Sunday, November 24, 2024
Homeರಾಷ್ಟ್ರೀಯ | Nationalಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ವಿವಿಧ ಸಂಘಟನೆಗಳ ಉಗ್ರರ ಸೆರೆ

ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ವಿವಿಧ ಸಂಘಟನೆಗಳ ಉಗ್ರರ ಸೆರೆ

Arrest of militants of various organizations who were extorting public

ಇಂಫಾಲ, ಅ.28 (ಪಿಟಿಐ) ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಇಂಫಾಲ ಕಣಿವೆ ಮೂಲದ ವಿವಿಧ ಉಗ್ರಗಾಮಿ ಸಂಘಟನೆಗಳ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

ಮಣಿಪುರದ ಇಂಫಾಲ ಪಶ್ಚಿಮ ಮತ್ತು ಬಿಷ್ಣುಪುರ್ ಜಿಲ್ಲೆಗಳಿಂದ ಕಂಗ್ಲೇ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್ ), ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ನೋಯಾನ್) ಮತ್ತು ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್ ) ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.

ಈ ಸಂಘಟನೆಗಳ ಉಗ್ರಗಾಮಿಗಳನ್ನು ಕ್ರಮವಾಗಿ ತೊಂಗಮ್ ನವೋಬಾ ಮೈತೆ (21) ಮತ್ತು ಹುಯಿಡ್ರೋಮ್ ಪ್ರಭಾಷ್ ಸಿಂಗ್ ಅಲಿಯಾಸ್ ನೋನಿಲ್ (23) ಎಂದು ಗುರುತಿಸಲಾಗಿದ್ದು, ಅವರನ್ನು ಇಂಫಾಲ ಪಶ್ಚಿಮ ಜಿಲ್ಲೆಯ ನಾರಂಕೋಂಜಿಲ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಕೆಸಿಪಿ (ಪೀಪಲ್ಸï ವಾರ್ ಗ್ರೂಪï)ಗೆ ಸೇರಿದ ಓಯಿನಮ್ ಅಮರ್ ಸಿಂಗ್ ಅಲಿಯಾಸ್ ಜಾಯ್ (47) ಎಂದು ಗುರುತಿಸಲಾದ ಮತ್ತೊಬ್ಬ ಉಗ್ರನನ್ನು ಬಿಷ್ಣುಪುರ್ ಜಿಲ್ಲೆ ಕೈಬುಲ್ ಚಿಂಗ್‌ಮೇರಾಂಗ್ ಮಯೈ ಲೈಕೈಯಲ್ಲಿ ಬಂಧಿಸಲಾಗಿದೆ. ಸಾರ್ವಜನಿಕರು ಮತ್ತು ವ್ಯಾಪಾರಿಗಳನ್ನು ಸುಲಿಗೆ ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

RELATED ARTICLES

Latest News