ಲಕ್ನೋ, ಅ.29- ಸೆಮಿಫೈನಲ್ ರೇಸ್‍ನಿಂದ ಹೊರಬಿದ್ದಿರುವ ಇಂಗ್ಲೆಂಡ್ ಹಾಗೂ ಪಾಯಿಂಟ್ಸ್ ಟೇಬಲ್‍ನಲ್ಲಿ 2ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಪರಸ್ಪರ ಕಾದಾಟ ನಡೆಸುತ್ತಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ನಾವು ಈ ಪಂದ್ಯವನ್ನು ಗೆಲ್ಲಲು ನಮ್ಮಿಂದ ಆಗುವ ಎಲ್ಲ ನ್ಯಾಯವನ್ನು ಸಲ್ಲಿಸುತ್ತೇವೆ. ಕ್ರೀಡಾಂಗಣದಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರ ಎದುರು ಆಡುವುದು ನಿಜಕ್ಕೂ ಸಂತಸಕರ ಸಂಗತಿಯಾಗಿದೆ. ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಆಸ್ಟ್ರೇಲಿಯಾ ವಿರುದ್ಧ ಆಡಿದ ಪ್ಲೇಯಿಂಗ್ 11ನೊಂದಿಗೆ ಅಖಾಡಕ್ಕೆ ಇಳಿಯುತ್ತಿದ್ದೇವೆ' ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಟಾಸ್ ಸಂದರ್ಭದಲ್ಲಿ ಹೇಳಿದ್ದಾರೆ. ನಮಗೆ 2 ಅಂಕ ತುಂಬಾ ಮುಖ್ಯ: ರೋಹಿತ್ ಶರ್ಮಾ
ನಾವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೆವೆ.
ಕೇರಳ ಬ್ಲಾಸ್ಟ್ : ರಾಜ್ಯದಲ್ಲೂ ಕಟ್ಟೆಚ್ಚರವಹಿಸಲು ಪೊಲೀಸರಿಗೆ ಪರಮೇಶ್ವರ್ ಸೂಚನೆ
ನಾವು ಇದುವರೆಗೂ ಆಡಿದ ಎಲ್ಲ ಪಂದ್ಯಗಳಲ್ಲೂ ಚೇಸಿಂಗ್ ವೇಳೆಯೇ ಗೆಲುವು ಸಾಧಿಸಿದ್ದೇವೆ. ಇದೊಂದು ಹೊಸ ಪಂದ್ಯವಾಗಿದ್ದು , ನಮ್ಮ ಸಾಮಥ್ರ್ಯವನ್ನು ತೋರಿಸುವುದು ಮುಖ್ಯ ಆಗುತ್ತದೆ. ಆದ್ದರಿಂದ ನಾವು ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ ಎಂಬುದು ಮುಖ್ಯ ಆಗುವುದಿಲ್ಲ.
ಪಂದ್ಯ ಗೆದ್ದು 2 ಅಂಕಗಳನ್ನು ಸಂಪಾದನೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ನಾವು ಉತ್ತಮ ಪ್ರದರ್ಶನ ತೋರಲು ಸಿದ್ಧವಾಗಿದ್ದೇವೆ. ನಾವು ಈಗ ನಿಂತಿರುವ ಜಾಗದಿಂದಲೇ ಉತ್ತಮ ಪ್ರದರ್ಶನ ತೋರಲು ಬಯಸುತ್ತೇವೆ. ಕಳೆದ ಪಂದ್ಯದಲ್ಲಿ ಇದ್ದ ಪ್ಲೇಯಿಂಗ್ 11ನೊಂದಿಗೆ ನಾವು ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದ್ದೇವೆ’ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.