ಬೆಂಗಳೂರು, ಅ.29– ಒಂದು ವೇಳೆ ಸಚಿವ ಜಮೀರ್ ಅಹಮದ್ ಖಾನ್ಗೆ ಪಾಕಿಸ್ತಾನ ಹಾಗೂ ಷರಿಯತ್ ಕಾನೂನು ಮುಖ್ಯ ಎನ್ನುವುದಾದರೆ ಅವರು ಭಾರತ ಬಿಟ್ಟು ಅಲ್ಲಿಗೆ ಹೋಗಲಿ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸವಾಲು ಹಾಕಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಇದ್ದುಕೊಂಡು ಇಲ್ಲಿನ ಸಂವಿಧಾನ, ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಇಸ್ಲಾಂ ಮುಖ್ಯ ಎನ್ನುವುದಾದರೆ ಕೂಡಲೇ ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಿ ನಮ ಅಭ್ಯಂತರವೇನಿಲ್ಲ ಎಂದು ಕಿಡಿಕಾರಿದರು.
ವಕ್‌್ಫ ಆಸ್ತಿ ಹೆಸರಲ್ಲಿ ರೈತರಿಗೆ ನೊಟೀಸ್ ಕೊಡುವುದನ್ನು ತಕ್ಷಣ ನಿಲ್ಲಿಸಬೇಕು. ಜಮೀರ್ ಅಹಮದ್ ಜಿಲ್ಲಾ ಪ್ರವಾಸ ಮಾಡಿ, ಅಧಿಕಾರಿಗಳಿಗೆ ಧಮಕಿ ಹಾಕಿ ನೊಟೀಸ್ ಕೊಡಬೇಕು ಎಂದು ಮೌಖಿಕ ಸೂಚನೆ ಕೊಟ್ಟಿದ್ದರು. ಬಳಿಕ ಇದೆಲ್ಲ ಶುರುವಾಗಿದೆ. ಈ ನೆಲದ ಆಸ್ತಿಯನ್ನು ನಮದು ಎಂದು ಹೇಳಲು ಅವಕಾಶ ಕೊಡುವುದಿಲ್ಲ ಎಂದರು.
ದಾನ ಕೊಟ್ಟಿದ್ದೇ ನಿಜವಾಗಿದ್ದರೆ ಸೂಕ್ತ ದಾಖಲೆ ಇದರೆ ಅದು ವಕ್ಫ್ ಆಸ್ತಿ ಆಗಲಿದೆ, ಸರ್ಕಾರ ಗ್ರ್ಯಾಂಟ್ ಕೊಟ್ಟರೂ ಅದು ವಕ್ಫ್ ಆಸ್ತಿ ಎಂದು ಪರಿಗಣಿಸಬಹುದು, ವಕ್‌್ಫ ಬೋರ್ಡ್ ಖರೀದಿಸಿದ್ರೆ ಅದು ವಕ್ಫ್ ಆಸ್ತಿ ಎಂದು ಹೇಳಬಹುದು. ಆದರೆ ಸ್ವಯಂಪ್ರೇರಿತವಾಗಿ ವಕ್‌್ಫ ಘೋಷಿಸಿಕೊಳ್ಳುವ ಆಸ್ತಿ ವಕ್ಫ್ ಆಸ್ತಿ ಆಗಲ್ಲ ಎಂದು ಹೇಳಿದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರೂ ಅದು ವಕ್‌್ಫ ಆಸ್ತಿ ಆಗುವುದಿಲ್ಲ. ದೇಶ ಬಿಟ್ಟು ಹೋದವರು ಜಮೀನು ಕೊಟ್ಟಿದ್ದರು ಅದು ಹೇಗೆ ಇವರದ್ದಾಗುತ್ತದೆ ಎಂದು ಪ್ರಶ್ನಿಸಿದರು.ವಿಜಯಪುರ ಅಲ್ಲದೇ ಈಗ ಯಾದಗಿರಿ, ಧಾರವಾಡದಲ್ಲೂ ನೊಟೀಸ್ ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳು ಸಂವಿಧಾನ ಪರ ಇದ್ದರೆ ವಕ್ಫ್ ಹೆಸರು ರದ್ದುಪಡಿಸಿ ರೈತರ ಹೆಸರು ನೋಂದಣಿ ಮಾಡಸಲಿ. ಇದು ಸಿಎಂಗೆ ಅಗ್ನಿಪರೀಕ್ಷೆ, ಸಿಎಂ ಸಂವಿಧಾನ ಪರ ಇದ್ದಾರೋ ಇಲ್ವೋ ಎಂಬುದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ವಿಜಯಪುರದ ವಿರಕ್ತ ಮಠ ಅಷ್ಟೇ ಅಲ್ಲ, ತಮಿಳುನಾಡಿನ ಅಗ್ರಹಾರಗಳೂ ನಮದೇ ಅನ್ನುತ್ತಿದ್ದಾರೆ. ಅಕ್ರಮವಾಗಿ ನೊಟಿಫಿಕೇಷನ್ ಮಾಡಿರುವುದನ್ನು ರದ್ದು ಪಡಿಸಲಿ. ರೈತರ ಜಮೀನು, ಪಿತ್ರಾರ್ಜಿತ ಆಸ್ತಿ, ಖರೀದಿಸಿದ ಆಸ್ತಿಗಳೆಲ್ಲ ವಕ್‌್ಫದು ಎನ್ನುತ್ತಿದ್ದಾರೆ. ವಕ್ಫ್ ವಿರುದ್ಧ ಕ್ರಮ ತಗೊಳ್ಳಲು ಧಮ್ ಇಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಳಮೀಸಲಾತಿಗೆ ನಿವೃತ್ತ ನ್ಯಾಯಮೂರ್ತಿಗಳ ಏಕಸದಸ್ಯ ಆಯೋಗ ರಚನೆಗೆ ನಿರ್ಧಾರದ ಕುರಿತು ಮಾತನಾಡಿದ ಸಿ.ಟಿ.ರವಿ, ನಮ ಅವಧಿಯಲ್ಲಿ ಮಾಧುಸ್ವಾಮಿ ಸಮಿತಿ ರಚಿಸಿದ್ದೆವು. ಅವರ ವರದಿ ಆಧರಿಸಿ 17% ಮೀಸಲಾತಿಗೆ ಒಳಮೀಸಲು ಹಂಚಿದ್ದೆವು. ಈಗ ಸರ್ಕಾರ ಮತ್ತೊಂದು ಸಮಿತಿ ಮಾಡುವ ಅಗತ್ಯ ಇರಲಿಲ್ಲ.ಇದು ಕಾಲಹರಣ ಮಾಡಲು ಸರ್ಕಾರ ಹುಡುಕೊಂಡಿರುವ ನೆಪ ಮಾತ್ರಎಂದು ವ್ಯಂಗ್ಯವಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಲ್ಲ ಅಧಿಕಾರಗಳನ್ನೂ ನೋಡಿದವರು. ಈ ವಯಸ್ಸಲ್ಲೂ ಚುನಾವಣೆಗಳನ್ನು ಅವರು ಗಂಭೀರವಾಗಿ ನೋಡುತ್ತಾರೆ. ನಮಗೆಲ್ಲ ಅವರು ಪ್ರೇರಣೆ ಎಂದು ಡಿ.ಕೆ.ಶಿವಕುಮಾರ್ ಅವರ ಹಗುರ ಹೇಳಿಕೆಗೆ ಸಿಟಿ ರವಿ ತಿರುಗೇಟು ನೀಡಿದರು.