಗ್ಗಳು, ವಂಚಕರು ಮಾಡುವ ಕೆಲಸವದು ಎಂದು ಆನ್‌ಲೈನ್‌ ವಂಚನೆ ಹೇಗಿರುತ್ತದೆ ಎಂಬ ಬಗ್ಗೆ ನಿದರ್ಶನಗಳನ್ನೂ ಅವರು ನೀಡಿದರು.

ಪೊಲೀಸ್‌‍, ಸಿಬಿಐ, ನಾರ್ಕೋಟಿಕ್‌್ಸ, ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಫೋನ್‌ ಮಾಡಬಹುದು. ನಿಮ ಮಗಳು ದಿಲ್ಲಿಯಲ್ಲಿ ಓದುತ್ತಿದ್ದಾರೆ ಅಲ್ಲವೇ… ಹೀಗೆ ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ಪತ್ತೆ ಮಾಡುತ್ತಾರೆ. ನಿಮ ಮೇಲೆ ಕೇಸ್‌‍ ದಾಖಲಿಸಲಾಗುತ್ತಿದೆ ಇತ್ಯಾದಿ ಬೆದರಿಕೆ ಹಾಕಬಹುದು ಎಂದು ಅವರು ಉದಾಹರಣೆ ನೀಡಿದರು.

ಇದೇ ವೇಳೆ ಅನಿಮೇಷನ್‌ ಜಗತ್ತಿನಲ್ಲಿ ಭಾರತೀಯ ಪ್ರತಿಭೆಗಳು ಹೆಚ್ಚುತ್ತಿರುವ ಪ್ರಭಾವವನ್ನು ಶ್ಲಾಘಿಸಿದ ಪ್ರಧಾನಿ, ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ. ಅನಿಮೇಷನ್‌ ಜಗತ್ತಿನಲ್ಲಿ ೞಮೇಡ್‌ ಇನ್‌ ಇಂಡಿಯಾ ಮತ್ತು ೞಮೇಡ್‌ ಬೈ ಇಂಡಿಯಾ ಪ್ರಕಾಶಮಾನವಾಗಿ ಮಿಂಚುತ್ತಿದೆ.ಭಾರತದ ಕಾರ್ಟೂನುಗಳು ಈಗ ಜಾಗತಿಕವಾಗಿ ಜನಪ್ರಿಯವಾಗಿವೆ. ಗೇಮಿಂಗ್‌ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ ಎಂದರು.

ಅ.28ರಂದು ವರ್ಲ್‌್ಡ ಅನಿಮೇಶನ್‌ ಡೇ ಆಚರಿಸಲಾಗುತ್ತದೆ. ಭಾರತವನ್ನು ಜಾಗತಿಕ ಅನಿಮೇಶನ್‌ ಪವರ್‌ ಆಗಿ ಮಾಡಬೇಕು ಎಂದು ಮೋದಿ ಕರೆ ನೀಡಿದರು. ಭಾರತದಲ್ಲಿ ಸಂಕೀರ್ಣ ತಂತ್ರಜ್ಞಾನ ಬೆಳೆಸುವ ಮಾತು ಬಂದರೆ ಅಪಹಾಸ್ಯ ಮಾಡುತ್ತಿದ್ದ ಕಾಲ ಇತ್ತು. ಇವತ್ತು ತಂತ್ರಜ್ಞಾನ ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ. ಎಲ್ಲಾ ರೀತಿಯ ತಂತ್ರಜ್ಞಾನಗಳು ಭಾರತದಲ್ಲಿ ಸಿದ್ಧವಾಗುತ್ತಿವೆ. ಮೊಬೈಲ್‌ ಫೋನ್‌ ತಯಾರಿಕೆ ಆಗುತ್ತಿದೆ. ಮಿಲಿಟರಿ ಶಸಾ್ತ್ರಸ್ತ್ರಗಳು ಭಾರತದಲ್ಲಿ ತಯಾರಾಗುತ್ತಿವೆ. ಸ್ಪೇಸ್‌‍ ಟೆಕ್ನಾಲಜಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಈಗ ಆತನಿರ್ಬರ್‌ ಭಾರತ್‌ ಎಂಬುದು ಸರ್ಕಾರಿ ಯೋಜನೆಯಾಗಿ ಉಳಿದಿಲ್ಲ ಎಂದರು.

ಭಾರತದ ಸ್ಥಳೀಯ ಕಲಾಪ್ರಕಾರಗಳಾದ ಕ್ಯಾಲಿಗ್ರಫಿ, ಸಾರಂಗಿವಾದನ, ಚೆರಿಯಾಲ್‌ ಪೇಂಟಿಂಗ್‌ ಮೊದಲಾದವುಗಳನ್ನು ಉಳಿಸಿ, ಖ್ಯಾತಗೊಳಿಸುತ್ತಿರುವ ವಿವಿಧ ಪ್ರತಿಭೆಗಳನ್ನು ಮೋದಿ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ವಿದೇಶಗಳಲ್ಲಿ ಭಾರತೀಯ ಕಲೆಗಳು ಅರಳುತ್ತಿರುವುದನ್ನು ಹಲವು ಉದಾಹರಣೆಗಳ ಮೂಲಕ ತಿಳಿಸಿದರು. ರಷ್ಯಾದ ಯಾಕುಟ್ಸಕ್ನಲ್ಲಿ ಸ್ಥಳೀಯ ಕಲಾವಿದರಿಂದ ಕಾಳಿದಾಸರ ಅಭಿಜ್ಞಾನ ಶಾಕುಂತಲ ನಾಟಕ ಪ್ರದರ್ಶನ, ಲಾವೋಸ್ನಲ್ಲಿ ರಾಮಾಯಣ ಪ್ರದರ್ಶನ, ಕುವೇತ್ನಲ್ಲಿ ರಾಮಾಯಣ ಮಹಾಭಾರತವನ್ನು ಭಾಷಾಂತರಿಸಿರಿವುದು, ದಕ್ಷಿಣ ಅಮೆರಿಕದ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರದರ್ಶನಗಳು ನಡೆಯುತ್ತಿರುವುದನ್ನು ಅವರು ತಿಳಿಸಿದರು.

ವರ್ಚುವಲ್‌ ಟೂರಿಸಂ ಪ್ರಸಿದ್ಧವಾಗುತ್ತಿದೆ. ವಿಆರ್‌ ಸಹಾಯದಿಂದ ಜನರು ಈಗ ವರ್ಚುವಲ್‌ ಪ್ರವಾಸೋದ್ಯಮವನ್ನು ಮಾಡಬಹುದು. ಎಲ್ಲೋರಾದ ಗುಹೆಗಳನ್ನು ಜನರು ಮನೆಯಲ್ಲಿ ಕುಳಿತು ನೋಡಬಹುದು. ಅವರು ವಾರಣಾಸಿಯ ಘಾಟ್‌ಗಳನ್ನು ಅನ್ವೇಷಿಸಬಹುದು. ಇದರಿಂದಾಗಿ ಅವರು ನಿಜ ಜೀವನದಲ್ಲಿ ಈ ಸ್ಥಳಗಳನ್ನು ನೋಡಲು ಸ್ಫೂರ್ತಿ ಪಡೆಯುತ್ತಾರೆ ಎಂದು ತಿಳಿಸಿದರು.

ಭಾರತದಲ್ಲಿ ಫಿಟ್ನೆಸ್‌‍ ಬಗ್ಗೆ ಹೆಚ್ಚು ಜಾಗೃತಿ ಬಂದಿದೆ. ಪಾಕ್ರ್ಗಳಲ್ಲಿ ಹೆಚ್ಚಿನ ಜನರು ವ್ಯಾಯಮ ಮಾಡುವುದು ಕಂಡು ಬರುತ್ತಿದೆ. ಯೋಗ ದಿನದಲ್ಲೂ ಜನರ ಈ ಜಾಗೃತಿ ನನಗೆ ಕಂಡು ಬಂದಿದೆ. ಶಾಲೆಗಳಲ್ಲಿ ಮೊದಲ ಕ್ಲಾಸ್ನಲ್ಲಿಯೇ ಬೇರೆ ಬೇರೆ ಫಿಟ್ನೆಸ್‌‍ ವ್ಯಾಯಾಮ ಹೇಳಿಕೊಡ್ತಿದ್ದಾರೆ. ಇದರಿಂದ ಮಕ್ಕಳ ಹಾಜರಾತಿ ಹೆಚ್ಚುತ್ತಿದೆ, ವಿದ್ಯಾರ್ಥಿಗಳ ಜ್ಞಾನ ಕೇಂದ್ರೀಕೃತವಾಗಿದೆ. ಪೋಷಕರು ತಮ ಮಕ್ಕಳಿಗೆ ಪಾರಂಪರಿಕ ಆಟಗಳನ್ನು ಕಲಿಸುತ್ತಿದ್ದಾರೆ.

ಅ.31 ಸರ್ದಾರ್‌ ಪಟೇಲ್‌ ಜನದಿನವಿದೆ. ರನ್‌ ಫಾರ್‌ ಯೂನಿಟ್‌ ಆಯೋಜನೆ ಮಾಡಲಾಗಿದೆ. ದೇಶದ ಏಕತೆ ಮಂತ್ರದ ಜೊತೆಗೆ ಫಿಟ್ನೆಸ್‌‍ ಮಂತ್ರವನ್ನು ಜಪಿಸಿ ಎಂದು ಹುರುದುಂಬಿಸಿದರು. ಓಕಲ್‌ ಫಾರ್‌ ಲೋಕಲ್‌ ಮಂತ್ರವನ್ನು ನೆನಪಿಡಿ, ಸ್ಥಳೀಯ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಿ. ಎಲ್ಲರಿಗೂ ಚತ್‌ ಪೂಜಾ, ದೀಪಾವಳಿಯ ಶುಭಾಶಯಗಳು ಎಂದು ಶುಭ ಹಾರೈಸಿದರು.

RELATED ARTICLES

Latest News